ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ ಟ್ರಸ್ಟ್‌ ವತಿಯಿಂದ ಕಲ್ಲುಗುಡಿ ಈಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ

Feb 20, 2026 - 14:41
 0  248
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ  ಟ್ರಸ್ಟ್‌ ವತಿಯಿಂದ ಕಲ್ಲುಗುಡಿ ಈಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ

ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ವಿರಾಜಪೇಟೆ ತಾಲೂಕು ಮಾಯಮುಡಿ ವಲಯದ ಪೊನ್ನಪ್ಪಸಂತೆ ಕಾರ್ಯಕ್ಷೇತ್ರದ ಕಲ್ಲುಗುಡಿ ಈಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2,50,000 ಸಹಾಯ ಧನವನ್ನು ನೀಡಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಹರೀಶ್ ಪಿ. ಚೆಕ್ ಅನ್ನು ದೇವಸ್ಥಾನದ ಅಧ್ಯಕ್ಷ ಎ.ಎ ಪ್ರದೀಪ್ ಅವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಸದಸ್ಯರಾದ ಸೋಮಯ್ಯ ಕೆ.ಜಿ., ಮೊಣ್ಣಪ್ಪ ಬಿ.ಕೆ, ದಿನೇಶ್ ಬಿ.ಎ, ವಿನು ಚಂಗಪ್ಪ, ತರುಣ್ ತಿಮ್ಮಯ್ಯ, ರಾಕಿ ಚಂಗಪ್ಪ, ಎಂ.ಎ. ತಿಮ್ಮಯ್ಯ, ವಲಯ ಮೇಲ್ವಿಚಾರಕರಾದ ವಸಂತ್, ಒಕ್ಕೂಟದ ಅಧ್ಯಕ್ಷರಾದ ಸೀನಾ, ಸೇವಾ ಪ್ರತಿನಿಧಿ ಬಿಂದು, ಒಕ್ಕೂಟದ ಪದಾಧಿಕಾರಿಗಳಾದ ಉಷಾ, ಗೀತಾ, ಊರಿನ ಗ್ರಾಮಸ್ಥರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0