ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ರಾಜ್ಯ ಮಹಿಳಾ ಆಯೋಗದಿಂದ ಸೂಚನೆ
admincoorgdaily
ಮಡಿಕೇರಿ:ಮಹಿಳೆಯೊಬ್ಬರಿಗೆ ಅಪಮಾನ ಮಾಡಿ ಮಾನಸಿಕವಾಗಿ ಹಿಂಸೆ ನೀಡಿದ್ದರು ಮತ್ತು ವೈಯುಕ್ತಿಕ ಪೋಟೋವನ್ನು ಬಳಸಿ ತೇಜೋವಧೆ ಮಾಡಿದ ಆರೋಪ ಮತ್ತು ದೂರಿನ ಹಿನ್ನಲೆ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ನವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಹದಿನೈದು ದಿನಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕೊಡಗು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಬಹ್ಮಗಿರಿ ವಾರಪತ್ರಿಕೆಯ ಉಪ ಸಂಪಾದಕಿ ಉಳ್ಳಿಯಡ ಡಾಟಿ ಪೂವಯ್ಯ ನವರನ್ನು ಗುರಿಯಾಗಿಸಿ ಅಜ್ಜಿನಿಕಂಡ ಮಹೇಶ್ ನಾಚಯ್ಯ ನವರು ಮಹಿಳೆಯ ತೇಜೋವಧೆ ಮತ್ತು ಮಹಿಳೆಯ ಘನತೆಗೆ ಕುಂದು ತರುವ ಅವಾಚ್ಯ ನಿಂದನಾತ್ಮಕ ಪದ ಬಳಕೆಯ ವಾಕ್ಯ ಸಂದೇಶದ ಬರಹಗಳನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಹಿನ್ನಲೆಯಲ್ಲಿ ಡಾಟಿ ಪೂವಯ್ಯ ನವರು ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆಯನ್ನು ಗಣನೆಗೆ ತೆಗೆದು ಕೊಂಡ ಮಹಿಳಾ ಆಯೋಗ ಕಾನೂನು ಕ್ರಮ ಜರುಗಿಸಲು ನಿರ್ದೇಶನ ನೀಡಿದೆ.