ಸುಂದರನಗರ: 3ಲಕ್ಷ ರೂ ವೆಚ್ವದ ಕಾಂಕ್ರೀಟ್ ರಸ್ತೆ ಕಾಮಗಾರಿ ಪರಿಶೀಲನೆ

ಸುಂದರನಗರ: 3ಲಕ್ಷ ರೂ ವೆಚ್ವದ ಕಾಂಕ್ರೀಟ್ ರಸ್ತೆ ಕಾಮಗಾರಿ ಪರಿಶೀಲನೆ

ಕುಶಾಲನಗರ,ಡಿ23: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಯ ಸುಂದರನಗರದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಪರಿಶೀಲನೆ ನಡೆಸಿದರು.

 ಕೂಡುಮಂಗಳೂರು ಗ್ರಾ.ಪಂ‌ ನ ಸುಂದರನಗರದ ಮುಖ್ಯರಸ್ತೆಯಿಂದ ಸಮುದಾಯ ಭವನದವರೆಗೆ ಎನ್.ಡಿ.ಆರ್.ಎಫ್ ಅನುದಾನದಡಿ ೩ ಲಕ್ಷ ರೂ ವೆಚ್ವದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗಿದ್ದು, ಕಾಮಗಾರಿಯನ್ನು ಕೆ.ಬಿ.ಶಂಶುದ್ಧೀನ್ ಅವರು ಪರಿಶೀಲಿಸಿದರು. ಈ ಸಂದರ್ಭ ಮಾತನಾಡಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಮಾನ್ಯ ಶಾಸಕರು ಎನ್.ಡಿ.ಆರ್.ಎಫ್ ಅನುದಾನದಡಿ ಮೂರು ಲಕ್ಷ ರೂ ಅನುದಾನವನ್ನು ನೀಡಿದ್ದಾರೆ.

ಹಾಗೆಯೇ ಇನ್ನಷ್ಟು ಅನುದಾನ ನೀಡುವ ಭರವಸೆ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ವಾರ್ಡ್ ಅಭಿವೃದ್ಧಿಗೆ ಅನುದಾನ ನೀಡಿದ ಶಾಸಕರಿಗೆ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ‌.ಪಿ.ಶಶಿಧರ್ ಅವರಿಗೆ ಧನ್ಯವಾದಗಳು ಎಂದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ತಂಬಿ ಹಾಗೂ ಗ್ರಾಮದ ಪ್ರಮುಖರು ಇದ್ದರು.