ಸುಂಟಿಕೊಪ್ಪ; ಸಾಮಗ್ರಿಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಯಿಂದ ‌ಹತ್ತು‌ ಸಾವಿರ ರೂ ನಗದು ಎಗರಿಸಿ‌ದ ಕಳ್ಳರು

Jun 7, 2026 - 06:38
Jun 7, 2026 - 07:01
 0  939
ಸುಂಟಿಕೊಪ್ಪ; ಸಾಮಗ್ರಿಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಯಿಂದ ‌ಹತ್ತು‌ ಸಾವಿರ ರೂ ನಗದು ಎಗರಿಸಿ‌ದ ಕಳ್ಳರು

 ಸುಂಟಿಕೊಪ್ಪ: ಗ್ರಾಹಕರ ಸೋಗಿನಲ್ಲಿ ಬಂದ ಮೂವರು ವ್ಯಕ್ತಿಗಳು ಅಂಗಡಿಯ ಡ್ರಾಯರ್ ನಲ್ಲಿದ್ದ ನಗದು ಹಣವನ್ನು ಅಪಹರಿಸಿ ಪರಾರಿಯಾದ ಘಟನೆ ಇಲ್ಲಿ‌ನ ಆಸ್ಪತ್ರೆ ರಸ್ತೆಯಲ್ಲಿರುವ ಅಕ್ಷತಾ ಭಂಡಾರದಲ್ಲಿ ಶನಿವಾರ ಮದ್ಯಾಹ್ನ ನಡೆದಿದೆ.

ಅಂಗಡಿ ಬಂದ ಮೂವರು ವಿದ್ಯಾರ್ಥಿಗಳ ವಸತಿ ಗೃಹಕ್ಕೆ ಸಾಮಾಗ್ರಿಗಳು ಬೇಕಾಗಿದೆ ಎಂದು ಮಾಲೀಕರನ್ನು ಮಾತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಗ್ರಿಗಳನ್ನು ಖರೀದಿಸುವ ನೆಪದಲ್ಲಿ ಮಾಲೀಕರ ಗಮನವನ್ನು ಬೇರೆಡೆ ಸೆಳೆದು ಕೌಂಟರ್‌ನಲ್ಲಿ ಇರಿಸಲಾಗಿದ್ದ ಪರ್ಸ್ ಅನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ.

ಕಳುವಾದ ಪರ್ಸ್‌ನಲ್ಲಿ ಸುಮಾರು ರೂ.10,000 ನಗದು, ಎಟಿಎಂ ಕಾರ್ಡ್‌ಗಳು, ಪಾನ್ ಕಾರ್ಡು ಹಾಗೂ ಇತರೆ ಪ್ರಮುಖ ದಾಖಲಾತಿಗಳು ಇದ್ದವು ಎಂದು ಅಂಗಡಿ ಮಾಲೀಕರಾದ ಭವಾನಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಹಕರ ವೇಷದಲ್ಲಿ ಬಂದು ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಠಾಣೆ ಸಮೀಪದಲ್ಲಿ ಈ ಕಳ್ಳತನ ನಡೆದಿದೆ. ಇಂತಹ ಪ್ರಕರಣಗಳನ್ನು ಕೂಡಲೇ ಪೊಲೀಸ್ ಇಲಾಖೆ ಕಾರ್ಯಚರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0