ಲೈಂಗಿಕ ಸಮಸ್ಯೆ ಪರಿಹಾರ ನೆಪದಲ್ಲಿ ಟೆಕ್ಕಿಗೆ 48 ಲಕ್ಷ ರೂ. ಟೋಪಿ; ನಕಲಿ ಔಷಧಿಯಿಂದ ಕಿಡ್ನಿಗೂ ಹಾನಿ! | ಅಬ್ಬಬ್ಬಾ... ಒಂದು ಗ್ರಾಂ ಔಷಧಿಗೆ 1.60 ಲಕ್ಷ ರೂಪಾಯಿಯಂತೆ!

Nov 23, 2025 - 13:49
 0  770
ಲೈಂಗಿಕ ಸಮಸ್ಯೆ ಪರಿಹಾರ ನೆಪದಲ್ಲಿ ಟೆಕ್ಕಿಗೆ 48 ಲಕ್ಷ ರೂ. ಟೋಪಿ; ನಕಲಿ ಔಷಧಿಯಿಂದ ಕಿಡ್ನಿಗೂ ಹಾನಿ!  |  ಅಬ್ಬಬ್ಬಾ... ಒಂದು ಗ್ರಾಂ ಔಷಧಿಗೆ 1.60 ಲಕ್ಷ ರೂಪಾಯಿಯಂತೆ!
Photo credit: TV09 (ಸಾಂದರ್ಭಿಕ ಚಿತ್ರ)

ಬೆಂಗಳೂರು, ನ. 23: ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಟೆಕ್ಕಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಗರದಲ್ಲಿ ಬಯಲಾಗಿದ್ದು, ಸಂತ್ರಸ್ತಗೆ ನೀಡಿದ ಆಯುರ್ವೇದ ಔಷಧಿಯಿಂದ ಕಿಡ್ನಿಗೂ ಹಾನಿಯಾಗಿರುವುದು ಬೆಳಕಿಗೆ ಬಂದಿದೆ.

ವಂಚನೆಗೊಳಗಾದ ಟೆಕ್ಕಿಯನ್ನು ತೇಜಸ್ ಎಂದು ಗುರುತಿಸಲಾಗಿದೆ. ಈ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

ಕೆಂಗೇರಿ ನಿವಾಸಿ ತೇಜಸ್ ಸನೈರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ ಆಸ್ಪತ್ರೆ ಬಳಿ ಹಾಕಲಾಗಿದ್ದ ‘ಲೈಂಗಿಕ ಸಮಸ್ಯೆಗೆ ಪರಿಹಾರ’ ಬೋರ್ಡ್ ಗಮನ ಸೆಳೆಯಿತು. ಅದನ್ನು ವಿಚಾರಿಸಲು ಹೋದ ತೇಜಸ್‌ ಗೆ ವಿಜಯ್ ಗುರೂಜಿ ಎಂಬಾತ ಚಿಕಿತ್ಸೆ ಭರವಸೆ ನೀಡಿ, ‘ ಔಷಧೀಯ ಹೆಸರು ಹೇಳಿ ಅದನ್ನು ಯಶವಂತಪುರದ ‘ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್’ನಿಂದ ಮಾತ್ರ ಖರೀದಿ ಮಾಡಬೇಕೆಂದು ಒತ್ತಾಯಿಸಿದ್ದಾನೆ.

ಒಂದು ಗ್ರಾಂ ಔಷಧಿಗೆ 1.60 ಲಕ್ಷ ರೂ. ಬೆಲೆ ಎಂದು ಹೇಳಿದ ಆರೋಪಿಯ ಮಾತು ನಂಬಿದ ತೇಜಸ್ ಆರಂಭದಲ್ಲಿ 17 ಲಕ್ಷ ರೂ. ಖರ್ಚು ಮಾಡಿದ್ದು, ಬಳಿಕ ಹಣದ ಕೊರತೆಯಿಂದ HDFC ಬ್ಯಾಂಕ್‌ನಿಂದ 20 ಲಕ್ಷ ರೂ. ಸಾಲ ಪಡೆದು ಒಟ್ಟು 18 ಗ್ರಾಂ ಔಷಧ ಖರೀದಿ ಮಾಡಿದ್ದಾರೆ. ಆನ್‌ಲೈನ್ ಪಾವತಿ ಬೇಡ, ಯಾರನ್ನೂ ಜೊತೆ ತರುವಂತಿಲ್ಲ ಎಂಬ ಷರತ್ತನ್ನೂ ವಿಧಿಸಿದ್ದಾನೆ ಎನ್ನಲಾಗಿದೆ.

ಔಷಧ ಸೇವನೆಯ ನಂತರ ಆರೋಗ್ಯ ಹದಗೆಟ್ಟ ತೇಜಸ್ ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಹಾನಿಯಾಗಿರುವುದು ವೈದ್ಯರು ತಿಳಿಸಿದ್ದರು. ಚಿಕಿತ್ಸೆ ನಿಲ್ಲಿಸಿದರೆ ಸಮಸ್ಯೆ ಹೆಚ್ಚಾಗುತ್ತದೆ ಎಂದು ಆರೋಪಿಗಳು ಬೆದರಿಕೆ ಹಾಕಿದ್ದರೂ, ಕೊನೆಗೆ ವಂಚನೆ ಅರಿತ ತೇಜಸ್ ಪೊಲೀಸರು ಮೊರೆ ಹೋದರು. 

ಜ್ಞಾನಭಾರತಿ ಪೊಲೀಸರು ವಿಜಯ್ ಗುರೂಜಿ ಹಾಗೂ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಲೈಂಗಿಕ ಸಮಸ್ಯೆ ಪರಿಹಾರ ಹೆಸರಲ್ಲಿ ನಡೆಯುತ್ತಿರುವ ಮೋಸ ಜಾಲಕ್ಕೆ ಇದು ಹೊಸ ಉದಾಹರಣೆಯಾಗಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0