Kodagu

ಆನೆಕಾಡು ಬಳಿ‌ ಭೀಕರ ರಸ್ತೆ ಅಪಘಾತ:ಕೊಡಗಿನ ‌ಕಲಾವಿದ ದುರ್ಮರಣ

admincoorgdaily

ಆನೆಕಾಡು ಬಳಿ‌ ಭೀಕರ ರಸ್ತೆ ಅಪಘಾತ:ಕೊಡಗಿನ ‌ಕಲಾವಿದ ದುರ್ಮರಣ

ಕುಶಾಲನಗರ, ಏ 12: ಕನ್ನಡ ಸೇರಿದಂತೆ ಹಲವು ಭಾಷೆಯ ಚಲನಚಿತ್ರ, ಕಿರು ಚಿತ್ರಗಳಲ್ಲಿ ನಟಿಸಿದ್ದ ಕೊಡಗಿನ ಕಲಾವಿದ 7ನೇ ಹೊಸಕೋಟೆಯ ಕಲ್ಲೂರಿನ ಹರೀಶ್ (42) ಅಪಘಾತದಲ್ಲಿ ನಿಧನರಾದರು.

ಕಲ್ಲೂರಿನ ಮನೆಗೆ ಕಾರಿನಲ್ಲಿ ರಾತ್ರಿ ತೆರಳುತ್ತಿದ್ದ ಸಂದರ್ಭಆನೆಕಾಡಿನ ಹೆದ್ದಾರಿಯಲ್ಲಿ ರಿಪೇರಿಯಾಗಿ ನಿಂತಿದ್ದ ಗೊಬ್ಬರ ತುಂಬಿದ್ದ ಲಾರಿಗೆ ಹಿಂದಿನಿಂದ ವ್ಯಾಗನಾರ್‌ ಕಾರು ಡಿಕ್ಕಿಯಾಗಿ ಹರೀಶ್ ಸ್ಥಳದಲ್ಲೇ ಮೃತರಾದರು. ಕುಶಾಲನಗರ ಭಾಗದಲ್ಲಿ ಹರೀಶ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಕ್ರಿಯರಾಗಿದ್ದರು.