ಕೊಡಗಿನ ಭೂ ಮತ್ತು ನಿವೇಶನ ರಹಿತ ಕುಟುಂಬಗಳ ಬದುಕಿಗೆ ಶಾಸಕರ ಜನ ನಾಯಕತ್ವ ಕಾರ್ಯಗಳು ಶ್ಲಾಘನೀಯ: ಕೆ.ಮೊಣ್ಣಪ್ಪ

ಕೊಡಗಿನ ಭೂ ಮತ್ತು ನಿವೇಶನ ರಹಿತ ಕುಟುಂಬಗಳ ಬದುಕಿಗೆ ಶಾಸಕರ ಜನ ನಾಯಕತ್ವ ಕಾರ್ಯಗಳು ಶ್ಲಾಘನೀಯ: ಕೆ.ಮೊಣ್ಣಪ್ಪ

ಅಮ್ಮತ್ತಿ: ಕೊಡಗಿನ ಭೂ ಮತ್ತು ನಿವೇಶನ ರಹಿತ ಬಡ ಕೂಲಿ ಕಾರ್ಮಿಕರ ಕುಟುಂಬಗಳ ಬದುಕಿಗೆ ವಿರಾಜಪೇಟೆ ಶಾಸಕರರಾದ ಎ. ಎಸ್ ಪೊನ್ನಣ್ಣ ಅವರು ಮಾಡುತ್ತಿರುವ ಜನ ನಾಯಕತ್ವ ಕಾರ್ಯಗಳು ಯುವ ಜನತೆಗೆ ಮಾದರಿಯಾಗುತ್ತಿದೆ. ಕೊಡಗಿನಂತಹ ಕುಖ್ಯಾತ ಜಿಲ್ಲೆಗೆ ಇಂತಹ ಶಾಸಕರ ಅಗತ್ಯವಿದೆ ಎಂದು ಬಹುಜನ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ. ಮೊಣ್ಣಪ್ಪ ಅವರು ಪ್ರಸಂಶಿಸಿದರು.

 ಇಂದು ವಿರಾಜಪೇಟೆಯ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಕೊಡಗಿನ ಕಟ್ಟ ಕಡೆಯ ಜನಾಂಗದ ಧ್ವನಿ ನ್ಯಾಯವಾದಿ ತೀಕ್ಷ್ಣ ಮಾತಿನ ಚತುರ ಬಡವರ ಜೀವಾಳವಾಗಿದ್ದ ಮಾನ್ಯ ಶ್ರೀ. ಎ.ಕೆ ಸುಬ್ಬಯ್ಯ ಅವರ ಪ್ರತಿ ರೂಪದಂತೆ ಭಾಷವಾಗುತ್ತಿರುವ ತಂದೆಗೆ ತಕ್ಕ ಮಗನೆನಿಸಿರುವ ಕೊಡಗಿನ ಜನಪರ ನಾಯಕರಾಗಿರುವ ಮಾನ್ಯ ಶಾಸಕರಾಗಿರುವ . ಎ. ಎಸ್ ಪೊನ್ನಣ್ಣ ಅವರಿಗೆ ಕೊಡಗಿನ ನಿವೇಶನ ರಹಿತ ಭೂ ರಹಿತ ಶೋಷಿತರ ಪರವಾಗಿ ಮತ್ತು ಬಹುಜನ ಕಾರ್ಮಿಕರ ಸಂಘಟನೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು. ಬಳಿಕ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರುಷಗಳಾಗಿದ್ದರು, ಸಂವಿಧಾನದ ಆಶಯದಂತೆ ಸಮಾನತೆ ಕಂಡು ಹರಿಯದ ಅಸಮಾನತೆಯ ಬೇಗೆಯಲ್ಲಿ ದಲಿತ,ಶೋಷಿತ,ಸಮೂದಾಯಗಳು ದುಡಿಯಲು ಭೂಮಿ ಇಲ್ಲ,ಮಲಗಲು ಸೂರು ಇಲ್ಲ, ಸತ್ತರೆ ಹೂಲಳು ಸ್ಮಶಾನವಿಲ್ಲ ತಮ್ಮ ಪರಿವಾರಕ್ಕೆ ಆದ ಅನ್ಯಾಯವನ್ನು ಕೇಳಲು ಸಾಧ್ಯವಿಲ್ಲದ ಕೊಡಗಿನಂತಹ ಕುಖ್ಯಾತ ಜಿಲ್ಲೆಯಲ್ಲಿ ಶೋಷಿತರ ಧ್ವನಿಯಾಗಿ ಬಡವರಿಗೆ ನೆರಳಾಗಿ ದಾರಿ ದೀಪವಾಗಿ ಬೆಳಗಿದ ಮತ್ತು ಸ್ವತಂತ್ರ್ಯದ 8ನೇ ದಶಕದ ಕಾಲಘಟ್ಟದಲ್ಲಿ ಸಂವಿಧಾನ ಸಮಾನತೆಯ ಸಂದೇಶಕ್ಕೆ ಅರ್ಥ ಕಲ್ಪಿಸುವ ನಿಟ್ಟಿನಲ್ಲಿ 2023 ನೇಯ ಚುನಾವಣೆಯಲ್ಲಿ ಕೊಡಗಿನ ಜನತೆಗೆ ಉತ್ತಮ ಜನ ನಾಯಕರಾಗಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದು, ಈ ಹಿಂದೆ 25 ವರುಷಗಳಿಂದ ಕೊಡಗಿನಲ್ಲಿ ಜಾತಿ ಧರ್ಮಗಳ ಆಧಾರದಲ್ಲಿ ಕೊಡಗನ್ನು ಆಳಿ ಮೆರೆದ ಜಾತಿವಾದಿ ಧರ್ಮವಾದಿಗಳನ್ನು ಪತನಗೊಳಿಸಿ, ಕೊಡಗಿನ ಎರಡು ಕ್ಷೇತ್ರಗಳಿಂದ ಕಾಂಗ್ರೇಸ್ ಪಕ್ಷದ ಯುವ ಜನ ನಾಯಕರಾಗಿ ಹೊರ ಹೊಮ್ಮಿದ ಜನಾರೋಗ್ಯ ಜನ ನಾಯಕರಾಗಿ ಕೊಡಗಿಗೆ ಮತ್ತು ಯುವಜನತೆಯ ಕನಸಿಗೆ ಮಾರ್ಗದರ್ಶಿಗಳಾಗಿರುತ್ತಾರೆ ಎಂದು ತಿಳಿಸಿದರು. ಇದೀಗಾ ನೂರಾರು ವರುಷಗಳಿಂದ ಜೀತ ದಾಳುಗಳಾಗಿ, ಧ್ವನಿ ಹೀನರಾಗಿ ಪ್ರಾಣಿಗಳಿಗಿಂತಲೂ ಹೀನಾಯವಾಗಿ ಸ್ವತಂತ್ರ್ಯದ ಅರ್ಥಗಳೇ ಅರಿಯದ ಆದಿವಾಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬದುಕಿನ ಕನಸುಗಾರರಾಗಿ ತಮ್ಮ ತಂದೆಯವರ ಕನಸನ್ನು ನನಸು ಮಾಡುವ ಸಲುವಾಗಿ ವಿರಾಜಪೇಟೆ ಕ್ಷೇತ್ರದಲ್ಲಿ 1559 ಆದಿವಾಸಿ ಕುಟುಂಬಗಳ ಬಾಳಿಗೆ ಬೆಳಕಾಗಿ ನಿಂತು ನಿವೇಶನ ಹಕ್ಕು ಪತ್ರಗಳನ್ನು ಕೊಡಿಸಲು ಮತ್ತು ಇಪ್ಪತ್ತು ಸಾವಿರಕ್ಕೂ ಹೆಚ್ಚು ಬಡ ಕೂಲಿ ಕಾರ್ಮಿಕರು ನಿವೇಶನ ರಹಿತರಾಗಿರುವುದನ್ನು ಸೂಕ್ತ ರೀತಿಯಲ್ಲಿ ಗಮನಿಸಿರುವುದು ಮೆಚ್ಚುಗೆಯ ವಿಚಾರವಾಗಿದೆ.

 ಈ ಸಂದರ್ಭದಲ್ಲಿ ನಮ್ಮ ಬಹುಜನ ಕಾರ್ಮಿಕರ ಸಂಘಟನೆಯು ಕೊಡಗಿನ ಐದು ತಾಲೂಕುಗಳಲ್ಲಿಯೂ ಬಹಳಷ್ಟು ಬಡವರು ಭೂ ಮಾಲಿಕರ ಶ್ರೀಮಂತರ ಸಾಲು ಲೈನ್ ಮನೆಗಳಲ್ಲಿ ವಾಸ ಮಾಡುತ್ತಾ ಸರ್ಕಾರದ ಮಾನದಂಡದಂತೆ ಮೂಲ ದಾಖಲು ಪತ್ರಗಳಿಲ್ಲದೆ ಇಂದಿಗೂ ಮುಖ್ಯ ವಾಹಿನಿಗೆ ಬಾರದ ಅದೆಷ್ಟೋ ಕುಟುಂಬಗಳು ಸ್ವತಂತ್ರ್ಯ ಹೀನರಾಗಿ ಬದುಕುತ್ತಿರುವ ಕುಟುಂಬಗಳನ್ನು ಸಂಘಟಿಸುತ್ತಾ ಶೋಷಿತ ಸಮುದಾಯಗಳು ಮತ್ತು ಎಲ್ಲಾ ಜಾತಿಯ ಕುಟುಂಬಗಳಿಗೂ ಸರ್ಕಾರಿ ಜಾಗವನ್ನು ಗುರುತಿಸಿ ಕೊಡಗಿನ ಎಲ್ಲಾ ತಾಲೂಕುಗಳಿಗೂ ಸಂಬಂಧಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಂದಾಯ ಭೂಮಿ 1950 ರಲ್ಲಿದಂತೆ ಎಲ್ಲಾ ಜಾಗವನ್ನು ಜಿಲ್ಲಾಡಳಿತ ಮಟ್ಟದಲ್ಲಿ ಹದ್ದುಬಸ್ತು ಸರ್ವೇ ಕಾರ್ಯ ಕೈಗೊಂಡು ಒಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 50 ಎಕರೆ ಭೂಮಿಯನ್ನಾದರೂ ಬಡವರ ನಿವೇಶನಕ್ಕಾಗಿಯೇ ಕಾಯ್ದಿರಿಸಿ, ಅಲ್ಲದೆ ಸರ್ಕಾರದ ಭೂ ಗುತ್ತಿಗೆ ಆದೇಶವನ್ನು ತಡೆಹಿಡಿಯಲು ಕೊಡಗಿನ ಇಬ್ಬರು ಮಾನ್ಯ ಶಾಸಕರುಗಳು ಸದನದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆಯನಿಟ್ಟರು. ಕಾರಣ ಇಂದು ಸರ್ಕಾರಿ ಭೂಮಿ ಎಲ್ಲವನ್ನು ಉಳ್ಳವರು ಏಕ್ರೆಗಟ್ಟಲೆ ಅನಧೀಕೃತವಾಗಿ ಆಕ್ರಮ ಸ್ವಾಧೀನ ಪಡಿಸಿಕೊಂಡು ಭೂ ಗುತ್ತಿಗೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಇದರಿಂದ್ದ ಸರ್ಕಾರದ ಭೂ ಗುತ್ತಿಗೆ ನೀತಿಯಿಂದ ಬಡವರು ಬಡವರಾಗಿಯೂ, ಶ್ರೀಮಂತರು ಮತ್ತಷ್ಟು ಭೂ ಮಾಲಿಕತ್ವವನ್ನು ಪಡೆಯಲು ಸರ್ಕಾರವೇ ಅವಕಾಶ ನೀಡಿದಂತಾಗುತ್ತದೆ ಎಂದು ಸರ್ಕಾರದ ನೀತಿಯನ್ನು ಟೀಕಿಸಿದರು. ಮುಂದುವರೆದು ಮಾತನಾಡಿದ ಅವರು, ಕೊಡಗಿಗೆ ಅತ್ಯುತ್ತಮ ಆಡಳಿತಗಾರರಾಗಿ, ಜನ ಮೆಚ್ಚಿದ ನಾಯಕರಾಗಿ ಯುವ ಶಕ್ತಿಯಾಗಿ ಕೊಡಗಿನ ಧ್ವನಿ ಹೀನ ಭೂ ರಹಿತ ನಿವೇಶನ ರಹಿತ ಕುಟುಂಬಗಳ ಬದುಕಿಗೆ ಶಾಶ್ವತ ಪರಿಹಾರವನ್ನು ಕೊಡಿಸಿ ಕಾಂಗ್ರೇಸ್ ಪಕ್ಷದ ಮತ್ತು ತಮ್ಮ ನಾಯಕತ್ವವು ಅಧಿಕಾರವು ಮತ್ತಷ್ಟು ಬಾರಿ ಕೊಡಗಿನಂತಹ ಕುಖ್ಯಾತ ಜಿಲ್ಲೆಗೆ ಅಗತ್ಯವಿದೆ ನಮ್ಮ ಬೇಡಿಕೆಯು ಜನಸಾಮಾನ್ಯರ ಉಳಿವಿಗಾಗಿ ನಡೆಸುತ್ತಿದ್ದು ನಾವು ನಿಮ್ಮೊಂದಿಗೆ ಸದಾ ಇರಲು ಬಯಸುತ್ತೇವೆ ಎಂದು ಆಶಯದ ಮಾತುಗಳನ್ನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮಾದೇಶ ಹೆಚ್ ಜಿ, ಹೋಬಳಿ ಅಧ್ಯಕ್ಷರಾದ ಪಾಪಣ್ಣ, ನಿವೇಶನ ಹೋರಾಟಗಾರರಾದ ಗೀತಾ ಎಂ.ಎಸ್, ಕುಸುಮಾವತಿ ಇತರರು ಹಾಜರಿದ್ದರು.

 ವರದಿ:ಎಂ ರಂಜಿತ್ ಮೌರ್ಯ