ಕೋಮು ಸೌಹಾರ್ದತೆ ಮೂಡದೇ ದೇಶದ ಪ್ರಗತಿ ಅಸಾಧ್ಯ: ಡಾ ಹೆಚ್.ಸಿ.ಮಹದೇವಪ್ಪ

ಕೋಮು ಸೌಹಾರ್ದತೆ ಮೂಡದೇ ದೇಶದ ಪ್ರಗತಿ ಅಸಾಧ್ಯ: ಡಾ ಹೆಚ್.ಸಿ.ಮಹದೇವಪ್ಪ

ಮಡಿಕೇರಿ:ಜನರಲ್ಲಿ ಕೋಮು ಸೌಹಾರ್ದ ಮೂಡದೇ ನಮ್ಮ ದೇಶದ ಪ್ರಗತಿಯನ್ನು ನಿರೀಕ್ಷಿಸುವುದು ಅಸಾಧ್ಯವಾಗಿದೆ ಎಂದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ ಹೆಚ್.ಸಿ.ಮಹದೇಪ್ಪ ನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಡಗಿನ ಪ್ರಪ್ರಥಮ ಗಾರ್ಮೆಂಟ್ ಕಾರ್ಖಾನೆಯಾದ ಲಾಲಿ ಅಪ್ಪರೆಲ್ಸ್ ಘಟಕನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು ಸಂವಿಧಾನ ಅಂಗೀಕರಿಸಿ ಇಷ್ಟು ವರ್ಷವಾದರೂ ದೇಶ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಹೊಂದದೆ ಇರಲು ಕೋಮು ಗಲಭೆಗಳು,ಅಸಮಾನತೆ, ಲಿಂಗ ತಾರತಮ್ಯ, ಬಡತನ,ನಿರುದ್ಯೋಗಳು ಕಾರಣವಾಗಿವೆ. ಇವನ್ನು ನಿವಾರಿಸಿದರೆ ಮಾತ್ರ ಸಧೃಡ ಸಮಾಜವನ್ನು ಕಟ್ಟಬಹುದು ಎಂಬುದನ್ನು ಯುವ ಜನತೆ ಅರಿಯಬೇಕಿದೆ ಎಂದು ತಿಳಿಸಿದರು.

 ಕೊಡಗಿನಲ್ಲಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹೆಚ್.ಎಂ.ನಂದುಕುಮಾರ್ ಮತ್ತು ಕುಟುಂಬದವರು ಉದ್ಯಮವನ್ನು ಸ್ಥಾಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಮಡಿಕೇರಿಯಲ್ಲಿ 250 ನಿರುದ್ಯೋಗಿಗಳಿಗೆ ಸಂಸ್ಥೆ ಉದ್ಯೋಗ ನೀಡಿದ್ದು ಅಷ್ಟು ಕುಟುಂಬಗಳಿಗೆ ಆಶ್ರಯ ಕಲ್ಪಿಸಿದ್ದು ಇಂತಹ ‌ಮತ್ತಷ್ಟು ಕಾರ್ಖಾನೆಗಳು ಜಿಲ್ಲೆಯಲ್ಲಿ ಸ್ಥಾಪಿತವಾಗುವ ಅಗತ್ಯತೆ ಇದೆ ಎಂದು ತಿಳಿಸಿದರು.

 ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಮಾತನಾಡಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕಾರ್ಖಾನೆ ಸ್ಥಾಪಿಸುವ ಮೂಲಕ ನಂದ ಕುಮಾರ್ ಕುಟುಂಬ ನಿರುದ್ಯೋಗ ನಿವಾರಣೆಗೆ ಹೊಸ ಆಯಾಮ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ನವರಿಗೆ ಗಣ್ಯರಿಂದ ಸನ್ಮಾನಿಸಲಾಯಿತು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ,ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮಾಜಿ ಎಂ.ಎಲ್.ಸಿ ವೀಣಾ ಅಚ್ಚಯ್ಯ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಕಾರ್ಯಕ್ರಮ ಕುರಿತು ಮಾತನಾಡಿದರು ಹೆಚ್.ಎಂ.ನಂದಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿ ಸಂಸ್ಥೆ ಸ್ಥಾಪನೆಯ ಉದ್ದೇಶದ ಕುರಿತು ವಿವರಿಸಿದರು.

ನಗರ ಸಭೆ ಅಧ್ಯಕ್ಷರಾದ ಶ್ರೀಮತಿ ಕಲಾವತಿ, ಮೂಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ,ಸಂಸ್ಥೆಯ ಮಾಲಿಕರಾದ ಕುಮಾರಿ ಲಾಂಚಿತ ನಂದಕುಮಾರ್,ಶಶಿಕಲಾ ನಂದಕುಮಾರ್, ವಿಶಾಲ್ ನಂದಕುಮಾರ್ ನಗರ ಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ,ಕುಶಾಲ ನಗರ ತಾಲ್ಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್, ಸುಜು ತಿಮ್ಮಯ್ಯ,ಕಾಂತರಾಜ್,ಮಂಜುನಾಥ್ ಗುಂಡುರಾವ್,ಪುಲಿಯಂಡ ಜಗದೀಶ್,ಪ್ರಭು ರೈ,ವಸಂತ್ ಪಪ್ಪಿ, ಡಾ ಸೋಮಶೇಖರ್, ಡಾ ಸತೀಶ್, ಡಾ ರಾಜಾರಾಮ್,ಡಾ ಶಿಲ್ಪಾ ಸತೀಶ್,ಬಾನಂಡ ಪ್ರಥ್ಯು,ಅಪ್ರು ರವೀಂದ್ರ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಸ್ವಾಗತಿಸಿ ಕಾರ್ಯಕ್ತಮ ನಿರೂಪಿಸಿದರು.