ವಿರಾಜಪೇಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಥಮ 'ಡಿಜಿ ಪೇ' ಸೇವೆಗೆ ಚಾಲನೆ

Jul 6, 2026 - 13:58
 0  310
ವಿರಾಜಪೇಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಥಮ 'ಡಿಜಿ ಪೇ' ಸೇವೆಗೆ ಚಾಲನೆ

ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವಿರಾಜಪೇಟೆ ತಾಲೂಕಿನ ವಿರಾಜಪೇಟೆ ಮತ್ತು ಅಮ್ಮತಿ ವಲಯದ ಕಾರ್ಯಕ್ಷೇತ್ರದಲ್ಲಿ ನೂತನ 'ಡಿಜಿ ಪೇ' ಸೇವೆಗೆ ವಿರಾಜಪೇಟೆಯ ಕಛೇರಿಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.

 ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಕೃಪಾಶೀರ್ವಾದದೊಂದಿಗೆ ತಾಲೂಕಿನಲ್ಲಿ ಈ ವಿನೂತನ ಸೇವೆ ಪ್ರಥಮ ಬಾರಿಗೆ ಆರಂಭಗೊAಡಿದ್ದು, ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿಗಳಾದ ಹರೀಶ್ ಪಿ. ಅವರು ದೀಪ ಬೆಳಗಿಸುವ ಮೂಲಕ ಈ ನೂತನ ಸೇವೆಯನ್ನು ಉದ್ಘಾಟಿಸಿದರು.

   ಬಳಿಕ ಮಾತನಾಡಿದ ಅವರು, "ಡಿಜಿ ಪೇ ಸೇವೆಯು ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಸಹಕಾರಿಯಾಗಲಿದೆ. ವಾರದ ನಗದು ಸಂಗ್ರಹಣೆ ದಿನದಂದು ಸದಸ್ಯರು ತಮ್ಮ ಎಟಿಎಂ ಕಾರ್ಡ್ ಅಥವಾ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಬಳಸಿ, ತಮ್ಮ ಬ್ಯಾಂಕ್ ಖಾತೆಯಿಂದ ಸುಲಭವಾಗಿ ರೂ.500 ರಿಂದ ರೂ 10,000 ವರೆಗೆ ನಗದು ಹಣವನ್ನು ಪಡೆಯಬಹುದು. ಸಿಎಸ್‌ಸಿ (ಅSಅ) ಕಾರ್ಯಕ್ರಮದ ಈ ಡಿಜಿಟಲ್ ಸೇವೆಯು ಪ್ರತಿಯೊಬ್ಬ ಗ್ರಾಮೀಣ ಜನರಿಗೂ ತಲುಪಬೇಕು. ಈ ಬಗ್ಗೆ ಒಕ್ಕೂಟದ ಸಭೆಗಳಲ್ಲಿ ಜನರಿಗೆ ಹೆಚ್ಚಿನ ಮಾಹಿತಿ ನೀಡಬೇಕು" ಎಂದು ತಿಳಿಸಿದರು.

   ಇದು ಯೋಜನೆಯ ಒಂದು ವಿನೂತನ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಮತ್ತು ಸಂಘದ ಸದಸ್ಯರು ಇದರ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

  ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು, ವಲಯ ಮೇಲ್ವಿಚಾರಕರು, ಹಣಕಾಸು ಪ್ರಬಂಧಕರು, ತಾಲೂಕು ನೋಡಲ್ ಅಧಿಕಾರಿ, ವಿಎಲ್‌ಇ (ಗಿಐಇ), ವಲಯದ ಸೇವಾಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0