ಸಾಹಿತ್ಯಾಸಕ್ತರಿಗೆ ಪೂರಕವಾದ ವಾತಾವರಣ ಕೊಡಗಿನಲ್ಲಿರುವುದೇ ಸಾಹಿತ್ಯ ಶ್ರೀಮಂತವಾಗಿರಲು ಕಾರಣ ;ಅಬ್ದುಲ್ ರಶೀದ್
ಸುಂಟಿಕೊಪ್ಪ ಮೇ 23 - ಸಾಹಿತ್ಯಾಸಕ್ತರಿಗೆ ಕೊಡಗು ಜಿಲ್ಲೆಯಲ್ಲಿ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹದಾಯಕ ವಾತಾವರಣ ಇದೆ. ಹೀಗಾಗಿಯೇ ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿ ಇದೆ ಎಂದು ಕೊಡಗು ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಶ್ಲಾಘಿಸಿದ್ದಾರೆ.
ಹುಣಸೂರು ಬಳಿಯಲ್ಲಿ ನೆಲಸಿರುವ ಸುಂಟಿಕೊಪ್ಪ ಮೂಲದ ನಾಡಿನ ಹಿರಿಯ ಸಾಹಿತಿ ಅಬ್ದುಲ್ ರಶೀಧ್ ಮೇ 29 ಮತ್ತು 30 ರಂದು ಸುಂಟಿಕೊಪ್ಪದಲ್ಲಿ ಆಯೋಜಿತ ಕನ್ನಡ ಸಾಹಿತ್ಯದ 17 ನೇ ಸಮ್ಮೇಳನದ ಸವಾ೯ಧ್ಯಕ್ಷರಾಗಿದ್ದು ಈ ಹಿನ್ನಲೆಯಲ್ಲಿ ಕುಶಾಲನಗರ ತಾಲೂಕು ಪತ್ರಕತ೯ರ ಸಂಘದಿಂದ ಅಬ್ದುಲ್ ರಶೀದ್ ಜೊತೆ ಅವರ ಆದಿವಾಸಿ ಫಾಮ್೯ನಲ್ಲಿ ಸಂವಾದ ಆಯೋಜಿಸಲಾಗಿತ್ತು.
ಪತ್ರಕತ೯ರೊಂದಿಗಿನ ಸಂವಾದ ಸಂದಭ೯ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಅಬ್ದುಲ್ ರಶೀದ್, ಸುಂದರ ಕೊಡಗು ವಿಭಿನ್ನ ಧಾಮಿ೯ಕ, ಸಮುದಾಯಗಳ ಸಹಭಾಳ್ವೆಗೆ ಸಾಕ್ಷಿಯಾಗಿ ವಿಶಿಷ್ಟ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವ ಜನರನ್ನು ಹೊಂದಿದೆ. ಕನ್ನಡ, ಕೊಡವ, ಅರೆಭಾಷೆ, ತುಳು, ಮಲಯಾಳ, ಹಿಂದಿ, ತೆಲುಗು, ತಮಿಳು ಹೀಗೆ ವಿವಿಧ ಭಾಷೆಗಳನ್ನು ಕೊಡಗಿನ ಜನತೆ ಬಲ್ಲವರಾಗಿದ್ದರೂ ಬಹುತೇಕ ಕನ್ನಡವೇ ಕೊಡಗಿನ ಜನತೆಯ ಪ್ರೀತಿಯ ಭಾಷೆಯಾಗಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನ ಜನರು ಕನ್ನಡವನ್ನು ಹೆಚ್ಚು ಪ್ರೀತಿಸುತ್ತಾರೆ. ಕೊಡಗಿನಲ್ಲಿ ಕಂಡು ಬರುವ ಕನ್ನಡಾಭಿಮಾನ ಬೇರೆಲ್ಲೂ ಕಾಣಸಿಗಲಾರದು . ಶ್ರೀಮಂತಿಕೆಯ ಜತೆ ಕಡುಬಡವರೂ ಕೊಡಗಿನಲ್ಲಿದ್ದಾರೆ.
ಹೀಗಿದ್ದರೂ ಎಲ್ಲಾ ರೀತಿಯ ಜನರ ನಡುವೆ ಸೌಹಾಧ೯ತೆ ಇದೆ. ಇದುವೇ ಕೊಡಗಿನ ಹೆಗ್ಗಳಿಕೆಯಾಗಿದೆ. ಎಂದು ಹೆಮ್ಮೆಯಿಂದ ರಶೀದ್ ನುಡಿದರು. ತಾನು ಹುಟ್ಟಿ ಬೆಳೆದ ಸುಂಟಿಕೊಪ್ಪದಲ್ಲಿ ಆಯೋಜಿತ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅಬ್ದುಲ್ ರಶೀದ್, ತನ್ನ ತಂದೆ ಇಸ್ಮಾಯಿಲ್ ಸ್ಥಳೀಯ ಸ್ಯಾಂಡಲ್ ವುಡ್ ಕಾಫೀ ತೋಟದಲ್ಲಿ ಮೂರು ದಶಕಗಳ ಕಾಲ ರೈಟರ್ ಆಗಿ ಕಾಯ೯ನಿವ೯ಹಿಸಿದ್ದರು.
ಆ ತೋಟದ ಮಾಲೀಕರಾಗಿದ್ದ ಎಸ್.ಎಂ. ಸಯ್ಯದ್ ತನ್ನನ್ನು ಓದಲು ಪ್ರೇರೇಪಿಸಿ ಆಥಿ೯ಕ ನೆರವನ್ನು ಕೂಡ ನೀಡಿದ್ದರು. ಅಂತೆಯೇ ಸುಂಟಿಕೊಪ್ಪದಲ್ಲಿಯೇ ತನ್ನ ತಾಯಿ ಫಾತಿಮ ಇಂದಿಗೂ ವಾಸವಾಗಿದ್ದಾರೆ. ಕೊಡಗಿನ ಅನೇಕ ಪ್ರದೇಶಗಳಂತೆ ತಾನು ಆಡಿ ಬೆಳೆದ ಸುಂಟಿಕೊಪ್ಪದ ಬಗ್ಗೆ ಹಲವು ಸುಮಧುರ ನೆನಪುಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ತಾನು ಬಾಲ್ಯ ಕಳೆದ ತೋಟ ಹಾಗೂ ತಂದೆಯವರ ಮೈದಾನಿ ( ಅಂತ್ಯಕ್ರಿಯೆ ಮಾಡಿದ ಸ್ಥಳ) ಇರುವ ಗದ್ದೆಹಳ್ಳದ ಬಳಿಯ ಸಭಾಂಗಣದಲ್ಲಿಯೇ ಆಯೋಜಿತ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿರುವುದು ಹೆಚ್ಚು ಸಂತೋಷ ತಂದಿದೆ.
ತಾನು ಅಧ್ಯಕ್ಷ ಸ್ಥಾನ ಒಪ್ಪಿಕೊಂಡಿರುವುದು ತನಗಿಂತ ಹೆಚ್ಚಾಗಿ ಸುಂಟಿಕೊಪ್ಪದ ಜನರಿಗೆ ಸಂಭ್ರಮ ತಂದಿರುವುದು ಇನ್ನಷ್ಟು ಖುಷಿ ತಂದಿದೆ ಎಂದು ರಶೀದ್ ನುಡಿದರು.
ಕುವೆಂಪು, ದೇವನೂರ ಮಹದೇವ, ತೇಜಸ್ವಿ, ಅನಂತಮೂತಿ೯, ಪಿ.ಲಂಕೇಶ್, ಎಂ.ಕೆ. ಇಂದಿರಾ, ಎಂ.ವ್ಯಾಸ, ಕೆ.ಟಿ. ಗಟ್ಟಿ, ಯಶವಂತ ಚೆತ್ತಾಲ, ಮಲಯಾಳದ ಖ್ಯಾತ ಲೇಖಕ ವೈಕಂ ಮಹಮ್ಮದ್ ಬಷೀರ್ ತನ್ನ ಸಾಹಿತ್ಯದ ಮೇಲೆ ಪ್ರಬಾವ ಬೀರಿದ ಲೇಖಕರಾಗಿದ್ದಾರೆ ಎಂದು ಅಬ್ದುಲ್ ರಶೀದ್ ಈ ಸಂದರ್ಭ ಹೇಳಿದರು..
ಕೊಡಗಿನ ಸಾಹಿತ್ಯ ಲೋಕಕ್ಕೆ ಪಂಜೆ ಮಂಗೇಶರಾಯ, ಐ.ಮಾ ಮುತ್ತಣ್ಣ, ಬಿ.ಡಿ. ಗಣಪತಿ, ಕಾಕೆಮಾನಿ, ಡಿ.ಎನ್. ಕೖಷ್ಣಯ್ಯ, ಭಾರತೀಸುತ, ಸಿ.ಪಿ. ಬೆಳ್ಯಪ್ಪ, ಬಾಚರಣಿಯಂಡ ಅಪ್ಪಣ್ಣ, ಕೊಡಗಿನ ಗೌರಮ್ಮ, ಕಾವೇರಿ ನಂಬಿಷನ್ ಮತ್ತಿತರರ ಕೊಡುಗೆ ಮಹತ್ವದ್ದಾಗಿದೆ.
ತಾನು ಹೊಸಕಾಲಘಟ್ಟದ ಲೇಖಕರ ಪ್ರತಿನಿಧಿಯಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವುದಾಗಿಯೂ ರಶೀದ್ ವಿನಮ್ರತೆಯಿಂದ ಹೇಳಿದರು.
ಯುವಪೀಳಿಗೆ ಸಾಹಿತ್ಯ ಪ್ರಕಾರಗಳನ್ನು ಓದುತ್ತಿಲ್ಲ ಎಂಬ ವಾದವನ್ನು ಅಲ್ಲಗೆಳೆದ ಅಬ್ದುಲ್ ರಶೀದ್, ಆಧುನೀಕತೆಯ ನಾಗಾಲೋಟದಲ್ಲಿ ಸಾಹಿತ್ಯ ಓದಲು ನಾನಾ ಮಾದ್ಯಮಗಳಿದೆ. ಇದನ್ನು ಬಳಸಿಕೊಂಡವರು ಸಾಹಿತ್ಯವನ್ನು ತಮಗೆ ನಿಲುಕುವ ನವ ಮಾಧ್ಯಮಗಳ ಮೂಲಕ ಓದುತ್ತಿದ್ದಾರೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಾಲಹಾಳಾಗಿದೆ ಎಂದು ಖಂಡಿತಾ ಹೇಳಲಾಗದು. ಜನರು ಓದುವ ಮಾಧ್ಯಮ ಬದಲಾಗಿದೆ ಎಂಬುದು ವಾಸ್ತವ. ಪುಸ್ತಕದ ಬದಲಿಗೆ ಡಿಜಿಟಲ್ ಮಾಧ್ಯಮದ ಮೂಲಕ ಎಲ್ಲಾ ವಿಚಾರಗಳನ್ನೂ ಸಾಹಿತ್ಯ ಸೇರಿಕೊಂಡಂತೆ ಓದುವ ಪ್ರವೖತ್ತಿ ಹೆಚ್ಚಾಗುತ್ತಿದೆ.ಎಂದು ಅವರು ಅಭಿಪ್ರಾಯ ಪಟ್ಟರು.
ಲೇಖಕರಿಗೆ ಹೊಸ ವಿಚಾರಗಳು ಇಂದಿನ ಕಾಲಘಟ್ಟದಲ್ಲಿ ಸಾಕಷ್ಟು ಲಭ್ಯವಿದೆ. ಆದರೆ ಮತ್ತೋವ೯ ಲೇಖಕನ ಶೈಲಿಯನ್ನು ಅನುಕರಿಸಲು ಹೋಗದೆ ತನ್ನದೇ ಶೈಲಿಯಲ್ಲಿ ಬರೆಯುವ ಹವ್ಯಾಸವನ್ನೂ ಪ್ರತೀ ಹೊಸ ಲೇಖಕನೂ ರೂಡಿಸಿಕೊಂಡಾಗ ಆತನ ಸಾಹಿತ್ಯ ಶೈಲಿ ಬಹುಕಾಲ ಬಾಳಿಕೆಯಲ್ಲಿ ಇರುತ್ತದೆ ಎಂದೂ ಅವರು ಸಲಹೆ ನೀಡಿದರು.
22 ನೇ ವಯಸ್ಸಿನಲ್ಲಿಯೇ ತಾನು ಬರೆದ ಹಾಲುಕುಡಿದ ಹುಡುಗ ಎಂಬ ಸಣ್ಣ ಕಥೆ ರಾಜ್ಯಮಟ್ಟದ ಕಥಾ ಸ್ಪಧೆ೯ಯಲ್ಲಿ ಬಹುಮಾನ ಪಡೆದಾಗ ಅನೇಕ ಲೇಖಕರು ಶ್ಲಾಘಿಸಿದ್ದರು.
ಇದನ್ನೇ ಪ್ರೋತ್ಸಾಹವಾಗಿಸಿಕೊಂಡು ಈವರೆಗೆ 6 ಕಥಾಸಂಕಲನಗಳು, 2 ಕವನ ಸಂಕಲನ, 6 ಅಂಕಣ ಬರಹಗಳೂ ಸೇರಿದಂತೆ ನಾನಾ ಕೖತಿಗಳನ್ನು ಪ್ರಕಟಿಸಿರುವುದಾಗಿ ರಶೀದ್ ಮಾಹಿತಿ ನೀಡಿದರು. 61 ವಷ೯ದ ತಾನು ಐದು ದಶಕಗಳ ಕಾಲ ಸಾಹಿತ್ಯ ಕೖಷಿಯಲ್ಲಿ ತೊಡಗಿಸಿಕೊಂಡಿದ್ದರೂ , ಸಾಹಿತ್ಯ ಲೋಕದ ಬಗ್ಗೆ ಇನ್ನೂ ಕುತೂಹಲ ಹೆಚ್ಚಾಗುತ್ತಿದೆ. ಹೀಗಾಗಿ ಸಾಹಿತ್ಯ ತೖಪ್ತಿ ಕೊಟ್ಟಿದೆ ಎಂದು ಹೇಳಲಾಗದು.
ಇನ್ನೂ ಸಂತೋಷವನ್ನು ಸಾಹಿತ್ಯದ ಮೂಲಕ ಅನುಭವಿಸುವುದು ಇದೆ ಎಂದೇ ತನ್ನ ಭಾವನೆ ಎಂದೂ ರಶೀದ್ ಹೇಳಿದರು. ಹುಣಸೂರು ಬಳಿಯ ಬನ್ನಿಕುಪ್ಪೆಯಲ್ಲಿ 4 ಎಕ್ರೆ ಜಾಗದಲ್ಲಿ ಮಾವು, ಬಾಳೆ, ತೆಂಗಿನ ಕೖಷಿ ಸೇರಿದಂತೆ ವಿವಿಧ ಕೖಷಿ ಮೂಲಕ ಕೖಷಿಕನ ಜೀವನ ಕಂಡುಕೊಂಡಿರುವ ತಾನು ಈ ಹೊಸ ವೖತ್ತಿಯಲ್ಲಿಯೇ ಸಂಭ್ರಮ್ರ ಕಂಡುಕೊಂಡಿರುವುದಾಗಿ ರಶೀದ್ ನುಡಿದರು.
ಹೆಸರಿನ ಮೂಲಕವಷ್ಟೇ ತನ್ನ ಧಮ೯ ಕಂಡುಹಿಡಿಯಬಹುದಾಗಿದ್ದು, ತಾನು ಯಾವುದೇ ಧಮ೯ದ ಅನುಯಾಯಿಯೂ ಅಲ್ಲ ಎಂದೂ ಸಂವಾದ ಸಂದಭ೯ ರಶೀದ್ ಸ್ಪಷ್ಟಪಡಿಸಿದರು. ಕೇರಳ ಮೂಲದ ಪತ್ನಿ ಮೋಳಿ ವಗೀ೯ಸ್, ತನ್ನ ಕಥೆಗಳನ್ನು ಮಲಯಾಳಕ್ಕೆ ಅನುವಾದಿಸಿದ್ದು ಸದ್ಯದಲ್ಲಿಯೇ ಅವು ಪ್ರಕಟವಾಗಲಿದೆ. ಮಗ ಅಖಿಲ್ ಜಮ೯ನಿಯಲ್ಲಿ ಎಂ.ಎಸ್ಸಿ ಮಾಡುತ್ತಿದ್ದರೆ. ಪುತ್ರಿ ಸಿರಿ ದೆಹಲಿಯ ಐಐಟಿಯಲ್ಲಿ ಸಂಶೋಧಕಿಯಾಗಿದ್ದಾಳೆ ಎಂದೂ ರಶೀದ್ ಮಾಹಿತಿ ನೀಡಿದರು.
ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಸುದೀಘ೯ 36 ವಷ೯ಗಳು ಕಾಯ೯ ನಿವ೯ಹಿಸಿರುವ ಅಬ್ದುಲ್ ರಶೀದ್ ಮಡಿಕೇರಿ ಆಕಾಶವಾಣಿಯಲ್ಲಿ ಕಾಯ೯ನಿವ೯ಹಿಸಿದ್ದ 6 ವಷ೯ಗಳಲ್ಲಿ ಕಾವೇರಿ ಎಕ್ಸ್ ಪ್ರೆಸ್, ಹಳ್ಳಿ ರೆಡಿಯೋ, ಗಿರಿಜನ ಸಂಗೀತ ಸಭಾ, ಕಾಡಿನ ಮಕ್ಕಳ ರೆಡಿಯೋ ಹಬ್ಬ ಸೇರಿದಂತೆ ವಿವಿಧ ವಿನೂತನ ಕಾಯ೯ಕ್ರಮಗಳನ್ನು ರೂಪಿಸಿದ್ದರು.
ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ, ಕೊಡಗು ಪತ್ರಿಕಾಭವನ ಟ್ರಸ್ಟ್ ಪ್ರಧಾನ ಕಾಯ೯ದಶಿ೯ ಎಸ್.ಜಿ. ಉಮೇಶ್, ಕುಶಾಲನಗರ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ಬಿ.ಸಿ.ದಿನೇಶ್, ಪ್ರಧಾನ ಕಾಯ೯ದಶಿ೯ ಎಂ. ಬಿ.ವಿನ್ಸೆಂಟ್, ಖಜಾಂಜಿ ಕೆ.ಎಸ್. ಅನಿಲ್ ಕುಮಾರ್, ನಿದೇ೯ಶಕರಾದ ನವೀನ್ ಚಿಣ್ಣಪ್ಪ, ಬಿ.ಎನ್, ರವಿಕುಮಾರ್ ಸಂವಾದದಲ್ಲಿ ಹಾಜರಿದ್ದರು.
