ಫುಟ್ಬಾಲ್ ನಲ್ಲಿ ಆಫ್ ಸೈಡ್ ಇಲ್ಲ! ಕಬಡ್ಡಿಯಲ್ಲಿ ರೈಡಿಂಗ್ ಟೈಮಿಂಗ್ ಇಲ್ಲ!:ಕಾಟಾಚಾರಕ್ಕೆ ನಡೆದ ಮಡಿಕೇರಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ!
(ಪ್ರತ್ಯಕ್ಷ ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ:ಕ್ರೀಡೆಯ ತವರೂರಾದ ಕೊಡಗಿನಲ್ಲಿ ನಡೆಯುತ್ತಿರುವ ದಸರಾ ಕ್ರೀಡಾಕೂಟಗಳ ಆಯೋಜನೆಯ ಬಗ್ಗೆ ಪ್ರತೀ ಬಾರಿ ಕೂಡ ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಇಲಾಖೆಯ ವಿರುದ್ಧ ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ಈ ಬಾರಿ ಕೂಡ ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಇಲಾಖೆ ಕಾಟಾಚರಕ್ಕೆ ದಸರಾ ಕ್ರೀಡಾಕೂಟಗಳನ್ನು ಆಯೋಜಿಸಿ ಕ್ರೀಡಾಪಟುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋಮವಾರ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬಿರುಸಿನ ಮಳೆಯ ನಡುವೆಯೂ ಕೂಡ ಯುವ ಸಬಲೀಕರಣ ಇಲಾಖೆ ಮಡಿಕೇರಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಆಯೋಜಿಸಿದ್ದರು.ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆ ಕೂಡ ನಾಮಕಾವಸ್ಥೆಗೊಂದು ಕ್ರೀಡಾಕೂಟ ಎಂಬ ದೃಶ್ಯ ಸೋಮವಾರ ಮಡಿಕೇರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಂಡಬಂದಿತ್ತು.
ಫುಟ್ಬಾಲ್ ಪಂದ್ಯದಲ್ಲಿ ಆಫ್ ಸೈಡ್ ಇಲ್ಲ!ತೀರ್ಪುಗಾರರೇ ಇಲ್ಲ!
ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆ ಕೂಡ ಮಡಿಕೇರಿ ತಾಲ್ಲೂಕಿನ ಫುಟ್ಬಾಲ್ ಆಟಗಾರರು ಫುಟ್ಬಾಲ್ ಪಂದ್ಯವನ್ನು ಆಡಿದರು. ಜಿಲ್ಲಾ ಕ್ರೀಡಾಂಗಣದ ಫುಟ್ಬಾಲ್ ಮೈದಾನವು ಮಳೆಯಿಂದ ನೀರು ನಿಂತು ಸಂಪೂರ್ಣ ಮೈದಾನವು ಕೆಸರು ಮಯವಾಗಿತ್ತು.ಕಾಟಾಚಾರಕ್ಕೆ ಕ್ರೀಡಾಕೂಟ ಆಯೋಜಿಸಿದ್ದ ಇಲಾಖೆಯು ಫುಟ್ಬಾಲ್ ಪಂದ್ಯಾವಳಿಗೆ ನುರಿತ ತೀರ್ಪುಗಾರರನ್ನು ಕೂಡ ನೇಮಿಸರಲಿಲ್ಲ.ಫುಟ್ಬಾಲ್ ಆಟದ ನಿಯಮಗಳನ್ನೇ ಬಾರದ ತೀರ್ಪುಗಾರರು ನಿಂತಲ್ಲೇ ನಿಂತು ತೀರ್ಪುಗಾರಿಕೆ ನೀಡುತ್ತಿದ್ದರು.ತೀರ್ಪುಗಾರರಿಗೆ ಏನೂ ಗೊತ್ತೇ ಇಲ್ಲ ನಮ್ಮ ಪಾಡಿಗೆ ನಾವು ಆಡೋಣ ಅಂತ ಫುಟ್ಬಾಲ್ ಆಟಗಾರರು ಆಡುತ್ತಿದ್ದ ದೃಶ್ಯ ಕಂಡು ಬಂತು.
ನೋ ಆಫ್ ಸೈಡ್! ತೀರ್ಪುಗಾರರೇ ಇಲ್ಲ!
ಫುಟ್ಬಾಲ್ ನಿಯಮದ ಪ್ರಕಾರ 11ಜನ ಆಡುವಾಗ ಆಫ್ ಸೈಡ್ ಇರಲಿದೆ.ಆಫ್ ಸೈಡ್ ಇರುವಾಗ ಮೂವರು ತೀರ್ಪುಗಾರರು ಬೇಕು.ಆದರೆ ಸೋಮವಾರ ನಡೆದ ಮಡಿಕೇರಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಒಬ್ಬರೇ ತೀರ್ಪುಗಾರರು ಇದ್ದರು.ಆಫ್ ಸೈಡ್ ಹಾಗೂ ಔಟ್ ತೀರ್ಪು ನೀಡಲು ಎರಡು ಹಾಗೂ ಮೂರನೇ ತೀರ್ಪುಗಾರರು ಇರಲಿಲ್ಲ. ಫುಟ್ಬಾಲ್ ಆಟದ ನಿಯಮಗಳೇ ಬಾರದ ಒಬ್ಬ ತೀರ್ಪುಗಾರ ರೆಫ್ರಿ ಮಾಡುತ್ತಿದ್ದರು. ಯಾವುದೇ ಆಫ್ ಸೈಡ್ ಇಲ್ಲದ ಫುಟ್ಬಾಲ್ ನಿಯಮಗಳನ್ನೇ ಗಾಳಿತೂರಿ ದಸರಾ ಕ್ರೀಡಾಕೂಟವನ್ನು ಆಯೋಜಿಸಿದ್ದರು. ಆಟದ ನಡುವೆ ಫೌಲ್ ಆದರೂ ಕೂಡ ಆಟಗಾರರು ಮನವಿ ಮಾಡಿದರು ಕೂಡ ರೆಫ್ರಿಗೆ ಗೊತ್ತೇ ಇಲ್ಲದ ರೀತಿಯಲ್ಲಿ ಮೈದಾನ ಮಧ್ಯೆ ನಿಂತಿದ್ದರು. ಫುಟ್ಬಾಲ್ ನಿಯಮದ ಪ್ರಕಾರದ ಪೆನಾಲ್ಟಿ ಏರಿಯಾ ಮಾರ್ಕಿಂಗ್ ಇರಬೇಕು.ಆದರೆ ಮಡಿಕೇರಿ ದಸರಾ ಕ್ರೀಡಾಕೂಟದಲ್ಲಿ ಈ ನಿಯಮಗಳ ಅನ್ವಯವಾಗದ ರೀತಿಯಲ್ಲಿ ಪೆನಾಲ್ಟಿ ಮಾರ್ಕಿಂಗ್ ಮಾಡಿರಲಿಲ್ಲ. ಗೋಲ್ ಕೀಪರ್ ಎಲ್ಲಿಂದ ಬೇಕಾದರೂ ಕೂಡ ಬಾಲ್ ಹಿಡಿಯಬಹುದು ಎಂಬ ಪರಿಸ್ಥಿತಿ ಇತ್ತು.ಲೈನ್ ಮಾರ್ಕಿಂಗ್ ಕೂಡ ಇರಲಿಲ್ಲ.
ಕಬಡ್ಡಿ ರೈಡಿಂಗ್ ಟೈಮಿಂಗ್ ಇಲ್ಲ!
ಮಡಿಕೇರಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕ್ರೀಡೆಯ ನಿಯಮಗಳನ್ನೇ ಗಾಳಿಗೆ ತೂರಲಾಗಿತ್ತು.ಕಬಡ್ಡಿ ಪಂದ್ಯಾವಳಿಯಲ್ಲಿ ನಿಯಮದ ಪ್ರಕಾರ ಒಂದು ರೈಡಿಂಗ್ ಕೇವಲ 30 ಸೆಕೆಂಡ್ ಗಳಲ್ಲಿ ಮುಕ್ತಾಯಗೊಳಿಸಬೇಕು. 30 ಸೆಕೆಂಡ್ ಗಳಲ್ಲಿ ರೈಡ್ ಪೂರ್ಣಗೊಳಿಸದಿದ್ದರೆ ರೈಡರ್ ಔಟ್ ಎಂದು ಘೋಷಿಸುತ್ತಾರೆ.ಆದರೆ ಮಡಿಕೇರಿ ದಸರಾ ಕ್ರೀಡಾಕೂಟದಲ್ಲಿ ಇದ್ಯಾವ ನಿಯಮ ಕೂಡ ಅನ್ವಯವಾಗಿರಲಿಲ್ಲ.ಕಬಡ್ಡಿ ಪಂದ್ಯದಲ್ಲಿ ರೈಡರ್ ಒಂದು ನಿಮಿಷಕ್ಕೂ ಅಧಿಕ ರೈಡ್ ಮಾಡುತ್ತಿದ್ದರು.ಪರಸ್ಪರ ಆಟಗಾರರೇ ತೀರ್ಪುಗಾರರನ್ನು ವ್ಯಂಗ್ಯ ಮಾಡುತ್ತಿದ್ದರು. ವಾಲಿಬಾಲ್ ಪಂದ್ಯದಲ್ಲಿ ನಿಯಮದ ಪ್ರಕಾರ ರೊಟೇಶನ್ ಇರಬೇಕು.ಇದ್ಯಾವ ನಿಮಯಗಳು ಮಡಿಕೇರಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಇರಲಿಲ್ಲ. ದಸರಾ ದಸರಾ ಕ್ರೀಡಾಕೂಟಕ್ಕೆ ಅನುದಾನ ನೀಡಿದರು ಕೂಡ ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಇಲಾಖೆಗೆ ಯಾವುದೇ ರೀತಿಯ ವ್ಯವಸ್ಥೆಗಳನ್ನು ಮಾಡದೆ,ನಾಮಕಾವಸ್ಥೆಗೆ ಕ್ರೀಡಾಕೂಟವನ್ನು ಆಯೋಜಿಸಿ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಾದರೂ ಯುವ ಸಬಲೀಕರಣ ಇಲಾಖೆಗೆ ಎಚ್ಚೆತ್ತುಕೊಂಡು ದಸರಾ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಲಿ ಎಂಬುದೇ ಆಟಗಾರರ ಒತ್ತಾಯ.
ಕ್ರೀಡಾಕೂಟವನ್ನು ಮುಂದೂಡಬಹುದಿತ್ತು!
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾರ್ಭಟ ಮುಂದುವರಿದಿದೆ.ಮಡಿಕೇರಿ ನಗರದಲ್ಲಿ ಚಳಿ-ಮಳೆ,ಗಾಳಿ ನಿರಂತರವಾಗಿ ಇದೆ.ಏತನ್ಮಧ್ಯೆ ಜಿಲ್ಲಾಡಳಿತ,ಜಿಲ್ಲಾ ಯುವ ಸಬಲೀಕರಣ ಇಲಾಖೆಗೆ ಮಡಿಕೇರಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಮಳೆಯ ನಡುವೆ ಆಯೋಜಿಸಿದರೆ,ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವೇ! ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಯಲ್ಲಿ ಹೇಗೆ ನಾವು ಆಟ ಆಡುವುದು! ಯುವ ಸಬಲೀಕರಣ ಇಲಾಖೆಗೆ ಕ್ರೀಡಾಕೂಟವನ್ನು ಮುಂದೂಡಬಹುದಿತ್ತು. ಪ್ರತೀ ಬಾರಿ ಕೂಡ ಯುವಸಬಲೀಕರಣ ಇಲಾಖೆ ಕಾಟಾಚಾರಕ್ಕೆ ದಸರಾ ಕ್ರೀಡಾಕೂಟವನ್ನು ಆಯೋಜಿಸುತ್ತಾರೆ. ಗದ್ದೆಯಲ್ಲಿ ಆಡಿದ ಅನುಭವ ಆಗಿದೆ. ನಾಮಕಾವಸ್ಥೆಗೆ ದಸರಾ ಕ್ರೀಡಾಕೂಟವನ್ನು ಯುವ ಸಬಲೀಕರಣ ಆಯೋಜನೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು " ಆಟಗಾರರು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.