ನಾಳೆ ವಿರಾಜಪೇಟೆ ಭಾಗದ ವಿವಿಧೆಡೆ ಕರೆಂಟ್ ಇರಲ್ಲ
admincoorgdaily

ಮಡಿಕೇರಿ ಏ.27:-ವಿರಾಜಪೇಟೆ ವಿದ್ಯುತ್ 66/33/11 ಕೆ.ವಿ ವಿತರಣಾ ಉಪ ಕೇಂದ್ರದಿAದ ಹೊರಹೊಮ್ಮುವ ವಿರಾಜಪೇಟೆ ಶಾಖಾ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಮಾರ್ಗಗಳಲ್ಲಿ ಏಪ್ರಿಲ್, 28 ರಂದು ಬೆಳಗ್ಗೆ 10 ರಿಂದ 05 ಗಂಟೆಯವರೆಗೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ಪಟ್ಟಣದಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ ವಿರಾಜಪೇಟೆ ಪಟ್ಟಣ, ಮಗ್ಗುಲ, ಕುಕ್ಲೂರು, ಕದನೂರು, ಬೊಳ್ಳುಮಾಡು, ಕಾಕೋಟುಪರಂಬು, ಬೇತ್ರಿ, ಪಾಲಂಗಾಲ, ಕೆದಮಳ್ಳೂರು, ಆರ್ಜಿ, ಬೇಟೋಳಿ, ಪೆರಂಬಾಡಿ, ಬಿಟ್ಟಂಗಾಲ, ಬಾಳುಗೋಡು, ವಿ.ಬಾಡಗ, ಕುಟ್ಟಂದಿ, ಬಿ.ಶೆಟ್ಟಿಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.