ಇದು 'ಕೂರ್ಗ್ ಡೈಲಿ' ವರದಿಯ ಫಲಶೃತಿ: ಕುಶಾಲನಗರ ಟ್ರಾಫಿಕ್ ಪೊಲೀಸರ ಶೀಘ್ರ ಸ್ಪಂದನೆ: ಅಪಘಾತ ವಲಯದಲ್ಲಿ ಪೊಲೀಸರ ನಿಯೋಜನೆ
ಕುಶಾಲನಗರ, ಜು.5: ನಿನ್ನೆ ಕೂಡಿಗೆ ರಸ್ತೆಯ ಸೋಮೇಶ್ವರ ದೇವಸ್ಥಾನದ ಎದುರು ಬದಿ ನಡೆದ ಸರಣಿ ಅಪಘಾತದಿಂದ ಕೂಡಲೇ ಎಚ್ಚೆತ್ತ ಕುಶಾಲನಗರ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಮುಂಜಾಗ್ರತೆ ವಹಿಸಲು ಮುಂದಾಗಿದೆ.
ಸರ್ಕಾರಿ ಆಸ್ಪತ್ರೆ ಬಳಿಯ ಬಿಜಿಎಸ್ ಸರ್ಕಲ್ ಬಳಿ ಟ್ರಾಫಿಕ್ ಎ ಎಸ್ ಐ ಸಹಿತ ಸಿಬ್ಬಂದಿಗಳು ಕಾರ್ಯಚರಿಸುತ್ತಿದ್ದಾರೆ. ಮಳೆಯ ಸಂದರ್ಭಗಳಿರುವುದರಿಂದ ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ಸೂರು ಇಲ್ಲದಿರುವುದು ಕರ್ತವ್ಯ ನಿಭಾಯಿಸಲು ತುಸು ತ್ರಾಸದಾಯಕವಾಗಿದೆ. ಸಂಘ ಸಂಸ್ಥೆಯವರು ಪೊಲೀಸ್ ಚೌಕಿ ಒಂದನ್ನು ನಿರ್ಮಿಸಿದರೆ ಒಳ್ಳೆಯದು ಎಂಬುದು ಸಾರ್ವಜನಿಕರ ಆಶಯವಾಗಿದೆ.
What's Your Reaction?
Like
2
Dislike
0
Love
0
Funny
1
Angry
0
Sad
2
Wow
1

