ಮೂರ್ನಾಡು; ಮುರ್ನಾಡು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಕೆಡ್ಡಸ ಹಬ್ಬಾಚರಣೆ
ಮೂರ್ನಾಡು:ಇಲ್ಲಿನ ಗೌಡ ಸಮಾಜದಲಿ ಮುರ್ನಾಡ್ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಕೆಡ್ಡಸ ಹಬ್ಬವನ್ನು ಆಚರಿಸಲಾಯಿತು.ಮಹಿಳಾ ಒಕ್ಕೂಟದ ಮಹಿಳೆಯರು ಎಲ್ಲಾ ಸೇರಿ ಭೂಮಿ ತಾಯಿಗೆ ಪೂಜೆಯನ್ನು ಸಲ್ಲಿಸಿದರು.
ಗೌಡ ಸಮುದಾಯದ ಪ್ರಮುಖ ಸಂಪ್ರದಾಯಿಕ ಹಬ್ಬವಾದ ಕೆಡ್ಡಸ ಹಬ್ಬವನ್ನು ಮೂರ್ನಾಡ್ ಗೌಡ ಸಮಾಜದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಭೂಮಾತೆಗೆ ಕೃತಜ್ಞತೆ ಸಲ್ಲಿಸುವ ಈ ಹಬ್ಬವು ಕೃಷಿ ಸಂಸ್ಕೃತಿಯ ಪ್ರತೀಕವಾಗಿದೆ. ಸಂಪ್ರದಾಯದ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಯಿತು. ಮಹಿಳೆಯರು ಸಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿದರು.
ಈ ಹಬ್ಬವು ಕುಟುಂಬ ಒಗ್ಗಟ್ಟನ್ನು ಬಲಪಡಿಸುವುದರೊಂದಿಗೆ ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ಸಹಕಾರಿಯಾಗಿದೆ. ಯುವಪೀಳಿಗೆಗೆ ತಮ್ಮ ಸಂಪ್ರದಾಯಗಳ ಮಹತ್ವವನ್ನು ತಿಳಿಸುವ ಮಹತ್ವದ ಹಬ್ಬವಾಗಿ ಕೇಡ್ಡಸ ಆಚರಣೆ ಗಮನಸೆಳೆದಿತು. ಕೇಡ್ಡಸ ಹಬ್ಬವು ಗೌಡ ಜನಾಂಗದ ಸಂಸ್ಕೃತಿ, ನಂಬಿಕೆ ಮತ್ತು ಜೀವನ ಶೈಲಿಯ ಪ್ರತಿಬಿಂಬವಾಗಿದೆ. ಇದು ಕೇವಲ ಒಂದು ಹಬ್ಬವಲ್ಲ; ಅದು ಪ್ರಕೃತಿ ಆರಾಧನೆ, ಕುಟುಂಬ ಏಕತೆ ಮತ್ತು ಸಾಮಾಜಿಕ ಒಗ್ಗಟ್ಟಿನ ಸಂಕೇತವಾಗಿದೆ.
ಭೂಮಿಯನ್ನು ಗೌರವಿಸುವುದು ಮತ್ತು ಪರಿಸರವನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಇದೆ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕಲ್ಲುಮುಟ್ಲು ಜಶ್ಮಿ, ಉಪಾಧ್ಯಕ್ಷರಾದ ಬೈಲೋಳ್ಳಿ ಮೇನಕಾ ಕಾರ್ಯದರ್ಶಿಯಾದ ತೆಕ್ಕಡೆ ಭವ್ಯ, ಖಜಾಂಚಿಯಾದ ತೆಕ್ಕಡೆ ಆಶಾ ಸದಸ್ಯರಾದ , ಕಲ್ಲುಮುಟ್ಲು ಲತಾ, ಜಯಮಾಲ, ಉಳುವಾರನ ಕುಮುದಿನಿ, ಕುವೇಂದ್ರಾ ಸುನಂದಿನಿ, ಚೆರಿಯಮನೆ ಸಾವಿತ್ರಿ, ಪಾಡಿಚೆಟ್ಟಿರ ಹರ್ಷಿತ, ಮೆರ್ಕಜ್ಜೆ, ಸುಷ್ಮಾ, ಕೃತಿಕಾ, ತೆಕ್ಕಡೆ ಪೂರ್ಣಿಮ ಸೇರಿದಂತೆ ಇನ್ನಿತರರು ಭಾಗವಹಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
