ನಾಳೆ ಸೋಮವಾರಪೇಟೆಯಲ್ಲಿ ಕಾಫಿ ಕುಡಿಸಿರಿ, ಕಾಫಿಯೊಂದಿಗೆ ದೈನಂದಿನ ಜೀವನ ಪ್ರಾರಂಭಿಸಿ ವಿಶೇಷ ಕಾರ್ಯಕ್ರಮ

ನಾಳೆ ಸೋಮವಾರಪೇಟೆಯಲ್ಲಿ  ಕಾಫಿ ಕುಡಿಸಿರಿ, ಕಾಫಿಯೊಂದಿಗೆ ದೈನಂದಿನ ಜೀವನ ಪ್ರಾರಂಭಿಸಿ ವಿಶೇಷ ಕಾರ್ಯಕ್ರಮ

ಸೋಮವಾರಪೇಟೆ: ಕಾಫಿ ಬೆಳೆಗಾರರ ಸಂಘ ಸೋಮವಾರಪೇಟೆ ಹಾಗೂ ಹೋಂಸ್ಟೇ ಅಸೋಸಿಯೇಶನ್ ಸೋಮವಾರಪೇಟೆ ತಾಲ್ಲೂಕು ಇವರ ವತಿಯಿಂದ ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ಅ.1 ರಂದು ಪಟ್ಟಣದ ವಿವೇಕಾನಂದ ಸರ್ಕಲ್‌ನಲ್ಲಿ ಕಾಫಿ ಕುಡಿಯಿರಿ, ಕಾಫಿ ಕುಡಿಸಿರಿ, ಕಾಫಿ ಯೊಂದಿಗೆ ದೈನಂದಿನ ಜೀವನ ಪ್ರಾರಂಭಿಸಿ ಎಂಬ ಹೆಸರಿನಲ್ಲಿ ಕಾಫಿ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಂ.ಲವ ಹೇಳಿದರು.

 ಬುಧವಾರ ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಕಾಫಿ ಬೆಳೆಗಾರರಾದ ಜಿ.ಎಸ್.ಪ್ರಭುದೇವ್ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭ ಕಾಫಿ ಬೆಳೆಗಾರರು ಮತ್ತು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ಎ.ಆರ್.ಮುತ್ತಣ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅವರುಗಳನ್ನು ಸನ್ಮಾನಿಸಲಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಹಾನಗಲ್ಲು ಗ್ರಾಮದ ಬಿ.ಎಸ್.ಸೀತಾರಾಂ, ಸುಳಿಮಳ್ತೆ ಗ್ರಾಮದ ಎಸ್.ಎಲ್.ಪುಟ್ಟರಾಜು, ಕಿರಗಂದೂರು ಗ್ರಾಮದ ವಿಮಲ ಕೃಷ್ಣಕಾಂತ್, ಕರ್ಕಳ್ಳಿ ಗ್ರಾಮದ ನಿರ್ಮಲ ಪ್ರಕಾಶ್, ತಣ್ಣೀರುಹಳ್ಳ ಗ್ರಾಮದ ರಾಣಿ ನರೇಂದ್ರ ಭಾಗವಹಿಸಲಿದ್ದಾರೆ.

 ಗೋಷ್ಠಿಯಲ್ಲಿ ಹೋಂ ಸ್ಟೇ ಅಸೋಸಿಯೇಶನ್ ಅಧ್ಯಕ್ಷ ಸಿ.ಕೆ. ರೋಹಿತ್, ಸಂಘದ ಉಪಾಧ್ಯಕ್ಷ ಗೌಡಳ್ಳಿ ಪ್ರಸಿ, ಪದಾಧಿಕಾರಿಗಳಾದ ಜಾನಕಿ ವೆಂಕಟೇಶ್, ಕೆ.ಜಿ.ಎಫ್. ನಿರ್ದೇಶಕ ಸಿ.ಕೆ.ಮಲ್ಲಪ್ಪ, ಕಾರ್ಯದರ್ಶಿ ಯಡೂರು ಮನೋಹರ್ ಇದ್ದರು.