ರಂಗಭೂಮಿಯೇ ಮದ್ದು ಎಂಬ ಸಂದೇಶದೊಂದಿಗೆ ಸೃಷ್ಟಿ ಕಲ್ಚರಲ್ ಅಕಾಡೆಮಿ ವತಿಯಿಂದ ತರಬೇತಿ
admincoorgdaily

ಮಡಿಕೇರಿ: ಮೊಬೈಲ್ ಯುಗದಲ್ಲಿ ಮಕ್ಕಳ ಮನಸ್ಸನ್ನು ಶಾಂತಗೊಳಿಸಲು ರಂಗಭೂಮಿಯೇ ಮದ್ದು ಎಂಬ ಸಂದೇಶದೊಂದಿಗೆ ಸೃಷ್ಟಿ ಕಲ್ಚರಲ್ ಅಕಾಡೆಮಿ ಜುಲೈನಿಂದ ವಾರಾಂತ್ಯದ ತರಬೇತಿ ಆರಂಭಿಸುತ್ತಿದೆ ಸೃಷ್ಟಿ ಕಲ್ಚರಲ್ ಅಕಾಡೆಮಿ ಸ್ಥಾಪಕಿ ರೂಪ ಮೋಹನ್ ತಿಳಿಸಿದರು. ಆರಂಭದಲ್ಲಿ ಸೋಮವಾರಪೇಟೆ ವ್ಯಾಪ್ತಿಯಲ್ಲಿ ತರಬೇತಿ ಆರಂಭಿಸಲಾಗುತ್ತಿದೆ ಎಂದ ಅವರು, ೬-೧೫ ವರ್ಷದ ಮಕ್ಕಳಿಗೆ ನಾಟನಾ, ಧ್ವನಿ ಏರಿಳಿತ, ಮೈಮ್, ನೃತ್ಯ, ಕರಕುಶಲ ತರಬೇತಿ ನೀಡಲಾಗುವುದು. ರಂಗಾಸಕ್ತ ಮಕ್ಕಳು ೮೧೪೭೫೯೯೨೯೬ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿವೃತ್ತ ಕಲಾವಿದೆ ದೇವಜನ ಗೀತಾ ಮೋಂಟಡ್ಕ, ಕರಂಭೂಮಿ ಕಲಾವಿದರಾದ ಮಾದೇಟಿರ ಬೆಳ್ಯಪ್ಪ, ಉಮೇಶ್, ರವಿ ಇದ್ದರು.