ಉರೂಸ್ ಕಾರ್ಯಕ್ರಮಗಳು ನಾಡಿನ ಐಕ್ಯತೆ, ಸಹಬಾಳ್ವೆ ಹಾಗೂ ಸಾಮಾಜಿಕ ಏಳಿಗೆಗೆ ಕಾರಣವಾಗುತ್ತಿದೆ;ಶಾಸಕ ಎಎಸ್ ಪೊನ್ನಣ್ಣ ಅಭಿಪ್ರಾಯ

Apr 20, 2026 - 17:26
 0  188
ಉರೂಸ್ ಕಾರ್ಯಕ್ರಮಗಳು ನಾಡಿನ ಐಕ್ಯತೆ, ಸಹಬಾಳ್ವೆ ಹಾಗೂ ಸಾಮಾಜಿಕ ಏಳಿಗೆಗೆ ಕಾರಣವಾಗುತ್ತಿದೆ;ಶಾಸಕ ಎಎಸ್ ಪೊನ್ನಣ್ಣ ಅಭಿಪ್ರಾಯ

ಮಡಿಕೇರಿ;ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರುಸ್ ಕಾರ್ಯಕ್ರಮಕ್ಕೆ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಭೇಟಿ ನೀಡಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರಾರು ಭಕ್ತರು ಆಗಮಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ರಾಜ್ಯಾದ್ಯಂತದಿಂದ ಹಾಗೂ ಹೊರ ರಾಜ್ಯಗಳಿಂದಲೂ ಸಾವಿರಾರು ಜನ ಆಗಮಿಸುತ್ತಿರುವ ಈ ಉರುಸ್ ಕಾರ್ಯಕ್ರಮ ತನ್ನ ಮಹತ್ವವನ್ನು ನಾಡಿಗೆ ಸಾರಿದೆ.

 ಎಲ್ಲಾ ಧರ್ಮದವರು ಈ ಉರುಸ್ ನಲ್ಲಿ ಭಾಗವಹಿಸುವುದು ವಿಶೇಷ. ಸರ್ವಧರ್ಮೀಯರ ಸಮ್ಮಿಲನಕ್ಕೆ ಹಾಗೂ ಭಾರತದ ನಿಜವಾದ ಪರಂಪರೆಯನ್ನು ಸಾರುವುದಕ್ಕೆ ಗುರು ಕಾರ್ಯಕ್ರಮ ನೈಜ ನಿದರ್ಶನವಾಗಿದೆ ಎಂದು ಬಣ್ಣಿಸಿದರು. ನಾಡಿನ ಸರ್ವರಿಗೂ ಒಳಿತಾಗಲಿ ಎಂದು ಹಾರೈಸಿದ ಶಾಸಕರು, ಇಂತಹ ಕಾರ್ಯಕ್ರಮ ನಾಡಿನ ಐಕ್ಯತೆ, ಸಹಬಾಳ್ವೆ ಹಾಗೂ ಸಾಮಾಜಿಕ ಏಳಿಗೆಗೆ ಕಾರಣವಾಗುತ್ತಿದೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ,ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್,ಮಡಿಕೇರಿ ಬ್ಲಾಕ್ ಅಧ್ಯಕ್ಷರು ಹಂಸ ಕೊಟ್ಟಮುಡಿ, ಕೆಪಿಸಿಸಿ ಸದಸ್ಯರು ಯಾಕೂಬ್ ,ಹಂಝ ಪಡಿಯಾಣಿ, ಕರೀಂ ಆಜು, ಡಿಸಿಸಿ ಉಪಾಧ್ಯಕ್ಷರು ಅಬ್ದುಲ್ ರೆಹಮನ್,ಮೊಹಮ್ಮದ್ ಹಾಜಿ ಕುಂಜಿಲ, ಎರ್ಮು ಹಾಜಿ,ಅಶ್ರಫ್ ಬಿ.ಯು. ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0