ದೀಪಾವಳಿ ಉತ್ಸವ ಪ್ರಯುಕ್ತ ಅ.26 ರಂದು ಮಡಿಕೇರಿಯಲ್ಲಿ ವಿವಿಧ ಕ್ರೀಡಾಕೂಟ
admincoorgdaily
ಮಡಿಕೇರಿ: ೧೨ನೇ ವರ್ಷದ ದೀಪಾವಳಿ ಉತ್ಸವದ ಪ್ರಯುಕ್ತ ಕಲಾ ನಗರ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಅ.೨೬ರಂದು ವಿವಿಧ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಆರ್.ಮಹೇಶ್ ತಿಳಿಸಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಅಂದು ಬೆಳಗ್ಗೆ ೧೦ ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುತ್ತದೆ. ಕ್ರೀಡಾಕೂಟಕ್ಕೆ ನಗರದ ಕನ್ನಂಡಬಾಣೆ, ಸಂಪಿಗೆಕಟ್ಟೆ, ಚೈನ್‌ಗೇಟ್, ರಾಘವೇಂದ್ರ ದೇವಸ್ಥಾನದ ಸುತ್ತಮುತ್ತ ಸ್ಥಳೀಯ ನಿವಾಸಿಗಳು ಪಾಲ್ಗೊಳ್ಳಬಹುದಾಗಿದೆ.
ಸಣ್ಣ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ನಿಂಬೆ ಚಮಚ ಓಟ, ವಿವಿಧ ವಿಭಾಗಗಳಲ್ಲಿ ೧೦೦ ಮೀಟರ್ ಓಟದ ಸ್ಪರ್ಧೆ ನಡೆಯಲಿದೆ. ಪುರುಷ ಮತ್ತು ಮಹಿಳೆಯರಿಗೆ ಕ್ರಿಕೆಟ್, ಹಗ್ಗಜಗ್ಗಾಟ ನಡೆಯಲಿದೆ. ನ.೨೨ರಂದು ರಂಗೋಲಿ, ಡ್ರಾಯಿಂಗ್ ಸ್ಪರ್ಧೆ ನಡೆಯಲಿದೆ. ಮಕ್ಕಳ ಮಂಟಪ ಸ್ಪರ್ಧೆ ನಡೆಯಲಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಕಾರ್ಯದರ್ಶಿ ಪಿ.ಎಂ.ರಮೇಶ್, ಕಾರ್ಯಾಧ್ಯಕ್ಷ ಪಿ.ಬಿ.ಸುರೇಶ್, ಸದಸ್ಯರಾದ ಎಂ.ಸಿ.ಶ್ರೀನಿವಾಸ್, ಎಂ.ಟಿ.ಮದು ಹಾಜರಿದ್ದರು.