ವಾಟೆಕಾಡು ಸಸ್ಯಕ್ಷೇತ್ರ; ರಿಯಾಯಿತಿ ದರದಲ್ಲಿ ಸಸಿ-ಗಿಡಗಳ ವಿತರಣೆ

Jun 10, 2026 - 19:34
 0  971
ವಾಟೆಕಾಡು ಸಸ್ಯಕ್ಷೇತ್ರ; ರಿಯಾಯಿತಿ ದರದಲ್ಲಿ ಸಸಿ-ಗಿಡಗಳ ವಿತರಣೆ

ಮಡಿಕೇರಿ :-ಮಡಿಕೇರಿ ಸಾಮಾಜಿಕ ಅರಣ್ಯ ವಲಯದ ಹೊದ್ದೂರು ವಾಟೆಕಾಡು ಸಸ್ಯಕ್ಷೇತ್ರದಲ್ಲಿ 2026-27 ನೇ ಸಾಲಿನ ಮಳೆಗಾಲದಲ್ಲಿ ನೆಡಲು ವಿವಿಧ ಹಣ್ಣಿನ, ಔಷಧೀಯ ಹಾಗೂ ಕಾಡು ಜಾತಿಯ ಸಸಿಗಳನ್ನು ಬೆಳೆಸಲಾಗಿದೆ. ಮಹಾಗನಿ, ನೇರಳೆ, ರಕ್ತಚಂದನ, ನಿಂಬೆ, ನೆಲ್ಲಿ, ಸಂಪಿಗೆ, ಲಾವಂಚ, ಸೀಬೆ, ತೇಗ, ಹೊನ್ನೆ, ಬೀಟೆ, ಹಿಪ್ಪೆ, ಸಿಮಾರೂಬಾ, ಬಿದಿರು ಮುಂತಾದ ಸಸಿಗಳು ಲಭ್ಯವಿದ್ದು ರೈತ ಫಲಾನುಭವಿಗಳಿಗೆ ಸರ್ಕಾರದ ಹೊಸ ಪರಿಷ್ಕøತ ಆದೇಶದಂತೆ 8*12 ಅಳತೆಯ ಗಿಡ ಒಂದಕ್ಕೆ ರೂ. 6 ಮತ್ತು 6*9 ಅಳತೆಯ ಗಿಡ ಒಂದಕ್ಕೆ ರೂ. 3 ರಂತೆ ಪ್ರತಿ ಸಸಿಗೆ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು.

 ರೈತರು ತಮ್ಮ ಆಧಾರ್ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್ ಪಾಸ್‍ಬುಕ್ ಪ್ರತಿ, ತಮ್ಮ ಜಮೀನಿನ ಆರ್.ಟಿ.ಸಿ. ಪ್ರತಿಯನ್ನು ನೀಡಿ ಸಸಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮಡಿಕೇರಿ: ಉಪ ವಲಯ ಅರಣ್ಯಾಧಿಕಾರಿಗಳು 9482915684, 9164698938, ಗಸ್ತು ಅರಣ್ಯ ಪಾಲಕರು 9632995904, 9980434942 ನ್ನು ಸಂಪರ್ಕಿಸಬಹುದು ಎಂದು ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಅವರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0