ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ, ಚಿಕ್ಕ ಅಳುವಾರದಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ

ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ, ಚಿಕ್ಕ ಅಳುವಾರದಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ

ಕುಶಾಲನಗರ: ತಾಲ್ಲೂಕಿನ ಚಿಕ್ಕ ಅಳುವಾರ ಗ್ರಾಮದಲ್ಲಿ ಶಾಶ್ವತ ನೆಟ್ ವರ್ಕ್ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಳೆದ 03 ವರ್ಷಗಳ ಹಿಂದೆ ಚಿಕ್ಕ ಅಳುವಾರ ಗ್ರಾಮದಲ್ಲಿ ಭಾರತೀ ಏರ್ಟೆಲ್ ಟವರ್ ಸ್ಥಾಪನೆಯಾಗಿರುವುದು ಹೆಸರಿಗೆ ಮಾತ್ರ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೆಟ್ವರ್ಕ್ ಮಾತ್ರ ಮರೀಚಿಕೆಯಾಗಿದೆ. ಆಗಾಗ ತಾಂತ್ರಿಕ ದೋಷಗಳು ಕಾಣಿಸಿಕೂಂಡರೂ,ಏರ್ಟೆಲ್ ಸಂಸ್ಥೆ ಸಮಸ್ಯೆಗಳನ್ನು ಸರಿಯಾಗಿ ಬಗೆಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ವಿದ್ಯುತ್ ಇದ್ದಾಗ ಮಾತ್ರ ನೆಟ್ವರ್ಕ್ ಎಂಬಂತಾಗಿದೆ. ಶಾಶ್ವತ ಜನರೇಟರ್ ವ್ಯವಸ್ಥೆ ಮಾಡುತ್ತಿಲ್ಲ. ಇದರಿಂದ ಚಿಕ್ಕ ಅಳುವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಗ್ರಾಮದಲ್ಲಿಯೇ, ಕೊಡಗು ವಿಶ್ವವಿದ್ಯಾಲಯವಿದೆ. ಗ್ರಾಮದಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದಾರೆ.ಇವರೆಲ್ಲರಿಗೂ ಆಧುನಿಕ ಯುಗದಲ್ಲಿ ಅಧ್ಯಯನ ಕಷ್ಟವಾಗುತ್ತಿದೆ. ಕಳೆದ 2 ವರ್ಷಗಳಿಂದಲೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಸರ್ಕಾರದ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.ಟವರ್ ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.ಪ್ರತಿಭಟನೆಯಲ್ಲಿ ಸಂದರ್ಭ ವಿ .ಎಸ್. ಎಸ್ ಎನ್ ನಿರ್ದೇಶಕ ಮೂರ್ತಿ, ಸಂತೋಷ್, ರಾಜೇಶ್,ರವಿ , ಮಹಾದೇವ , ರಾಜೇಶ್ ಅಳುವಾರ ಗ್ರಾಮದ ನೂರಾರು ಯುವಕರು ಉಪಸ್ಥಿತರಿದ್ದರು.