CRIME

ವಿರಾಜಪೇಟೆ: ಮಾದಕವಸ್ತು ಎಂ.ಡಿ.ಎಂಎ ಮಾರಾಟ, ವ್ಯಕ್ತಿ ಬಂಧನ

admincoorgdaily

ವಿರಾಜಪೇಟೆ:ಮಾದಕವಸ್ತು, ಸೇವನೆಯಿಂದಾಗಿ ಯುವ ಸಮೂಹ ದಾರಿತಪ್ಪುತ್ತಿದೆ.ಹಣ ಮಾಡುವ ಮತ್ತು ಸಮಾಜ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಸಮೂಹವು ಪ್ರಸ್ತುತ ಸಮಾಜದಲ್ಲಿ ತನ್ನ ಕರಾಳ ಛಾಯೆಯನ್ನು ಎಲ್ಲೆಡೆ ಚಾಚುತ್ತಿದೆ.ವ್ಯಕ್ತಯೋರ್ವ ಮಾದಕವಸ್ತು ಮಾರಾಟ ಮಾಡುತಿದ್ದ ಸಂದರ್ಭದಲ್ಲಿ ಮಾದಕವಸ್ತು ಸಮೇತ ಬಂಧಿತನಾಗಿದ್ದಾನೆ.

ಮಡಿಕೇರಿ ತಾಲೂಕಿನ ಮುರ್ನಾಡು ಶಾಸ್ತ್ರೀ ನಗರದ ನಿವಾಸಿ ಪಿ. ಅಬುಬೂಕರ್ ಅವರ ಪುತ್ರ ಮ್ಯೆಕಾನಿಕ್ ವೃತ್ತಿಯ ಪಿ.ಎ. ಅಲ್ತಾಫ್ (29 ವರ್ಷ) ಎಂ.ಡಿ.ಎಂ. ಮಾರಾಟ ಮಾಡಿ ಬಂಧನವಾದ ವ್ಯಕ್ತಿ.

ಬಂಧತ ವ್ಯಕ್ತಿಯು ಮುರ್ನಾಡು ನಿಂದ ವಿರಾಜಪೇಟೆ ನಗರಕ್ಕೆ ತನ್ನ ಬಳಿಯಿದ್ದ 0.04 ಗ್ರಾಂ ಎಂ.ಡಿ.ಎಂ. ಮಾರಾಟ ಮಾಡಲು ವಿರಾಜಪೇಟೆ ನಗರಕ್ಕೆ ಆಗಮಿಸಿದ್ದ. ನಗರದ ತಾಲೂಕು ಮೈದಾನದ ಬಳಿ ತನ್ನ ಗಿರಾಕಿಗಳಿಗೆ ನೀಡಿ ಹಿಂದಿರುಗಲು ಯತ್ನಿಸಿದ್ದ ಈ ವೇಳೆ ವಿರಾಜಪೇಟೆ ನಗರದ ಠಾಣೆಯ ಪೊಲೀಸ್ ಸಿಬ್ಬಂದಿಗಳು ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದಾರೆ. ವ್ಯಕ್ತಿಯ ಬಳಿಯಿದ್ದ ಮಾದಕವಸ್ತು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯ ಮೇಲೆ 

 ವಿರಾಜಪೇಟೆ ನಗರ ಠಾಣೆಯಲ್ಲಿ ಕರ್ನಾಟಕ ರಾಜ್ಯ ಮಾದಕವಸ್ತು ನಿಯಂತ್ರಣ ಅಧಿ ನಿಯಮಗಳ ಅನ್ವಯ ಪ್ರಕರಣ ದಾಖಲು ಮಾಡಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಕೊಡಗು ಜಿಲ್ಲಾ ವರಿಷ್ಠಾಧಿಕಾರಿ,ಉಪ ವರಿಷ್ಠಾಧಿಕಾರಿ, ವಿರಾಜಪೇಟೆ ಉಪ ವಿಭಾಗ ಡಿ.ವೈ.ಎಸ್ಪಿ, ವಿರಾಜಪೇಟೆ ವೃತ್ತ ನಿರೀಕ್ಷಕರುಗಳ ಮಾರ್ಗದರ್ಶನ ದಂತೆ.ವಿರಾಜಪೇಟೆ ನಗರ ಪಿ.ಎಸ್.ಐ.,ಅಪರಾಧ ಪತ್ತೆದಳದ ಸಿಬ್ಬಂದಿಗಳು, ಎ.ಎಸ್.ಐ. ಮಂಜುನಾಥ್, ಧರ್ಮ,ಹೆಚ್.ಸಿ. ಸತೀಶ್.ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಜೋಸ್ ನಿಶಾಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ವರದಿ: ಕಿಶೋರ್ ಕುಮಾರ್ ಶೆಟ್ಟಿ