ವಿರಾಜಪೇಟೆ; ಬ್ಯೂಟಿ ಪಾರ್ಲರ್ ಗೆ ಒಂದು‌‌ ಲಕ್ಷ ರೂ ದಂಡ

ವಿರಾಜಪೇಟೆ; ಬ್ಯೂಟಿ ಪಾರ್ಲರ್ ಗೆ  ಒಂದು‌‌ ಲಕ್ಷ ರೂ ದಂಡ

ವಿರಾಜಪೇಟೆ; ತಾಲ್ಲೂಕಿನ ಚೆನ್ನಯ್ಯನಕೋಟೆ ಗ್ರಾಮದ ನಿವಾಸಿಯಾದ ಕಾವ್ಯ.ಹೆಚ್.ಎಲ್ ಎಂಬುವವರು Hair Straightening ಮತ್ತು ಇತರೇ ಸೇವೆಗಳನ್ನು ಮಾಡಿಸಿಕೊಳ್ಳಲು “Nelchi The Beauty Bay' ಪಾರ್ಲ‌್ ಗೆ ರೂ.15,000/- ಗಳನ್ನು ಪಾವತಿಸಿ ಸರ್ವೀಸ್ ಪಡೆದುಕೊಂಡಿದ್ದಾರೆ ಪಾರ್ಲ‌ನರ್‌ನವರು ಕಡಿಮೆ ಗುಣಮಟ್ಟದ ಹಾನಿಕಾರಕ ಕ್ರೀಮ್‌ಗಳನ್ನು ಬಳಸಿದ್ದರಿಂದ ಎರಡು ದಿನಗಳ ನಂತರ ಅವರ ಕೂದಲು ಒಣಗಿ ಉದುರುವಿಕೆಯಾಗಲು ಪ್ರಾರಂಭಿಸಿತು.

ಪಾರ್ಲರ್ ನವರ ಸೇವಾ ನಿರ್ಲಕ್ಷ್ಯತನದಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಕೊಡಸಿಕೊಡಬೇಕೆಂದು ಅವರ ವಿರುದ್ಧ ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ದಾಖಲಿಸಿ ತಾನು ಅನುಭವಿಸಿರುವ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೊಡಿಸಿಕೊಡಬೇಕಾಗಿ ಪ್ರಾರ್ಥಿಸಿಕೊಂಡಿರುತ್ತಾರೆ.

ಇವರ ದೂರನ್ನು ದಾಖಲಿಸಿಕೊಂಡು ಉಭಯ ಪಕ್ಷಕಾರರ ವಾದ ವಿವಾದವನ್ನು ಆಲಿಸಿದ ಜಿಲ್ಲಾ ಗ್ರಾಹಕರ ಆಯೋಗದ ಅನ್ಯ ಕರ್ತವ್ಯದ ಮೇರೆಗೆ ಇರುವ ಚಂಚಲ.ಸಿ.ಎಂ, ಅಧ್ಯಕ್ಷರು ಮತ್ತು ಗೌರಮ್ಮಣ್ಣಿ, ಸದಸ್ಯರು ಇವರು ಸದರಿ ಬ್ಯೂಟಿ ಪಾರ್ಲ‌ರ್ ನವರ ಸೇವೆಯಲ್ಲಿ ನ್ಯೂನತೆ ಕಂಡುಬಂದಿರುವುದರಿಂದ ಎದುರುದಾರರು ದೂರುದಾರರಿಗೆ ರೂ.1,00,000/- ಗಳ ಪರಿಹಾರವನ್ನು ಪಾವತಿಸಬೇಕೆಂದು ಆದೇಶ ನೀಡಿರುತ್ತಾರೆ.