ವಿರಾಜಪೇಟೆ:ಏ 17ರಿಂದ 19ರವರೆಗೆ ಬಿಲ್ಲವ ಸೇವಾ ಸಂಘದ 20ನೇ ವರ್ಷದ ಕ್ರೀಡಾಕೂಟ

ವಿರಾಜಪೇಟೆ:ಏ 17ರಿಂದ 19ರವರೆಗೆ ಬಿಲ್ಲವ ಸೇವಾ ಸಂಘದ 20ನೇ ವರ್ಷದ ಕ್ರೀಡಾಕೂಟ

ವಿರಾಜಪೇಟೆ: ವಿರಾಜಪೇಟೆ ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ 20 ನೇ ವರ್ಷದ ಕ್ರೀಡಾ ಕೂಟ ಸಮಾರಂಭ ಇದೇ ಏ17 ರಿಂದ 19 ರವರಗೆ ವಿರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವುದಾಗಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ ಗಣೇಶ್ ಹೇಳಿದರು.

 ವಿರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಕ್ರೀಡಾ ಕೂಟದ ಉದ್ಘಾಟನೆ ಎಪ್ರೀಲ್ 17 ರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಎ.18 ರಂದು ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಏ 19 ರಂದು ವಿವಿಧ ಕ್ರಿಡಾ ಕೂಟಗಳು ಮಹಿಳೆಯರಿಗೆ ಮಕ್ಕಳಿಗೆ ನಡೆಯಲಿದ್ದು ಇದರಲ್ಲಿ ಹಗ್ಗ ಜಗ್ಗಾಟ, ತ್ರೋಬಾಲ್ ಇತರೆ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಅದೇ ದಿನ ಅಪರಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕ್ರೀಡೆಯಲ್ಲಿ ವಿಜೇತರಿಗೆ ನಗದು ಮತ್ತು ಟ್ರೋಪಿ ಯನ್ನು ನೀಡಲಾಗುತ್ತದೆ.

 ಎ. 17 ರಂದು ಬಿಲ್ಲವ ಸೇವಾ ಸಂಘ ವಿರಾಜಪೇಟೆಯ ಅಧ್ಯಕ್ಷ ಬಿ.ಎಂ. ಗಣೇಶ್ ಅಧ್ಯಕ್ಷತೆಯಲ್ಲಿ ಕ್ರೀಡಾ ಕೂಟದ ಉದ್ಘಾಟನೆ ಸಮಾರಂಭ ನಡೆಯಲಿದೆ. ಕ್ರೀಡಾ ಕೂಟವನ್ನು ವಿರಾಜಪೇಟೆ ಡಿ.ವೈಎಸ್‌ಪಿ ಮಹೇಶ್ ಕುಮಾರ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಿಲ್ಲವ ಸೇವಾ ಸಂಘದ ಕ್ರೀಡಾ ಕೂಟದ ಅಧ್ಯಕ್ಷ ಬಿ.ಜೆ ಅಶೋಕ ನಿವೃತ್ತ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎನ್.ಕೆ. ಮೋಹನ್ ಕುಮಾರ್ ಉದ್ಯಮಿ ಬಿ.ಆರ್ ಬೋಜಪ್ಪ ಪೂಜಾರಿ, ಜಿಲ್ಲಾ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷ ಅಧ್ಯಕ್ಷ ರಘು ಆನಂದ, ವಿರಾಜಪೇಟೆ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳಾದ ಸುಬ್ಬಪ್ಪ ಪೂಜಾರಿ ಮತ್ತು ಬಿ.ಎಸ್ ಚಂದ್ರಶೇಖರ್ (ರಾಜ), ಪುರಸಭೆಯ ಮಾಜಿ ಸದಸ್ಯರುಗಳಾದ ಅನಿತ ಕುಮಾರ್ ಮತ್ತು ಬಿ.ಡಿ ಸುನಿತಾ, ಹಾಗೂ ನಿವೃತ್ತ ಸೆಸ್ಕಂ ನೌಕರ ಬಿ.ಎ ಗಣೇಶ್ ಉಪಸ್ಥಿತರಿರುತ್ತಾರೆ.

ಎ. 19 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲುರು ಮಠದ ಶ್ರೀ ವಿಖ್ಯಾತ ನಂದಸ್ವಾಮಿ ಕೊಡಗು, ಮೈಸೂರು ಲೋಕಸಭಾ ಸದಸ್ಯರಾದ ಯದುವೀರ್ ಒಡೆಯರ್ ಶಾಸಕರು ರಾಜ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ನಾರಾಯಣ ಗುರು ಯುವ ವೇದಿಕೆ ರಾಜ್ಯಧ್ಯಕ್ಷ ಸತ್ಯಜಿತ್ ಸುರತ್ಕಲ್ ನಿವೃತ್ತ ನ್ಯಾಯಾಧೀಶರಾದ ಬಿ.ಎಂ. ರಾಜು, ವಿರಾಜಪೇಟೆ ಎಸ್.ಐ ವಾಣಿಶ್ರೀ, ಗೋವಾದ ಉದ್ಯಮಿ ಪ್ರಕಾಶ್ ರಾಮಯ್ಯ ಪೂಜಾರಿ ಸೇರಿದಂತೆ ಗಣ್ಯ ಪ್ರಮುಖರು ಜಿಲ್ಲಾ ವಿವಿಧ ಬಿಲ್ಲವ ಸೇವಾ ಸಂಘದ ಪ್ರಮುಖರು ಉಪಸ್ಥಿತರಿರುತ್ತಾರೆ.

ಈ ಕ್ರೀಡಾ ಕೂಟದಲ್ಲಿ ಸಮಾಜದ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸುವಂತೆ ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಗಣೇಶ್ ಕೋರಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಸ್ ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜರ್ನಾಧನ, ಕ್ರೀಡಾ ಕೂಟದ ಸಮಿತಿಯ ಅಧ್ಯಕ್ಷ ಬಿ.ಜೆ ಅಶೋಕ, ಸಂಘದ ಖಜಾಂಚಿ ಬಿ.ಎಂ ಸತೀಶ್ ಪೂಜಾರಿ, ಸದಸ್ಯರಾದ ಬಿ.ಎಂ ಕಿಶೋರ್ ಉಪಸ್ಥಿತರಿದ್ದರು.