ವಿರಾಜಪೇಟೆ: ಶಾಲೆಗೆ ದಾನ ನೀಡಿದ ಸ್ಥಳ ವಿವಾದ, ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಹಲ್ಲೆ
ವಿರಾಜಪೇಟೆ:ವಿದ್ಯಾ ದಾನಂ ಮಾಹಾ ದಾನಂ,ಪೂರಕವಾಗಿ ದೂರದೃಷ್ಟಿ ಹೊಂದಿದ ಹಿರಿಯ ಗ್ರಾಮಸ್ಥರು ತಮ್ಮ ಪಾಲಿಗೆ ಬಂದ ಸ್ಥಳವನ್ನು ಸರ್ಕಾರಿ ಶಾಲೆಗೆ ಉದಾರವಾಗಿ ನೀಡಿದ್ದರು.ಸ್ಥಳ ನಮಗೆ ಸೇರಬೇಕು ಎಂದು ತಕರಾರು ಎತ್ತಿ ಅಧಿಕಾರಿಗಳ ಮುಂದೆ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಹಲ್ಲೆ ನಡೆಸಿದ ಘಟನೆ ಗುಂಡಿಗೆರೆ ಶಾಲೆಗೆ ಸೇರಿದ ವಿವಾದಿತ ಸ್ಥಳದಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮ ಪಂಚಾಯತಿ ವಾರ್ಡ್ ಒಂದರ ಸದಸ್ಯರು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡಿಗೆರೆ ಎಸ್.ಡಿ.ಎಂ.ಸಿ ಸಮಿತಿ ಯ ಸದಸ್ಯರಾದ ರಜಾಕ್ ಎಂ.ಎಂ. ( 42) ಹಲ್ಲೆಗೊಳಗಾಗಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ.
ಘಟನೆ ಸಾರಾಂಶ:
ಗುಂಡಿಕೆರೆ ಗ್ರಾಮದಲ್ಲಿ ವಾಸ ಮಾಡುವ ನಿವಾಸಿಗಳಿಗೆ ಕಲಿಕೆಯು ಹತ್ತಿರವಾಗಬೇಕು ಮತ್ತು ಸಾಕ್ಷರತೆ ಪ್ರಮಾಣ ಹೆಚ್ಚಗಾಬೇಕು ಎನ್ನುವ ಮನೋಭಾವ ಹೊಂದಿದ್ದ ಗ್ರಾಮದ ಹಿರಿಯರು 1964 ರಲ್ಲಿ ಐಮದ್ ಹಾಜಿ ಅವರು 50 ಸೆಂಟ್ ಸ್ಥಳ ಮತ್ತು ಆಲಿ ಹಾಜಿ 50 ಸೆಂಟ್ ಸ್ಥಳ ಸರ್ವೆ ಸಂಖ್ಯೆ 268/1 ಮತ್ತು 279/1 ನ್ನು ತಾ.07-10-1964 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಗೆ ಧಾನದ ರೂಪದಲ್ಲಿ ಸ್ಥಳವನ್ನು ಉದಾರವಾಗಿ ನೀಡಿದ್ದರು.
ಸಮಿತಿಯು ಧಾನ ನೀಡಿದ ಸ್ಥಳವನ್ನು ದಾಖಲೆ ಪತ್ರ ಮಾಡಿಸಿಕೊಂಡಿತು. ದಿನಗಳು ಉರುಳಿದ ನಂತರ ಧಾನಿಗಳ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಆಸೆಯು ಗರಿಕೆದರಿ ಧಾನ ನೀಡಿದ ಸ್ಥಳವನ್ನು ಲಪಟಾಯಿಸುವ ಸಂಚು ರೂಪಿತವಾಯಿತು.
ಐಮದ್ ಹಾಜಿ ಅವರ ಮಗ ಸಿ.ಎ. ಇಸ್ಮಾಯಿಲ್, ಮತ್ತು ಎಂ.ಎ. ಹಸೈನರ್ ವಿರಾಜಪೇಟೆ ನ್ಯಾಯಾಲಯದಲ್ಲಿ ಸ.ಹಿ.ಪ್ರಾ.ಶಾಲೆ ಅಭಿವೃದ್ಧಿ ಸಮಿತಿಯ ವಿರುದ್ದ ಸ್ಥಳ ನಮಗೆ ನೀಡಬೇಕು ಎಂದು ದಾವೆ ಹೂಡಲಾಯಿತು. ಹಲವು ಕಾಲ ವ್ಯಾಜ್ಯವು ನಡೆದು ವಿರಾಜಪೇಟೆ ನ್ಯಾಯಾಲಯವು ಶಾಲಾ ಸಮಿತಿ ಯ ಪರವಾಗಿ ತೀರ್ಪು ನೀಡಿತು.
ತೀರ್ಪು ವಿರುದ್ದ ದಾನಿಗಳ ಸಂಬಂಧಿಕರು ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಜಿಲ್ಲಾ ನ್ಯಾಯಾಲಯವು ತಾಲೂಕು ನ್ಯಾಯಾಲಯ ನೀಡಿದ ತೀರ್ಪು ನ್ನು ಎತ್ತಿಹಿಡಿಯಿತು. ನ್ಯಾಯಾಲಯವು ಶಾಲಾ ಸಮಿತಿಯ ಪರವಾಗಿ ತೀರ್ಪು ನೀಡಿತು. ಈ ತೀರ್ಪು ವಿರೋಧಿ ಬಣಕ್ಕೆ ತುಂಬಲಾರದ ನಷ್ಟ ಉಂಟಾಯಿತು. ಎರಡು ನ್ಯಾಯಾಲಯವು ನೀಡಿರುವ ತೀರ್ಪು ವಿರುದ್ದ ರಾಜ್ಯ ಉಚ್ಚ ನ್ಯಾಯಾಲಯದ ದಾವೆ ಹೂಡಿದರು. ಉಚ್ಚ ನ್ಯಾಯಾಲಯವು ದಾವೆಯ ತನಿಖೆ ಮುಂದುವರೆಸಿತು. ಇದರ ಭಾಗವಾಗಿ ಉಚ್ಚ ನ್ಯಾಯಾಲಯವು ಸ್ಥಳ ಪರಿಶೀಲನೆ ಮಾಡುವಂತೆ ಕಮಿಷನರ್ ಗುರು ಪ್ರಸಾದ್ ಹೆಗ್ಗಡೆ ಅವರನ್ನು ನೇಮಿಸಿ ಕಳುಹಿಸಲಾಯಿತು. ತಾ. 22-11-2025 ರಂದು ಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ವಿರಾಜಪೇಟೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ, ವಲಯದ ಶಿಕ್ಷಣ ಸಂಪನ್ಮೂಲನ ವ್ಯಕ್ತಿಗಳು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು, ಹಾಗೂ ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ವರ್ಗ ಮತ್ತು ವಾರ್ಡ್ ಒಂದರ ಪಂಚಾಯಿತಿ ಸದಸ್ಯರು
ಹಾಗೂ ಎಸ್ಡಿಎಂಸಿ ಸದಸ್ಯರು ಆದ ರಜಾಕ್ ಹಾಜರಿದ್ದರು. ಈ ವೇಳೆಯಲ್ಲಿ ನ್ಯಾಯಾಲಯದಿಂದ ನಿಯುಕ್ತಿಗೊಂಡ ಕಮೀಷನರ್ ಅವರು ಶಾಲೆಯ ಸ್ಥಳದ ಪರಿಶೀಲನೆ ಮಾಡಲು ಮುಂದಾಗಿದ್ದರು. ಸ್ಥಳ ದಾನಿಗಳ ಸಂಬಂಧಿಕರ ಪರ ನಿಯೋಜಿಸಿದ ವ್ಯಕ್ತಿ ಹಾಜರಿದ್ದು ಕಮಿಷನರ್ ಗೆ ತಪ್ಪು ಮಾಹಿತಿ ಹೇಳಿಕೊಡುತಿದ್ದರು. ಇದರಿಂದ ಕುಪಿತಗೊಂಡ ರಜಾಕ್ ಅವರು ದಾಖಲೆ ಮತ್ತು ಶಾಲಾ ಮಾಹಿತಿಗಳು ನನ್ನ ಬಳಿಯಿದೆ. ತಾವು ತಪ್ಪು ವಿವರಣೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಕೆ ಎಂ ಇಸ್ಮಾಯಿಲ್ ಅಕ್ಕ ರಮ್ಲಾಬಿ ಮತ್ತು ಗಂಡ ಸಿ ಎ ಇಸ್ಮಾಯಿಲ್ ನೀನು ಅವರ ಜೊತೆ ಮಾತಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ ಮೇರೆಗೆ ನಾನು ಈ ವಾರ್ಡಿನ ಪಂಚಾಯಿತಿ ಸದಸ್ಯನಾಗಿದ್ದೀನಿ . ಮತ್ತು ಎಸ್‌ಡಿಎಂಸಿ ಸದಸ್ಯನಾಗಿದ್ದೀನಿ ನನಗೆ ಮಾತಾಡುವ ಹಕ್ಕು ಇದೆ ಎಂದು ಹೇಳುತ್ತಿರುವಾಗ ಮಾತಿನಿಂದ ದಾನಿಗಳ ಮಗ ಮತ್ತು ಸಂಬಂಧಿಕರು ಏಕಾಏಕಿಯಾಗಿ ರಜಾಕ್ ಮೇಲೆ ಹಲ್ಲೆಗೆ ಮುಂದಾದರು. ಕೈಯಿಂದ ಮತ್ತು ಕುರ್ಚಿಯಿಂದ ತಲೆಯ ಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ಶೀರದ ಒಳಭಾಗದಲ್ಲಿ ನೋವು ಸಂಭವಿಸಿ. ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಾಗಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ನಗರ ಠಾಣೆಯಲ್ಲಿ ಗುಂಡಿಕೆರೆ ಬೇಟೋಳಿ ಗ್ರಾಮದ ಇಸ್ಮಾಯಿಲ್ ಕೆ.ಎಂ. ಅಕ್ಕ ರಮ್ಲಾಬಿ ಮತ್ತು ಅವರ ಗಂಡ ಇಸ್ಮಾಯಿಲ್ ಸಿ.ಎ. ಮೂವರ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಪ್ರಕರಣದ ಗಂಭೀರ ವಾಗಿ ಪರಿಗಣಿಸಬೇಕು. ಮತ್ತು ಶಾಲಾ ಸಮಿತಿ ಸದಸ್ಯರಾದ ರಜಾಕ್ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸುತ್ತೇವೆ ಎಂದು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಲ್ಲೆ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.
ವರದಿ: ಕಿಶೋರ್ ಕುಮಾರ್ ಶೆಟ್ಟಿ