ವಿರಾಜಪೇಟೆ: ಗಣಿಗಾರಿಕೆ ವಿವಾದ ಗಂಭೀರತೆ ಪಡೆಯುತ್ತಿದ್ದಂತೆ ದಿಡೀರ್ ಸಭೆ ನಡೆಸಿದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು
ವಿರಾಜಪೇಟೆ: ಅರಮೇರಿ ಮತ್ತು ಕಡಂಗಮೂರುರು ಗ್ರಾಮದಂಚಿನಲ್ಲಿ ವಿವಾದಕ್ಕೆ ಈಡಾಗಿರುವ ಗಣಿಗಾರಿಕೆ ವಿಚಾರದಲ್ಲಿ ಈ ಭಾಗದಲ್ಲಿ 200 ಮೀ ವ್ಯಾಪ್ತಿಯಲ್ಲಿರುವ ವಸತಿ ಗದ್ದೆ ಕಾಫಿ ತೋಟಗಳ ಮರು ಸರ್ವೆ ನಡೆಸಿ ವರದಿ ಬಂದ ಬಳಿಕ ಗಣಿಗಾರಿಕೆ ಮುಂದುವರಿಕೆ ಅಥಾವ ನಿಲುಗಡೆ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಅಲ್ಲಿಯವರಗೆ ಗಣಿಗಾರಿಕೆ ನಡೆಸದಂತೆ ಪರವಾನಿಗೆದಾರ ವೇಣುಗೋಪಾಲ್ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಸಂದೀಪ್ ಸೂಚನೆ ನೀಡಿದರು.
ಅರಮೇರಿ ಹಾಗೂ ಕಡಂಗಮೂರುರು ವ್ಯಾಪ್ತಿಯಲ್ಲಿ ಗಣಿಗಾರಿಕೆಯ ವಿವಾದ ಪಡೆಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ನೀಡಿದರು ಸಭೆ ನಡೆಸದೆ ಇದ್ದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ದಿಡೀರನೆ ಜು,1 ರಂದು ಗ್ರಾಮಸ್ಥರ ಸಭೆಯನ್ನು ಕಡಂಗಮೂರುರು ಗ್ರಾಮದ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಸಿದ ಸಭೆಯು ಗ್ರಾಮಸ್ಥರು ಈ ವಿಚಾರವಾಗಿ ಮಾತನಾಡುವಾಗ,
ಗಣಿಗಾರಿಕೆದಾರನ ಕಡೆಯಿಂದ ಉಪ ಗುತ್ತಿಗೆ ಪಡೆದವರು ಸಭೆಯಲ್ಲಿ ಮಾತಿನ ಚಕಮಕಿ ಮತ್ತು ವಾಗ್ವದ ತೀವ್ರವಾಗಿತ್ತು. ಇತ್ತಿಚೆಗೆ ಕಂದಾಯ ಪರಿವೀಕ್ಷಕರು ಸ್ಥಳಕ್ಕೆ ಬಂದಾಗಲು, ಗುತ್ತಿಗೆದಾರರಿಂದಾಗಿ ಆರೋಪ ಪ್ರತ್ಯರೋಪ ದಿಂದ ಸಭೆಯಲ್ಲಿ ಬಿಗುವಿನ ವಾತವಾರಣ ಕಂಡು ಬಂದಾಗ ಪೊಲೀಸರು ಮದ್ಯ ಪ್ರವೇಶ ಮಾಡಿದ್ದು ಗಮನಾರ್ಹವಾಗಿತ್ತು.
ಈ ಗೊಂದಲಗಳ ನಡುವೆ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಭೆಯಿಂದ ನಿರ್ಗಮಿಸಿದಾಗ ಮತ್ತೆ ಗ್ರಾಮಸ್ಥರು ಅವರನ್ನು ಕರೆ ತಂದು ಈ ಕುರಿತು ಸ್ವಷ್ಠ ನಿಲವು ಏನೇಂದು ತಿಳಿಸಿ ಎಂದು ಆಗ್ರಹಿಸಿದರು.
ಗ್ರಾಮ ನಿವಾಸಿ ನಿವೃತ ಶಿಕ್ಷಕ ಗೋವಿಂದ ರಾಜು ಮಾತನಾಡಿ ಈ ಗಣಿಗಾರಿಕೆ ಸ್ಥಳ 50 ರಿಂದ 100 ಮೀ ಒಳಗೆ ಹಲವು ಮನೆಗಳು ಇದ್ದು ಕಾಫಿ ತೋಟ ಗದ್ದೆ ಇದೆ ಇದರಿಂದ ಗ್ರಾಮದ ನೆಲ ಜಲ ಕೃಷಿ ಎಲ್ಲಾದಕ್ಕೂ ಅಪಾಯ ಇದ್ದು ಗಣಿಗಾರಿಕೆಗೆ ಪರವಾನಿಗೆ ನೀಡಿದು ತಪ್ಪು ಎಂದರಲ್ಲದೆ ಅದನ್ನು ಹಿಂಪಡೆಯಲು ಆಗ್ರಹಿಸಿದರು.
ಕೋದಂಡ ಸುರ ಅಯ್ಯಪ್ಪ ಇದಕ್ಕೆ ಪೂರಕವಾಗಿ ಮಾತನಾಡಿ ಈ ಭಾಗದಲ್ಲಿ ಗಣಿಗಾರಿಕೆ ಅರಂಭಿಸಿದರಿಂದ ಮಣ್ಣು ಹರಿದು ಪಕ್ಕದಲ್ಲಿರುವ ಕರೆ ಭಾಗಶ ಮುಚ್ಚುತ್ತಿದೆ. ಸ್ವೋಟದ ತೀವ್ರತೆಗೆ ಮನೆ ಮಾತ್ರವಲ್ಲದೆ ನೀರಿನ ಹರಿವಿನ ನಾಳಗಳ ಬದಲಾವಣೆ ಗೊಂಡು ಸುತ್ತಲಿನ ಕುಡಿಯುವ ನೀರಿನ ಸೆಳೆಗಳು ಬತ್ತಲಿವೆ. ಇಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು ಸ್ವಂದಿಸದೆ ಇರುವುದು ಸರಿಯಲ್ಲ. ಇನ್ನಾದರು ಪರವಾನಿಗೆ ನೀಡಿದ್ದನ್ನು ರದ್ದು ಪಡಿಸುವಂತೆ ಗಣಿಗಾರಿಕೆ ಸಂಬಂಧ ಹಿಂದೆ ನಡೆಸಿದ ಅಂತರಿಕ ಸರ್ವೆ ನಕಾಶೆ ವರದಿಗಳನ್ನು ಸಾಬೀತುಪಡಿಸುವಂತೆ ಆಗ್ರಹಿಸಿದರು.
ಹಿರಿಯ ಭೂ ವಿಜ್ಞಾನಿ ಸಂದೀಪ್, ಸಭೆಯಲ್ಲಿದ್ದ ಪರವಾನಿಗೆ ಪಡೆದ ವೇಣುಗೋಪಾಲ್ ರನ್ನು ಫೇಬ್ರವರಿಯಲ್ಲಿ ಪರವಾನಿಗೆ ದೊರೆತರು ಅಧಿಕೃತವಾಗಿ ಗಣಿಗಾರಿಕೆ ಅರಂಭಿಸಲು ಇರುವ ಮಾನದಂಡಗಳ ಪರಿಶೀಲನೆ ಬಳಿಕ ಗಣಿಗಾರಿಕೆ ನಡೆಸಲು ಸೂಚಿಸಿದ್ದರು. ಗಣಿಗಾರಿಕೆ ನಿಯಮ ಮೀರಿ ನಡೆಸಿದ್ದಿರ. ಉಪ ಗುತ್ತಿಗೆ ನೀಡಿರುವುದು ನಿಯಮ ಬಾಹಿರ ನಿಮ್ಮ ಪರವಾನಿಗೆ ರದ್ದು ಪಡಿಸಲಾಗುತ್ತದೆ ಎಂದು ಎಚ್ಚರಿಸಿ ಉಪ ಗುತ್ತಿಗೆ ಮಾತನಾಡುವುದು ಸೂಕ್ತವಲ್ಲ ಎಂದರು.
ಸಭೆಯಲ್ಲಿ ಕಂದಾಯ ಪರಿವೀಕ್ಷಕ ಹರೀಶ್, ಹೆಚ್ಚುವರಿ ತಹಶೀಲ್ದಾರ್ ಪ್ರದೀಪ್ ಕುಮಾರ್, ಅರಮೇರಿ ಗ್ರಾ, ಪಂ, ಅಭಿವೃದ್ದಿ ಅಧಿಕಾರಿ ಮಂಜುಳ, ಸಹಾಯಕ ಭೂ ವಿಜ್ಞಾನ ಅಧಿಕಾರಿ ರಾಹುಲ್, ಬಲಟಿಕಾಳಂಡ ಮುದ್ದಣ್ಣ ಮತ್ತು ಮಾದಪ್ಪ, ಪೋಳಂಡ ಮಾಚಯ್ಯ ಮತ್ತು ಪೂಣಚ್ಚ, ಮಂಜುಳಾ ಅಯ್ಯಪ್ಪ, ಬಲ್ಯಂಡ ಉದಯ, ಸಭೆಯಲ್ಲಿ ಮಾತನಾಡಿದರು. ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ
What's Your Reaction?
Like
0
Dislike
0
Love
0
Funny
0
Angry
0
Sad
0
Wow
1

