ವಿರಾಜಪೇಟೆ:ವಾಗ್ದಾನ ಅನುಷ್ಠಾನ - ಜನತಾ ನ್ಯಾಯಾಲಯದಲ್ಲಿ 3ನೇ ಅಫೀಡವಿಟ್ ಎಂಬ ಶಾಸಕ ಪೊನ್ನಣ್ಣ ರವರ ಕಾಮಗಾರಿ ಅನುಷ್ಠಾನಗಳ ಪುಸ್ತಕ ಬಿಡುಗಡೆ

Jul 10, 2026 - 09:25
 0  166
ವಿರಾಜಪೇಟೆ:ವಾಗ್ದಾನ ಅನುಷ್ಠಾನ - ಜನತಾ ನ್ಯಾಯಾಲಯದಲ್ಲಿ 3ನೇ ಅಫೀಡವಿಟ್ ಎಂಬ ಶಾಸಕ ಪೊನ್ನಣ್ಣ ರವರ ಕಾಮಗಾರಿ ಅನುಷ್ಠಾನಗಳ ಪುಸ್ತಕ ಬಿಡುಗಡೆ

ವಿರಾಜಪೇಟೆ: ತಾವು ಶಾಸಕರಾಗಿ ಆಯ್ಕೆಯಾದ ಬಳಿಕ, ಪ್ರತಿವರ್ಷದಂತೆ ಈ ವರ್ಷವೂ ತಮ್ಮ ಸಾಧನೆಯ ಹೊತ್ತಗೆಯನ್ನು ಸಾರ್ವಜನಿಕರ ಅವಗಾಹನೆಗೆ ವಿರಾಜಪೇಟೆ ಶಾಸಕರಾದ ಎಎಸ್ ಪೊನ್ನಣ್ಣ ಅವರು ಬಿಡುಗಡೆಗೊಳಿಸಿದರು.

ವಾಗ್ದಾನ ಅನುಷ್ಠಾನ ಎಂಬ ಹೆಸರಿನ ಈ ಪುಸ್ತಕದಲ್ಲಿ ಕಳೆದ ಸಾಲಿನಲ್ಲಿ ಶಾಸಕರು ಕೈಗೊಂಡಿರುವ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಇದ್ದು, ಕ್ಷೇತ್ರದ ಜನತೆ ಹಾಗೂ ಸಾರ್ವಜನಿಕರು ಇದನ್ನು ಓದುತ್ತಾ ಶಾಸಕರ ಕೆಲಸ ಕಾರ್ಯಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕರಾದ ಎಎಸ್ ಪೊನ್ನಣ್ಣ, ಜನರ ಮಧ್ಯೆ ಚೆನ್ನಾಗಿ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವುದು ತನಗೆ ಅತ್ಯಂತ ಸಂತೋಷ ನೀಡಿದೆ. ಸಾರ್ವಜನಿಕ ಜೀವನದ ಕಳೆದ ಆರು ವರ್ಷ ತನ್ನ ಪಾಲಿನ ಅದ್ಭುತ ಕ್ಷಣಗಳು ಎಂದು ಬಣ್ಣಿಸಿದ ಮಾನ್ಯ ಶಾಸಕರು, ಜನರ ಪ್ರೀತಿ ವಿಶ್ವಾಸವೇ ತನಗೆ ಶ್ರೀರಕ್ಷೆ ಎಂದು ಮನದಾಳದ ಮಾತುಗಳನ್ನು ಆಡಿದರು.

 ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಶ್ರೀ ಕಾಂಚನ್ ಪೊನ್ನಣ್ಣ, ಶಾಸಕರ ಜೇಷ್ಠ ಸಹೋದರರಾದ ಶ್ರೀ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಧರ್ಮಗುರುಗಳು, ವಿರಾಜಪೇಟೆ ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ನಗರ ಅಧ್ಯಕ್ಷರು ಮಾಳೆಟೀರ ಬೋಪಣ್ಣ, ಎಲ್ಲಾ ಘಟಕದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು, ಮಾನ್ಯ ಪೊನ್ನಣ್ಣ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0