ಶಾಸಕ ಎ.ಎಸ್ ಪೊನ್ನಣ್ಣಗೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಿಂದ ಸನ್ಮಾನ

Jun 19, 2026 - 19:56
 0  334
ಶಾಸಕ ಎ.ಎಸ್  ಪೊನ್ನಣ್ಣಗೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಿಂದ ಸನ್ಮಾನ

ವಿರಾಜಪೇಟೆ, ಜೂನ್ 19: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ವಿರಾಜಪೇಟೆ ತಾಲೂಕು ಘಟಕದ 2026-2031ರ ಅವಧಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳು ಇಂದು ವಿರಾಜಪೇಟೆಯಲ್ಲಿ ಶಾಸಕ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿ ಸನ್ಮಾನಿಸಿದರು.

ಶಾಸಕರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ನಂತರ ಶಾಸಕರು ನೂತನ ಅಧ್ಯಕ್ಷ ಶ್ರೀ ಪ್ರವೀಣ್, ಉಪಾಧ್ಯಕ್ಷರಾದ ಶ್ರೀಮತಿ ಸೀತಾ ಹಾಗೂ ಶ್ರೀ ರಮಾನಂದ, ಕಾರ್ಯದರ್ಶಿ ಶ್ರೀ ವಿಜಯ್ ಕುಮಾರ್, ಖಜಾಂಚಿ ಶ್ರೀಮತಿ ಗೀತಾಂಜಲಿ, ಸಂಘಟನಾ ಕಾರ್ಯದರ್ಶಿ ಶ್ರೀ ಎಸ್. ವೆಂಕಟೇಶ್ ಅವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.

ನೂತನ ಪದಾಧಿಕಾರಿಗಳು ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ ಅವರಿಗೂ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಶಿಕ್ಷಕರ ಸಂಘದ ಮಾಜಿ ನಿರ್ದೇಶಕ ಎ ವಿ ಮಂಜುನಾಥ್, ನಿವೃತ್ತ ಶಿಕ್ಷಕರಾದ ಕೆಎನ್ ಮಂಜುನಾಥ್, ನಿಕಟ ಪೂರ್ವ CRP ಶ್ರೀ ವೆಂಕಟೇಶ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0