ವೀರಾಜಪೇಟೆ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ವತಿಯಿಂದ ಅಸ್ಸಿರಾತುಲ್ ಮುಸ್ತಖೀಮ್ ಆದರ್ಶ ಶಿಬಿರ: ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರಿಗೆ ಸನ್ಮಾನ
ಗೋಣಿಕೊಪ್ಪ:ಇಲ್ಲಿನ ಮದರಸ ಆವರಣದಲ್ಲಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಉಪಾಧ್ಯಕ್ಷ ಇಸ್ಮಾಯಿಲ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು ಅಸ್ಸಿರಾತುಲ್ ಮುಸ್ತಖೀಂ ಕಾರ್ಯಕ್ರಮ ನಡೆಯಿತು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಎಂ.ಎಂ ಅಬ್ದುಲ್ಲಾ ಮುಸ್ಲಿಯಾರ್ ಸಮಸ್ತ ಸಮುದಾಯಕ್ಕೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದರು. ಸಮಸ್ತ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರಿಗೆ ವಿರಾಜಪೇಟೆ ರೇಂಜ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಸ್ಸಿರಾತುಲ್ ಮುಸ್ತಖೀಮ್ ಆದರ್ಶ ಶಿಬಿರದ ಬಗ್ಗೆ,ಇರ್ಷಾದ್ ಫೈಝಿ ಪಾಂಡಿಕ್ಕಾಡ್ ಮಾತನಾಡಿದರು.
ಈ ಸಂದರ್ಭ ಸ್ಥಳೀಯ ಖತೀಬ್ ಮೊಹಮ್ಮದ್ ಅಲಿ ಫೈಝಿ, ಉಮ್ಮರ್ ಫೈಝಿ,ಬಷೀರ್ ಹಾಜಿ, JM ಅಧ್ಯಕ್ಷ ನಾಸರ್, ಕಾರ್ಯದರ್ಶಿ ಸಮದ್ MC, ಅಶ್ರಫ್ ಮುಸ್ಲಿಯಾರ್, ಅಬ್ದುಲ್ಲಾ ಮುಸ್ಲಿಯಾರ್ ಮತ್ತಿತರು ಹಾಜರಿದ್ದರು. ರೇಂಜ್ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಫೈಝಿ ಸ್ವಾಗತಿಸಿ, ಶುಹೈಬ್ ಫೈಝಿ ವಂದಿಸಿದರು.