Kodagu

ವಕ್ಫ್ ಬೋರ್ಡ್ ನಿಂದ ಕೊಡಗು ಜಿಲ್ಲೆಗೆ 20ಕೋಟಿ ರೂ ಅನುದಾನ ಬಿಡುಗಡೆ: ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸನ್ಮಾನ

admincoorgdaily

ವಕ್ಫ್ ಬೋರ್ಡ್ ನಿಂದ ಕೊಡಗು ಜಿಲ್ಲೆಗೆ 20ಕೋಟಿ ರೂ ಅನುದಾನ ಬಿಡುಗಡೆ: ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸನ್ಮಾನ

ವಿರಾಜಪೇಟೆ:ರಾಜ್ಯ ವಕ್ಫ್ ಬೋರ್ಡ್ ನಿಂದ ಸುಮಾರು ₹ 20 ಕೋಟಿ ಅನುದಾನ ಬಿಡುಗಡೆ ಮಾಡಿಸಿದ, ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರಿಗೆ, ಜಿಲ್ಲೆಯ ಮಸೀದಿಯ ಅಧ್ಯಕ್ಷರುಗಳು ಆಗಮಿಸಿ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅದ್ಯಕ್ಷರಾದ ಹನೀಫ್, ತಾಲ್ಲೂಕು ಅಲ್ಪಸಂಖ್ಯಾತ ಅಧ್ಯಕ್ಷರಾದ ಕೋಳುಮಂಡ ರಫೀಕ್, ಹಿರಿಯರಾದ ಎರ್ಮು ಹಾಜಿ, ಡಿಸಿಸಿ ಉಪಾಧ್ಯಕ್ಷರು ಅಬ್ದುಲ್ ರೆಹಮಾನ್,ಶಾಫಿ ಎಡಪಾಲ, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಪ್ರಮುಖರಾದ ಸಲಾಂ, ಇಸ್ಮಾಯಿಲ್, ಹಮೀದ್, ಅಂದಾಯಿ, ನೌಶಾದ್, ರಜಾಕ್, ಶಬೀರ್, ಸಿರಾಜ್, ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಅಲ್ಲದೆ ಮುಂದಿನ ದಿನಗಳಲ್ಲಿ, ಅಲ್ಪಸಂಖ್ಯಾತ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಿ, ಬೃಹತ್ ಸಮಾವೇಶ ನಡೆಸಿ ಕೊಡುವಂತೆ  ಶಾಸಕರಲ್ಲಿ ಮನವಿ ಮಾಡಿದರು.