Kodagu

ಕನ್ನಡಾಭಿಮಾನ, ಭಾಷೆಯ ಬಗ್ಗೆ ಪ್ರೇಮವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು:ಶಾಸಕ ಎ‌ಎಸ್ ಪೊನ್ನಣ್ಣ

admincoorgdaily

ವಿರಾಜಪೇಟೆಯ: ತಾಲೂಕು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕನ್ನಡ ಧ್ವಜಾರೋಹಣ ಮಾಡಿ ಧ್ವಜ ವಂದನೆ ಸಲ್ಲಿಸಿದ ಬಳಿಕ ಗೌರವ ಸ್ವೀಕರಿಸಿ ಮಾತನಾಡಿದ ಮಾನ್ಯ ಶಾಸಕರು, ಸಮಸ್ತ ಕರ್ನಾಟಕದ ಜನತೆ ಇಂದು ಹೆಮ್ಮೆಪಡುವ ದಿನ. ನಮ್ಮ ಭಾಷೆ ನಮ್ಮ ನೆಲ ನಮ್ಮ ಜಲ ಸದಾ ನಮ್ಮೊಂದಿಗಿರುತ್ತದೆ. ನಮ್ಮತನವನ್ನು ಸದಾ ಉಳಿಸಿಕೊಳ್ಳಲು ನಾವು ನಮ್ಮ ಭಾಷೆಗೆ ನೀಡುವ ಗೌರವ, ಅಭಿಮಾನದಿಂದ ಪೋಷಿಸುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಕನ್ನಡ ಭಾಷೆಯ ಬಗ್ಗೆನ ಅಭಿಮಾನ ಕೇವಲ ಇನ್ನೊಂದು ದಿನಕ್ಕೆ ಮಾತ್ರ ಸೀಮಿತವಾಗದೆ, ಸದಾ ಕನ್ನಡಾಭಿಮಾನ, ಕನ್ನಡದ ನಾಡು, ಜಲ, ಭಾಷೆಯ ಬಗ್ಗೆ ಪ್ರೇಮವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಸುಜಾ ಕುಶಾಲಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಜಾನ್ಸನ್, ತಹಶೀಲ್ದಾರ್ ಪ್ರವೀಣ್, ಪುರಸಭೆ ಉಪಅಧ್ಯಕ್ಷೆ ಫಸಿಯಾ ತಬ್ಸುಂ, ಪುರಸಭೆ ಸದಸ್ಯರು ರಂಜಿ ಪೂಣಚ್ಚ, ಮತೀನ್, ರಾಫಿ, ರಾಜೇಶ್, ರವಿ, ಬೆನ್ನಿ, ಹಮೀದ್, ಅತಿಫ್, ಪೊಲೀಸ್ ಅಧಿಕಾರಿಗಳು ಹಾಗೂ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರು ಇದ್ದರು.