ಕಾಡಾನೆ ದಾಳಿ: ಬೆಳೆಗಾರನಿಗೆ ಗಂಭೀರ ಗಾಯ

May 27, 2026 - 11:04
 0  2k
ಕಾಡಾನೆ ದಾಳಿ: ಬೆಳೆಗಾರನಿಗೆ  ಗಂಭೀರ ಗಾಯ

ಸಿದ್ದಾಪುರ : ಕಾಡಾನೆ ದಾಳಿಗೆ ಬೆಳೆಗಾರರೋರ್ವರು ಗಂಭೀರವಾದ ಗಾಯಗೊಂಡ ಘಟನೆ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಅಭ್ಯತ್ ಮಂಗಲ ಒಂಟಿಯಂಗಡಿಯಲ್ಲಿ ನಡೆದಿದೆ.

 ಅಭ್ಯತ್ ಮಂಗಲ ಒಂಟಿಯಂಗಡಿ ನಿವಾಸಿ ಅಂಚೆಮನೆ ಸುದಕುಮಾರ್(56) ಎಂಬುವವರು ಮಂಗಳವಾರ ರಾತ್ರಿ ತಮ್ಮ ಮನೆಯ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿರುವ ಸಂಧರ್ಭದಲ್ಲಿ ದಿಡೀರನೆ ಕಾಡಾನೆಯು ದಾಳಿ ನಡೆಸಿದೆ. ಕಾಡಾನೆ ದಾಳಿಯ ಸಂಧರ್ಭದಲ್ಲಿ ವ್ಯಕ್ತಿಯ ಕಿರುಚಾಟದ ಶಬ್ದ ಕೇಳಿ ಸ್ಥಳೀಯರು ಹೊರಬಂದು ಶಬ್ದ ಮಾಡಿ ಕಾಡಾನೆಯನ್ನು ಹಟ್ಟಿದ್ದಾರೆ.ಕಾಡಾನೆ ದಾಳಿಯಿಂದ ಗಂಭೀರವಾದ ಗಾಯಗೊಂಡಿದ್ದು ಕೂಡಲೇ ಅಮ್ಮತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅದೃಷ್ಟವಶಾತ್ ಗಾಯಾಳು ಪ್ರಾಣಪಾಯದಿಂದ ಪಾರಾಗಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0