ವನ್ಯಜೀವಿ -ಮಾನವ ಸಂಘರ್ಷ ಪರಿಹಾರ ಮೊತ್ತ ಹೆಚ್ಚಳ ಮಾಡಬೇಕು: ಕೆ.ವಿ.ಸುನೀಲ್ ಆಗ್ರಹ
ಸಿದ್ದಾಪುರ: ವನ್ಯಜೀವಿ ಮಾನವ ಸಂಘರ್ಷಕ್ಕೆ ತುತ್ತಾದ ಕುಟುಂಬವನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನೀಲ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣಡಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಕೊಡಗಿನಲ್ಲಿ ಆನೆ ಸೇರಿದಂತೆ ವನ್ಯ ಮೃಗಗಳು ಮಾನವ ಸಂಘರ್ಷ ತಾರಕಕ್ಕೇರಿದ್ದು ರೈತರ ಬೆಳೆಗಳ ನಾಶಕ್ಕೆ ಸಕಾಲದಲ್ಲಿ ಸೂಕ್ತ ಪರಿಹಾರ ವಿತರಣೆ ಆಗುತ್ತಿಲ್ಲ. ಆನೆ ದಾಳಿಗೆ ತುತ್ತಾಗಿ ಮಡಿದವರಿಗೆ ಅರಣ್ಯ ಇಲಾಖೆ 20ಲಕ್ಷ ನೀಡಿ ಕೈ ತೊಳೆದು ಕೊಳ್ಳುತ್ತಿದ್ದು.ಮನೆಯ ವಾರಸುದಾರರನ್ನು ಕಳೆದು ಕೊಂಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಇಲಾಖೆಯಿಂದ ಆರ್ಥಿಕ ಸಹಾಯ ನೀಡುವುದರೊಂದಿಗೆ ಮೃತರ ಕುಟುಂಬಕ್ಕೆ 40ಲಕ್ಷ ಪರಿಹಾರ ಮತ್ತು ಕುಟುಂಬ ಸದಸ್ಯನಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗ ನೀಡಿ ಕುಟುಂಬವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಸಂಘರ್ಷಕ್ಕೆ ತುತ್ತಾಗಿ ಅಂಗಾಗ ವೈಫಲ್ಯತೆಗೊಳಗಾಗಿರುವವರಿಗೆ 5ಲಕ್ಷ ಪರಿಹಾರ ಮತ್ತು ಅರಣ್ಯ ಇಲಾಖೆಯಿಂದ ವಿಶೇಷ ಮಾಸಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದ ಅವರು ಆನೆ ಕಾರಿಡಾರ್ ಒತ್ತುವರಿ ತೆರವು ಮಾಡಿ ಅರಣ್ಯದಲ್ಲಿ ಪರಿಸರ ಸ್ನೇಹಿ ಮರಗಳನ್ನ ಬೆಳೆಯಲು ಒತ್ತು ನೀಡುವ ಮೂಲಕ ಆನೆಗಳಿಗೆ ಮೇವು ಸೃಷ್ಟಿಸುವಂತೆ ಒತ್ತಾಯಿಸಿದರು. ವನ್ಯಜೀವಿ ಸಂರಕ್ಷಣಾ ಸಮಿತಿ ಸದಸ್ಯ ಸಂಕೇತ್ ಪೂವಯ್ಯ ದಾಳಿಗೆ ತುತ್ತಾದ ಕುಟುಂಬಕ್ಕೆ ಸಾಂತ್ವನ ಹೇಳುತ್ತಿರುವುದು ಸ್ವಾಗತಾರ್ಹ. ವನ್ಯ ಮೃಗಗಳು ತೋಟಕ್ಕೆ ಲಗ್ಗೆ ಹಿಡದಂತೆ ತಡೆಯುವಲ್ಲಿ ಸೂಕ್ತ ಕ್ರಮಕೈ ಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದು ಶಾಸಕರು ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆ 2 ವರ್ಷಕಳೆದರು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.