ಅಡುಗೆ ಅನಿಲ ದರ-ಸಬ್ಸಿಡಿ ಪಾರದರ್ಶಕತೆಗೆ ಆಗ್ರಹ: ವಿಮೆನ್ ಇಂಡಿಯಾ ಮೂವ್‌ಮೆಂಟ್ ಪ್ರತಿಭಟನೆ
admincoorgdaily

ಮಡಿಕೇರಿ, ಜೂನ್ 20: ಅಡುಗೆ ಅನಿಲ ವಿತರಣೆಯಲ್ಲಿ ವ್ಯವಸ್ಥಿತ ಸುಧಾರಣೆ ಹಾಗೂ ಬೆಲೆ-ಸಬ್ಸಿಡಿ ಪಾರದರ್ಶಕತೆಗೆ ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್‌ಮೆಂಟ್ ಕೊಡಗು ಘಟಕದವರು ಶನಿವಾರ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಿಮೆನ್ ಇಂಡಿಯಾ ಮೂವ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ರಿಶಾನ್ ತೈಸೀರ್ ಅವರು, "ಉಜ್ವಲ ಯೋಜನೆಯಿಂದ ಕೋಟ್ಯಂತರ ಮನೆಗಳಿಗೆ ಸಿಲಿಂಡರ್ ತಲುಪಿದೆ. ಆದರೆ, ಬೆಲೆ ಸ್ಥಿರತೆ ಮತ್ತು ಸಬ್ಸಿಡಿ ಪಾರದರ್ಶಕತೆ ಬಗ್ಗೆ ಗ್ರಾಹಕರಲ್ಲಿ ಗೊಂದಲವಿದೆ. ಕಚ್ಚಾತೈಲ ದರ ಇಳಿಕೆಯ ಲಾಭ ಜನರಿಗೆ ತಲುಪಬೇಕು" ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಝಾಕಿಯಾ, ಪ್ರಮುಖರಾದ ಮೇರಿ ವೇಗಸ್, ಸಂಸುನ್ನೀಸಾ, ತಾಹೀರಾ ಸೇರಿದಂತೆ ಇತರರು ಭಾಗವಹಿಸಿದ್ದರು.