ಯೋಗ ಭಾರತಿಗೆ 25ರ ಸಂಭ್ರಮ

Jun 15, 2026 - 15:24
 0  195
ಯೋಗ ಭಾರತಿಗೆ 25ರ ಸಂಭ್ರಮ

ಮಡಿಕೇರಿ: ಮಡಿಕೇರಿಯಲ್ಲಿ ಕಳೆದ ೨೫ ವರ್ಷಗಳಿಂದ ನಿತ್ಯ ಯೋಗದ ಮೂಲಕ ಆರೋಗ್ಯ ಜಾಗೃತಿ ಮೂಡಿಸುತ್ತಿರುವ ಯೋಗ ಭಾರತಿ ಘಟಕ ಜೂ.೧೭ರಂದು ರಜತ ಮಹೋತ್ಸವ ಆಚರಿಸಿಕೊಳ್ಳಲಿದೆ ಎಂದು ಯೋಗ ಶಿಕ್ಷಕ ಕೆ.ಕೆ.ಮಹೇಶ್ ತಿಳಿಸಿದ್ದಾರೆ.

ರೆಡ್‌ಬ್ರಿಕ್ಸ್‌ನ ಸತ್ಕಾರ ಸಭಾಂಗಣದಲ್ಲಿ ಸಂಜೆ ೬ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಅಪರ ಜಿಲ್ಲಾಧಿಕಾರಿ ಡಾ.ಸಹನ ಎಸ್.ಹಾದಿಮನಿ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

೨೦೦೧ರಿಂದ ಪ್ರತಿ ದಿನ ಬೆಳಗ್ಗೆ ೫.೩೦ರ ಪ್ರಾಣಾಯಾಮ ತರಗತಿಗೆ ನೂರಾರು ಮಂದಿ ಸೇರುತ್ತಿದ್ದಾರೆ. ಮಹಿಳೆಯರಿಗಾಗಿ ಯೋಗ ಸಂಧ್ಯಾ, ರಥಸಪ್ತಮಿ ಹಾಗೂ ಪ್ರತಿ ತಿಂಗಳ ೨ನೇ ಶನಿವಾರ ರಾಜಾಸೀಟ್‌ನಲ್ಲಿ ೧೦೮ ಸೂರ್ಯ ನಮಸ್ಕಾರ, ಯೋಗ ನಡಿಗೆ, ಚಾರಣದಂತಹ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಯೋಗ ಭಾರತಿ ಗಮನ ಸೆಳೆದಿದೆ. ಶಾಲಾ-ಕಾಲೇಜು, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೂ ಯೋಗ ತರಬೇತಿ ನೀಡಲಾಗುತ್ತಿದೆ. ರಜತ ಮಹೋತ್ಸವದಲ್ಲಿ ಯೋಗ ವಿದ್ಯಾರ್ಥಿಗಳಿಂದ ವಿಶೇಷ ಪ್ರದರ್ಶನ ನಡೆಯಲಿದ್ದು, ಕೆ.ಎಸ್.ದೇವಯ್ಯ, ಡಾ.ಮನೋಹರ್ ಜಿ.ಪಾಟ್ಕರ್, ಜಿ.ಚಿದ್ವಿಲಾಸ್, ಡಾ.ಜಿ.ಶೈಲಜಾ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರಭಾಕರ್, ಸರೋಜಿನಿ, ಸರೀತಾ, ಸಂಗೀತ ಪ್ರಸನ್ನ, ಸುದೀರ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1