ಅರಣ್ಯಾಧಿಕಾರಿಗಳೊಂದಿಗೆ ಎ‌ಎಸ್ ಪೊನ್ನಣ್ಣ ಸಭೆ

Jul 11, 2025 - 00:42
 0  93
ಅರಣ್ಯಾಧಿಕಾರಿಗಳೊಂದಿಗೆ ಎ‌ಎಸ್ ಪೊನ್ನಣ್ಣ ಸಭೆ

ವಿರಾಜಪೇಟೆ:ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿರಾಜಪೇಟೆಯ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ವಿಶೇಷ ಸಭೆ ನಡೆಸಿದರು.   

ಕ್ಷೇತ್ರದಾದ್ಯಂತ ನಿರಂತರವಾಗಿ ಸಂಭವಿಸುತ್ತಿರುವ ಪ್ರಾಣಿ-ಮಾನವ ಸಂಘರ್ಷ, ಅರಣ್ಯ ಅಂಚಿನಲ್ಲಿ ಸರ್ಕಾರದ ವತಿಯಿಂದ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕರು ಅಧಿಕಾರಿಗಳಿಗೆ ಮಾಹಿತಿ ಪಡೆದು ಹಲವು ಸೂಚನೆಗಳನ್ನು ನೀಡಿದರಲ್ಲದೆ ಕ್ಷೇತ್ರದಲ್ಲಿ ಇರುವ ಹಲವು ಜಲ್ವಂತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.   

ಈ ಸಂದರ್ಭದಲ್ಲಿ ರಾಜ್ಯ ವನ್ಯ ಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ, ಜಿಲ್ಲಾಧಿಕಾರಿಗಳಾದ ವೆಂಕಟರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಆನಂದ್ ಪ್ರಕಾಶ್ ಮೀನಾ, ಕ್ಷೇತ್ರ ವ್ಯಾಪ್ತಿಯ ತಹಶೀಲ್ದಾರರುಗಳು,ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ಹಿರಿಯ ಅರಣ್ಯ ಅಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0