ಕುಶಾಲನಗರ: ಸಂಚಾರಿ ನಿಯಮಗಳ ಫಲಕ ಅಳವಡಿಸಲು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಮನವಿ

Jul 3, 2025 - 19:23
 0  103
ಕುಶಾಲನಗರ: ಸಂಚಾರಿ ನಿಯಮಗಳ ಫಲಕ ಅಳವಡಿಸಲು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಮನವಿ

ಕುಶಾಲನಗರ: ರಥ ಬೀದಿಯಲ್ಲಿ ಲಾರಿ ಸಂಚಾರದಿಂದ ಹಲವು ಬಾರಿ ಟ್ರಾಫಿಕ್ ಜಾಮ್ ಆಗಿರುವುದರಿಂದ ಆ ರಸ್ತೆಯಲ್ಲಿ ಎಲ್ಲ ಮಾದರಿಯ ಲಾರಿ ಸಂಚಾರದಿಂದ ಮುಕ್ತಗೊಳಿಸಲು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಕುಶಾಲನಗರದ ಡಿವೈಎಸ್ಪಿ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.

ಕುಶಾಲನಗರ ಚೇಂಬರ್ ನ ಅಧ್ಯಕ್ಷ ಕೆ ಎಸ್ ನಾಗೇಶ್ ನೇತೃತ್ವದಲ್ಲಿ ಗುರುವಾರ ಮನವಿ ಸಲ್ಲಿಸಿ, ಸಂಚಾರ ನಿಯಮಗಳನ್ನು ತಿಳಿಸುವ ನಾಮ ಫಲಕವನ್ನು ಅವಶ್ಯವಿರುವ ಕಡೆಗಳಲ್ಲಿ ಅಳವಡಿಸಲು ಸಲಹೆ ನೀಡಲಾಯಿತ್ತು.    ಡಿವೈಎಸ್ಪಿ ಚಂದ್ರಶೇಖರ್ ಮನವಿ ಸ್ವೀಕರಿಸಿ, ವರ್ತಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ನಾಮಫಲಕ ಅಳವಡಿಸಲು ನಮ್ಮದೇ ಆದ ನಿಯಮಗಳು ಇವೆ. ಅದರಂತೆ ಬೋರ್ಡ್ ಗಳನ್ನು ಮಾಡಿಸಲು ದಾನಿಗಳು ಮುಂದಾದರೆ ಖಂಡಿತ ಮಾಡೋಣ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಕುಶಾಲನಗರ ಸ್ಥಾನೀಯ ಸಮಿತಿಯ ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ, ನಿಕಟ ಪೂರ್ವ ಅಧ್ಯಕ್ಷ ರವೀಂದ್ರ.ವಿ.ರೈ, ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ.ಬಾಬು, ನಿರ್ದೇಶಕರಾದ ಕೆ.ಜೆ.ಸತೀಶ್, ಅಬ್ದುಲ್ ರಶೀದ್, ಬಿ.ಎನ್.ಅಂಜನ್, ಜನಾರ್ಧನ ಪ್ರಭು, ಕುಶಾಲನಗರ ಠಾಣಾಧಿಕಾರಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0