ಲಾರಿ ಹರಿದು ಕೊಟ್ಟಮುಡಿಯ ವ್ಯಕ್ತಿ ಸಾವು

Jul 10, 2025 - 09:52
Jul 18, 2025 - 22:07
 0  1.1k
ಲಾರಿ ಹರಿದು ಕೊಟ್ಟಮುಡಿಯ ವ್ಯಕ್ತಿ ಸಾವು

ಕುಶಾಲನಗರ: ಲಾರಿ ಹರಿದು ವ್ಯಕ್ತಿ ಮೃತಪಟ್ಟ ಘಟನೆ ಗುಡ್ಡೆಹೊಸೂರಿನಲ್ಲಿ ನಡೆದಿದೆ.ನಾಪೋಕ್ಲು ಸಮೀಪಸ ಕೊಟ್ಟಮುಡಿ ಗ್ರಾಮದ ಅಬ್ದುಲ್ ಸಲಾಂ ಮೃತ ವ್ಯಕ್ತಿ.ಗುರುವಾರ ಬೆಳಗಿನ‌ ಜಾವ ಮೈಸೂರಿನತ್ತ ತೆರಳುತ್ತಿದ್ದ ಲಾರಿ ಮೃತನ ತಲೆ ಮೇಲೆ ಹರಿದಿದೆ. ಮೃತ ಅಬ್ದುಲ್ ಮಾನಸಿಕ ಅಸ್ವಸ್ಥನಂತೆ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ಹೆದ್ದಾರಿ ಅಂಚಿನಲ್ಲಿ‌ ರಸ್ತೆಗೆ ತಲೆಹಾಕಿ ಮಲಗಿದ್ದ ಈತನ ಮೇಲೆ ಲಾರಿ ಹರಿದ ಪರಿಣಾಮ ಮೃತಪಟ್ಡಿದ್ದಾನೆ. ಕುಶಾಲನಗರ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 3
Dislike Dislike 0
Love Love 1
Funny Funny 1
Angry Angry 1
Sad Sad 9
Wow Wow 0