ಸಹಾಯಕ ಔಷಧ ನಿಯಂತ್ರಕರಾಗಿ ಷರೀಫ್ ನೇಮಕ

Jun 25, 2025 - 16:00
Jun 25, 2025 - 16:01
 0  71
ಸಹಾಯಕ ಔಷಧ ನಿಯಂತ್ರಕರಾಗಿ ಷರೀಫ್ ನೇಮಕ

ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ತೆರವುಗೊಂಡಿರುವ ಸಹಾಯಕ ಔಷಧ ನಿಯಂತ್ರಕರಾಗಿ ಮೈಸೂರು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕ ಷರೀಫ್ ಅವರನ್ನ ಪ್ರಭಾರ ಆಗಿ ನಿಯೋಜಿಸಲಾಗಿದೆ. 

ಕಳೆದ ಐದು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಸಹಾಯಕ ಔಷಧ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಮಾಗಣಗೇರಿ ವರ್ಗಾವಣೆ ಹಿನ್ನಲೆ ಷರೀಫ್ ಅವರನ್ನು ನೇಮಿಸಲಾಗಿದೆ. 

ಮಂಗಳವಾರ ಅಧಿಕಾರ ವಹಿಸಿಕೊಂಡ ಷರೀಫ್ ಅವರಿಗೆ ಕೊಡಗು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಸ್ವಾಗತವನ್ನು ಕೋರಿದರು. ಅಧ್ಯಕ್ಷ ಅಂಬೆಕಲ್ಲು ಜೀವನ್ ನೇತೃತ್ವದಲ್ಲಿ ಸಹಾಯಕ ಔಷಧ ನಿಯಂತ್ರಕ ಷರೀಫ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿ ಕೆಲವು ಸೂಕ್ಷ್ಮ ವಿಚಾರಗಳ ಚರ್ಚಿಸಲಾಯಿತು. ಈ ಸಂದರ್ಭ ಕೊಡಗು ಔಷಧ ವ್ಯಾಪಾರಿಗಳ ಸಂಘದ ಹಿರಿಯ ಸದಸ್ಯರಾದ ಶ್ರೀ ಅಂಬೇಕಲ್ ಕುಶಾಲಪ್ಪ, ಸಂಘದ ಉಪಾಧ್ಯಕ್ಷರ ಅಂಬೇಕಲ್ ವಿನೋದ್, ಖಜಾಂಜಿ ಪ್ರಸಾದ್ ಗೌಡ, ಜಂಟಿ-ಕಾರ್ಯದರ್ಶಿ ವಸಂತ್, ಸದಸ್ಯರಾದ ಶ್ರೀ ಶಶಿಧರ್ ರೈ, ಧನಂಜಯ ಶಾಸ್ತ್ರೀ, ಶ್ರೀ ಸುರೇಶ್ ಬಿಳಿಗೇರಿ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0