ವಿರಾಜಪೇಟೆ: ಚೆಸ್ಕಾಂ ಕಛೇರಿಯಲ್ಲಿ ಚಾಮುಂಡೇಶ್ವರಿ ಪೂಜಾ ಮಹೋತ್ಸವ

Jul 18, 2025 - 14:31
Jul 18, 2025 - 14:37
 0  80
ವಿರಾಜಪೇಟೆ: ಚೆಸ್ಕಾಂ ಕಛೇರಿಯಲ್ಲಿ ಚಾಮುಂಡೇಶ್ವರಿ ಪೂಜಾ ಮಹೋತ್ಸವ

ವಿರಾಜಪೇಟೆ:ಇಲಾಖೆಯ ಸಿಬ್ಬಂದಿಗಳ ಆರೋಗ್ಯ ಮತ್ತು ಉನ್ನತಿ ಲಭಿಸಲು ಸಲುವಾಗಿ ಕಛೇರಿಯಲ್ಲಿ ಆಷಾಢ ಚಾಮುಂಡೇಶ್ವರಿ ಪೂಜೆ ನಡೆಸಲಾಯಿತು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರ್ಯ ಮತ್ತು ಪಾಲನೆ ಉಪವಿಭಾಗ ವಿರಾಜಪೇಟೆ ಇಲಾಖೆಯ ಸಿಬ್ಬಂದಿಗಳು ಮತ್ತು ಅನುಮತಿ ಪಡೆದ ಗುತ್ತಿಗೆದಾರರ ಸಂಘ ವಿರಾಜಪೇಟೆ ತಾಲೂಕು ಸಂಯುಕ್ತಾಶ್ರಯದಲ್ಲಿ ನಗರದ ಮುರ್ನಾಡು ರಸ್ತೆಯ ಶಾಖಾ ಕಛೇರಿಯಲ್ಲಿ ೨ ನೇ ವರ್ಷದ ಶ್ರೀ ಚಾಮುಂಡೇಶ್ವರಿ ಪೂಜೆ ಮತ್ತು ಇಲಾಖೆಯ ಸಿಬ್ಬಂದಿಗಳಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಕಛೇರಿಯಲ್ಲಿ ಶ್ರೀ ಚಾಮುಂಡೇಶ್ವರಿ ಪೂಜೆಯನ್ನು ನಗದ ಸೀತಾರಾಮ ಭಟ್ ಅವರು ನೆರೆವೇರಿಸಿದರು. ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಗುತ್ತಿಗೆದಾರರ ಆರೋಗ್ಯ ಮತ್ತು ಕುಟುಂಬದ ಅಂಗಗಳಿಗೆ ಅರೋಗ್ಯ ಕರುಣಿಸುವಂತೆ ಸಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು. ಈ ಸಂಧರ್ಭದಲ್ಲಿ ವಿರಾಜಪೇಟೆ ಉಪ ವಿಭಾಗ ವ್ಯಾಪ್ತಿಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ನೌಕರರು, ವಿರಾಜಪೇಟೆ ತಾಲ್ಲೂಕು ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು ಇದ್ದರು. ಡಾಕ್ಟರ್ ಅಗರ್ ವಾಲ್ಸ್ ನೇತ್ರ ಚಿಕಿತ್ಸಾಲಯ ವಿರಾಜಪೇಟೆ ಶಾಖೆ ವತಿಯಿಂದ ನುರಿತ ತಜ್ಞರಿಂದ ಇಲಾಖೆಯ ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ,ಗುತ್ತಿಗೆದಾರರ, ಕುಟುಂಬದ ಸದಸ್ಯರಿಗೆ ಉಚಿತ ನೇತ್ರ ಚಿಕಿತ್ಸೆ ಮಾಡಲಾಯಿತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0