ಬೆಂಗಳೂರು ಪಟಲಾಮ್ಮ ದೇವಿಯ ಊರ ಹಬ್ಬ: ಶಾಸಕ ಎ.ಎಸ್ ಪೊನ್ನಣ್ಣ ಭಾಗಿ

May 7, 2025 - 17:44
 0  29
ಬೆಂಗಳೂರು ಪಟಲಾಮ್ಮ ದೇವಿಯ ಊರ ಹಬ್ಬ: ಶಾಸಕ ಎ.ಎಸ್ ಪೊನ್ನಣ್ಣ ಭಾಗಿ
ಬೆಂಗಳೂರು ಪಟಲಾಮ್ಮ ದೇವಿಯ ಊರ ಹಬ್ಬ: ಶಾಸಕ ಎ.ಎಸ್ ಪೊನ್ನಣ್ಣ ಭಾಗಿ

ಬೆಂಗಳೂರು:ಮೂರು ವರ್ಷಗಳಿಗೊಮ್ಮೆ ನಡೆಯುವ ಊರ ಹಬ್ಬ, ಪಟಲಾಮ್ಮ ದೇವಿಯ ರಥೋತ್ಸವವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸಿದರು.  ಸಿದ್ದಾಪುರ, ಕನಕನ ಪಾಳ್ಯ, ಯಡಿಯೂರು, ಬೈರಸಂದ್ರ ನಾಗಸಂದ್ರ ಗ್ರಾಮಗಳ ಆದಿ ದೇವತೆಯಾದ ಶ್ರೀ ಪಟಾಲಮ್ಮ ದೇವಿ ರಥೋತ್ಸವದ ಅಂಗವಾಗಿ ಸಾಂಸ್ಕೃತಿಕ ತಂಡಗಳ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು. ಈ ಪ್ರದರ್ಶನದಲ್ಲಿ ಕೊಡಗು ಸಾಂಸ್ಕೃತಿಕ ತಂಡವು ಭಾಗವಹಿಸಿದ್ದು ವಿಶೇಷವಾಗಿತ್ತು.  ಇದೇ ಸಂದರ್ಭದಲ್ಲಿ ಶ್ರೀ ಮುನೇಶ್ವರ ಸ್ವಾಮಿ ದೇವಾಲಯಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸಚಿವರಾದ ಬೈರತಿ ಸುರೇಶ್ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಗ್ಯಾರೆಂಟಿ ಅನುಷ್ಠಾನದ ಅಧ್ಯಕ್ಷರಾದ ಹೆಚ್.ಎಂ ರೇವಣ್ಣ ಭೇಟಿ ನೀಡಿ ದೇವರ ಆಶೀರ್ವಾದವನ್ನು ಪಡೆದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0