ವಿದ್ಯಾರ್ಥಿ‌ ಜೀವನದಲ್ಲಿ ಕಲಿಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ: ಪ್ರೊ. ಪಟ್ಟಡ ಪೂವಣ್ಣ: ಕಾವೇರಿ ಪದವಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ

ವಿದ್ಯಾರ್ಥಿ‌ ಜೀವನದಲ್ಲಿ ಕಲಿಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ: ಪ್ರೊ. ಪಟ್ಟಡ ಪೂವಣ್ಣ:  ಕಾವೇರಿ ಪದವಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ
ವಿದ್ಯಾರ್ಥಿ‌ ಜೀವನದಲ್ಲಿ ಕಲಿಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ: ಪ್ರೊ. ಪಟ್ಟಡ ಪೂವಣ್ಣ:  ಕಾವೇರಿ ಪದವಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ

ವಿರಾಜಪೇಟೆ: ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು,ವಿದ್ಯಾರ್ಥಿ ಜೀವನದಲ್ಲಿ ಕಲಿಯಲು ಅನೇಕ ಅವಕಾಶಗಳು ದೊರಕುತ್ತದೆ, ಸದುಪಯೋಗಪಡಿಸಿಕೊಳ್ಳುವ ಗುಣ ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕೆಂದು ನಿವೃತ್ತ ಪ್ರಾಂಶುಪಾಲರಾದ ಪೊ.ಪಟ್ಟಡ ಪೂವಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾವೇರಿ ಪದವಿ ಕಾಲೇಜು ವಿರಾಜಪೇಟೆ ಆಶ್ರಯದಲ್ಲಿ ಪದವಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಕಾಲೇಜಿನ ಕೌಸ್ತುಭ ಸಭಾಂಗಣ ದಲ್ಲಿ ನಡೆಯಿತು. ಕಾರ್ಯಕ್ರಮ ಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪ್ರೊ. ಪೂವಣ್ಣ, ಸೃಷ್ಟಿಕರ್ತನು ಎಲ್ಲಾ ವ್ಯಕ್ತಿಗಳಿಗೂ ಅಘೋಚರ ಶಕ್ತಿ ಕಲ್ಪಿಸಿದ್ದಾನೆ. ಆ ಶಕ್ತಿಯನ್ನು ಅರಿತು ಹೊರ ತರಬೇಕು.ಜೀವನದಲ್ಲಿ ಆಶಾವಾದಿಗಳಂತೆ ಸಮಾಜದಲ್ಲಿ ಮುಂದುವರೆಯುವ ಪ್ರವೃತ್ತಿ ಕಳಿಯುವುದು ಸೂಕ್ತ.ನಾನು ಅರ್ಧ ವೃತ್ತಿ ಜೀವನ ಇದೇ ಕಾಲೇಜಿನಲ್ಲಿ ಕಳೆದಿದ್ದೇನೆ. ಕಾಲೇಜು ಎಲ್ಲಾವನ್ನು ನೀಡಿದೆ ಎಂದು ಜೀವನ ಚರಿತ್ರೆಯ ಮೆಲುಕು ಹಾಕಿದರು. ಜೀವನದ ಮೌಲ್ಯಗಳೊಂದಿಗೆ ಮುಂದಿನ ಭವಿಷ್ಯ ನಿರ್ಧಾರದ ಗುರಿಹೊಂದಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಹೇಳಿದರು.

ಎ.ಡಿ.ಎಲ್.ಆರ್, ಬಾನಂಗಡ ಅರುಣ್,ಮಾತನಾಡಿ ಕೆಟ್ಟ ಚಟಗಳು, ಮೊಬೈಲ್ ಸಂಸ್ಕೃತಿಗಳನ್ನು ಬದಿಗಿಟ್ಟು ಪುಸ್ತಕ ಸಾಹಿತ್ಯ, ಕಲೆ,ಕ್ರೀಡೆ ಹಾಗೂ ವಿದ್ಯಾಭ್ಯಾಸ ದ ಕಡೆಗೆ ಗಮನಹರಿಸಲು ಸರ್ವರು ಪ್ರಯತ್ನಿಸಿ.ಉತ್ತಮ ವಿದ್ಯಾರ್ಥಿಗಳಾಗಿ ಸರ್ಕಾರಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ 2024 -25 ನೇ ಸಾಲಿನಲ್ಲಿ ವಿವಿಧ ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ, ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾವೇರಿ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಮಂಡೇಪಂಡ ಸುಗುಣ ಮುತ್ತಣ್ಣ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಆಡಳಿತ ಮಂಡಳಿಯು ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಉನ್ನತ ಮಟ್ಟದ ಸಾಧನೆ ಮಾಡಿ ಕಾಲೇಜು ಹೆಸರು ಕೀರ್ತಿಗೊಳಿಸುವಂತಾಗಬೇಕು ಎಂದು ಹೇಳಿದರು.

ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಸಲ್ಡಾನ ಅವರು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಐ.ಕ್ಯೂ.ಎಸ್. ಸಂಚಾಲಕಿ ಪ್ರಿಯ ಮುದ್ದಪ್ಪ ಅವರು ಸರ್ವರನ್ನೂ ಸ್ವಾಗತಿಸಿದರು.ಉಪನ್ಯಾಸಕರಾದ ನಿರ್ಮಿತಾ, ಪುಣ್ಯ ಹಾಗೂ ವಿದ್ಯಾರ್ಥಿಗಳಾದ ರಾಧಿಕ,ಬಿಂದ್ಯಾ ಅವರುಗಳು ಕಾರ್ಯಕ್ರಮ ನಿರೂಪಣೆ ಮಾಡಿ,ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ ಸಂಚಾಲಕರಾದ ನಾಗರಾಜು ಹೆಚ್.ವಿ. ವಂದಿಸಿದರು.ಕಾರ್ಯಕ್ರಮದಲ್ಲಿ ಕಾವೇರಿ ವಿದ್ಯಾ ಸಂಸ್ಥೆಗಳ ನಿರ್ದೇಶಕರುಗಳಾದ ಸುಭಾಷ್ ಸುಬ್ಬಯ್ಯ, ಸಿ.ಡಿ. ಮಾದಪ್ಪ,ಎನ್.ಕೆ. ಮೊಣ್ಣಪ್ಪ, ವಾಣಿ, ಅಚ್ಚಯ್ಯ ಮತ್ತು ಕಾವೇರಿ ಪದವಿ ಕಾಲೇಜಿನ ಉಪನ್ಯಾಸಕರುಗಳು,ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ: ಕಿಶೋರ್ ಕುಮಾರ್ ಶೆಟ್ಟಿ