ಸಂಚಾರಕ್ಕೆ ಅಪಾಯಕಾರಿಯಾಗಿರುವ ಸೋಮವಾರಪೇಟೆ-ಮಲ್ಲಳ್ಳಿ ಜಲಪಾತ, ಸುಬ್ರಹ್ಮಣ್ಯ ರಸ್ತೆ: ವಿದ್ಯಾರ್ಥಿಗಳು, ಪ್ರವಾಸಿಗರು, ಸಾರ್ವಜನಿಕರ ಪರದಾಟ

Jun 2, 2025 - 10:31
Jun 2, 2025 - 10:48
 0  45
ಸಂಚಾರಕ್ಕೆ ಅಪಾಯಕಾರಿಯಾಗಿರುವ ಸೋಮವಾರಪೇಟೆ-ಮಲ್ಲಳ್ಳಿ ಜಲಪಾತ, ಸುಬ್ರಹ್ಮಣ್ಯ ರಸ್ತೆ:  ವಿದ್ಯಾರ್ಥಿಗಳು, ಪ್ರವಾಸಿಗರು, ಸಾರ್ವಜನಿಕರ ಪರದಾಟ
ಸಂಚಾರಕ್ಕೆ ಅಪಾಯಕಾರಿಯಾಗಿರುವ ಸೋಮವಾರಪೇಟೆ-ಮಲ್ಲಳ್ಳಿ ಜಲಪಾತ, ಸುಬ್ರಹ್ಮಣ್ಯ ರಸ್ತೆ:  ವಿದ್ಯಾರ್ಥಿಗಳು, ಪ್ರವಾಸಿಗರು, ಸಾರ್ವಜನಿಕರ ಪರದಾಟ
ಸಂಚಾರಕ್ಕೆ ಅಪಾಯಕಾರಿಯಾಗಿರುವ ಸೋಮವಾರಪೇಟೆ-ಮಲ್ಲಳ್ಳಿ ಜಲಪಾತ, ಸುಬ್ರಹ್ಮಣ್ಯ ರಸ್ತೆ:  ವಿದ್ಯಾರ್ಥಿಗಳು, ಪ್ರವಾಸಿಗರು, ಸಾರ್ವಜನಿಕರ ಪರದಾಟ

ಸೋಮವಾರಪೇಟೆ (CoorgDaily) : ಸೋಮವಾರಪೇಟೆಯಿಂದ ಸುಬ್ರಹ್ಮಣ್ಯ, ಸಕಲೇಶಪುರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಕೂಡುರಸ್ತೆ ಬಳಿ ರಸ್ತೆಯು ಸಂಪೂರ್ಣ ಗುಂಡಿಗಳಾಗಿದ್ದು ವಾಹನ ಚಾಲನೆಗೆ ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ರಸ್ತೆಯು ಸಂಪೂರ್ಣವಾಗಿ ಹೊಳೆಯಂತಾಗುತ್ತದೆ. ದಿನನಿತ್ಯ ನೂರಾರು ವಾಹನಗಳು, ಸಾರಿಗೆ ಬಸ್, ಮಲ್ಲಳ್ಳಿ ಜಲಪಾತ ಹಾಗೂ ಪುಷ್ಪಗಿರಿ ಪ್ರವಾಸಿಗರ ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ಹಲವು ಬಾರಿ ದ್ವಿಚಕ್ರ ವಾಹನಗಳು ಹೊಂಡಕ್ಕೆ ಬಿದ್ದ ಅಪಘಾತವುಂಟಾದ ಘಟನೆ ನಡೆದಿದೆ.ಮಳೆಗಾಲದಲ್ಲಿ ರಸ್ತೆಯಲ್ಲಿ ಮಣ್ಣು ತುಂಬಿಕೊಂಡಿದ್ದು,ಅಪಘಾತಗಳು ಸಂಭವಿಸುವ ಮುನ್ನ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

ವರದಿ:ಶಿಬಿಲ್ ಕಲ್ಕಂದೂರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0