ಸಹಾರ ವ್ಯಾಟ್ಸ್ ಅಪ್ ಗ್ರೂಪ್ ಸ್ನೇಹಿತರ ಬಳಗದಿಂದ ಜೂನ್ 15 ರಂದು ಬೃಹತ್ ರಕ್ತದಾನ ಶಿಬಿರ

ಸಹಾರ ವ್ಯಾಟ್ಸ್ ಅಪ್ ಗ್ರೂಪ್  ಸ್ನೇಹಿತರ ಬಳಗದಿಂದ ಜೂನ್ 15 ರಂದು ಬೃಹತ್  ರಕ್ತದಾನ ಶಿಬಿರ

ವಿರಾಜಪೇಟೆ: ವಿಶ್ವ ರಕ್ತ ದಾನಿಗಳ ದಿನದ ಅಂಗವಾಗಿ ನಗರದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಜೂನ್ 15 ರಂದು ಆಯೋಜಿಸಲಾಗಿದೆ ಎಂದು ಸಹಾರ ವಾಟ್ಸ್ ಅಪ್ ಸ್ನೇಹಿತರ ಬಳಗವು ಮಾಹಿತಿ ನೀಡಿದೆ.ಸಹಾರ ವಾಟ್ಸಅಪ್ ಸ್ನೇಹಿತರ ಬಳಗ ವಿರಾಜಪೇಟೆ ವತಿಯಿಂದ ಗೋಣಿಕೊಪ್ಪಲು ರಸ್ತೆಯಲ್ಲಿರುವ ಕಛೇರಿಯಲ್ಲಿ ರಕ್ತ ದಾನಿಗಳ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರದ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಟಿ ಕರೆಯಲಾಗಿತ್ತು.

ಈ ಸಂದರ್ಭ ಮಾತನಾಡಿದ ಸದಸ್ಯರಾದ ಇರ್ಷಾದ್ ಇಚ್ಚು ಸಹಾರ ಎನುವುದು ಆಸರೆ ಎಂಬ ಅರ್ಥ ಕಲ್ಪಿಸುತ್ತದೆ. ಸಾಮಾಜಿಕ ಸೇವೆಯ ಮೂಲಕ ಜನಸಮಾನ್ಯರ ಸೇವೆ ಮಾಡುವುದು ಮುಖ್ಯ ಉದ್ದೇಶವಾಗಿದೆ. ಸಮಾನ ಮನಸ್ಥಿತಿಯ, ರಾಜಕೀಯ ರಹಿತವಾದ, ಜಾತಿ ಧರ್ಮದ ಪರಿಕಲ್ಪನೆ ಇಲ್ಲದೆ ಸ್ನೇಹಿತರ ಬಳಗವಾಗಿದೆ. ಬಡ, ಹೆಣ್ಣುಮಕ್ಕ ಮದುವೆ, ವೈದ್ಯಕೀಯ ವೆಚ್ಚ, ವೈದ್ಯಕೀಯ ಪರಿಕರ ನೀಡುವುದು, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಸಹಾಯ ಮಾಡುವುದು, ಕ್ರೀಡೆಗೆ ಪ್ರೋತ್ಸಾಹ ನೀಡುವುದು ಮತ್ತು ಆಯೋಜಿಸಲು ಸಹಕಾರ ನೀಡುವುದಾಗಿದೆ ಬಳಗದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ತಾ. 15 ರಂದು ಬೃಹತ್ ರಕ್ತದಾನ ಶಿಬಿರವನ್ನು ವಿರಾಜಪೇಟೆ ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಬಳಗದ ಸದಸ್ಯರಾದ ಸಿ.ಎ.ನಾಸಿರ್, ಜೀವ ಉಳಿಸುವ ಕಾರ್ಯಕ್ಕೆ ಅಣಿಯಾಗುವ ವ್ಯಕ್ತಿ ದಾನಿ. ಅಂದರೆ ರಕ್ತದಾನ ನೀಡುವ ವ್ಯಕ್ತಿ ತಾ.15 ರಂದು ವಿಶ್ವ ರಕ್ತ ದಾನಿಗಳನ್ನ ಸ್ಮರಣೆ ಮಾಡುವ ದಿನವಾಗಿದೆ. ರಕ್ತದಾನಿಗಳಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಘಟಕ, ಲಯನ್ಸ್ ಬ್ಲಡ್ ಸೆಂಟರ್ ಜೀವದಾರ ಮೈಸೂರು ಮತ್ತು ಸಹಾರ ಫ್ರೆಂಡ್ಸ್ ವಿರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ತಾ.15-06-2025 ರಂದು ವಿಶ್ವ ರಕ್ತ ದಾನಿಗಳ ದಿನಾಚರಣೆಯ ಅಂಗವಾಗಿ ನಗರದ ಟೀರ್ಸ್ ಸ್ಟೋರ್ಸ್ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಅಯೋಜಿಸಲಾಗಿದೆ. ಅಂದು ಸಾಮಾಜಿಕ ಸೇವೆಯಲ್ಲಿ ಗಣನೀಯವಾಗಿ ಸೇವೆಗೈದ ವ್ಯಕ್ತಿಗಳನ್ನು ಗೌರವಿಸಲಾಗುತ್ತದೆ. ಬೆಳಿಗ್ಗೆ 09 ರಿಂದ ಮಧ್ಯಾಹ್ನ 04 ರವರೆಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಹೇಳಿದರು.

ಸಹಾರ ಫ್ರೆಂಡ್ಸ್ ಸಂಸ್ಥಾಪಕರಾದ ರವೂಫ್ ಎಂ.ಕೆ ರವರ ಸ್ನೇಹಿತರ ಬಳಗವು ಆಯೋಜಿಸುತ್ತಿರುವ ಚೊಚ್ಚಲ ರಕ್ತದಾನ ಶಿಬಿರಕ್ಕೆ ಸರ್ವರು ಕೈಜೋಡಿವಂತೆ, ಸಹಕಾರ ನೀಡುವಂತೆ ನಾಡಿನ ಜನತೆಯಲ್ಲಿ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸಹಾರ ಫ್ರೆಂಡ್ಸ್ ವಾಟ್ಸಅಪ್ ಬಳಗದ ಸದಸ್ಯರಾದ ಅನಿಲ್ ಕುಮಾರ್ (ಅಪ್ಪು) , ಜೀವನ್, ಪಿಂಟೋ ಮತ್ತು ಜೀಯಾಉಲ್ಲಾ ಅವರುಗಳು ಉಪಸ್ಥಿತರಿದ್ದರು.