ಸುಂಟ್ಟಿಕೊಪ್ಪ: ಗುಂಡುಗುಟ್ಟಿ ಸರ್ಕಾರಿ ಶಾಲೆಗೆ ನಿವೃತ್ತ ಯೋಧನಿಂದ ನೋಟ್ ಪುಸ್ತಕ ವಿತರಣೆ

Jun 12, 2025 - 18:44
 0  56
ಸುಂಟ್ಟಿಕೊಪ್ಪ: ಗುಂಡುಗುಟ್ಟಿ ಸರ್ಕಾರಿ ಶಾಲೆಗೆ ನಿವೃತ್ತ ಯೋಧನಿಂದ ನೋಟ್ ಪುಸ್ತಕ ವಿತರಣೆ

ಸುಂಟಿಕೊಪ್ಪ: ಸಮೀಪದ ಗುಂಡುಗುಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಬ್ಯಾಗ್ ಗಳನ್ನು ದಾನಿಗಳು ವಿತರಿಸಿದರು‌.

ಕುಶಾಲನಗರದ ವರ್ತಕ ಹಾಗೂ ಭಾರತೀಯ ಸೇನೆಯ ನಿವೃತ್ತ ಯೋಧ ಲವ ಅವರು ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿದರು‌.ಹಾಗೆಯೇ ಗುಂಡುಗುಟ್ಟಿ ದಿ‌.ಮಂಜನಾಥಯ್ಯ ಅವರ ಮೊಮ್ಮಗ ರಾಜೇಂದ್ರ ಮತ್ತು ಸಾಧನ ಅವರು ಎಲ್ಲ ವಿದ್ಯಾರ್ಥಿಗಳಿಗೆ ಬ್ಯಾಗ್ ಗಳನ್ನು ವಿತರಿಸಿದರು.ಇದೇ ವೇಳೆ ಮಾತನಾಡಿದ ರಾಜೇಂದ್ರ ಅವರು,ದಿನದಿಂದ ದಿನಕ್ಕೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ‌‌.ಹೆಚ್ಷಿನ ಪೋಷಕರು ತಮ್ನ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಈ ಶಾಲೆಯ ಉಳಿಸುವ ಕಾರ್ಯ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಎಸ್ ಎಲ್ ಗೌರಮಣಿ ,ಶಿಕ್ಷಕಿ ಪೂರ್ಣಿಮಾ, ಹಿರಿಯ ವಿದ್ಯಾರ್ಥಿಗಳಾದ ಎ.ಸಿ‌‌.ಪೊನ್ನಪ್ಪ, ಎಂ.ಎ‌.ವಸಂತ, ಶೈಲ,ರೇವಣ್ಣ ಇತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0