ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿರಾಜಪೇಟೆ ವಲಯದ ಹೆಗ್ಗಳ ಕಾರ್ಯಕ್ಷೇತ್ರದ ನಂದಾದೀಪ ಹಾಗೂ ಧರ್ಮಶಾಸ್ತ್ರ ಸಂಘದ 16ನೇ ವರ್ಷದ ವಾರ್ಷಿಕೋತ್ಸವ
ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿರಾಜಪೇಟೆ ವಲಯದ ಹೆಗ್ಗಳ ಕಾರ್ಯಕ್ಷೇತ್ರದ ನಂದಾದೀಪ ಹಾಗೂ ಧರ್ಮಶಾಸ್ತç ಸಂಘದ 16ನೇ ವರ್ಷದ ವಾರ್ಷಿಕೋತ್ಸವವನ್ನು ಬೇಟೋಳಿಯಲ್ಲಿರುವ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು.
ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಶಕ್ತಿ ವೃದ್ಧಾಶ್ರಮದ 25 ವೃದ್ಧರಿಗೆ ಒಂದು ವಾರಕ್ಕೆ ಬೇಕಾದ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ವಿತರಣೆ ಮಾಡುವ ಮುಖಾಂತರ ಒಕ್ಕೂಟದ ಸದಸ್ಯರು ಮಾನವೀಯ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಒಕ್ಕೂಟ ಉಪಾಧ್ಯಕ್ಷರಾದ ಮಲ್ಲಿಗೆ, ಹೆಗ್ಗಳ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶಿಲ್ಪಾ, ವಿರಾಜಪೇಟೆ ವಲಯದ ಮೇಲ್ವಿಚಾರಕರಾದ ಶಿವಕುಮಾರ್, ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
