ನವೆಂಬರ್ 29,30ರಂದು ವಿರಾಜಪೇಟೆಯಲ್ಲಿ 50+ ಮಾಸ್ಟರ್ಸ್ ಫುಟ್ಬಾಲ್ ಪಂದ್ಯಾವಳಿ

ನವೆಂಬರ್ 29,30ರಂದು ವಿರಾಜಪೇಟೆಯಲ್ಲಿ 50+ ಮಾಸ್ಟರ್ಸ್ ಫುಟ್ಬಾಲ್ ಪಂದ್ಯಾವಳಿ

ವಿರಾಜಪೇಟೆ: 50 ಕಳೆದರೆ ಅರಳೋ ಮರಳೋ ಎಂಬ ನಾಣ್ಡುಯಿದೆ. ಆದರೆ ಸುಸ್ಥಿರ ಆರೋಗ್ಯ ಪಾಲನೆಗೆ ಕ್ರೀಡೆಯಲ್ಲಿ ಭಾಗವಹಿಸುದು ಒಂದೇ ಮಾರ್ಗ‌ ಎಂಬ ನಿಟ್ಟಿನಲ್ಲಿ ಕೊಡಗು ಮಾಸ್ಟರ್ಸ್ ಫುಟ್ಬಾಲ್ ಕ್ಲಬ್ ವಿರಾಜಪೇಟೆ 50+ ವಯೋಮಾನದವರ ಕಾಲ್ಚೆಂಡು ಪಂದ್ಯಾಟವನ್ನು ನವೆಂಬರ್ ತಿಂಗಳ ಕೊನೆ ವಾರದಲ್ಲಿ ಆಯೋಜಿಸಿದೆ.

 ಕೊಡಗು ಮಾಸ್ಟರ್ಸ್ ಫುಟ್ಬಾಲ್ ಕ್ಲಬ್ ವಿರಾಜಪೇಟೆ ವತಿಯಿಂದ ನಗರದ ಪ್ರವಾಸಿ ಮಂದಿರಲ್ಲಿ 2ನೇ ಆವೃತ್ತಿಯ ಹೊನಲು ಬೆಳಕಿನ 50+ ಪುರುಷರ 5+2 ಕಾಲ್ಚೆಂಡು ಪಂದ್ಯಾದ ಬಗ್ಗೆ ಪ್ರತಿಕಾಗೋಷ್ಟಿ ಕರೆಯಲಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ್ ಎಲ್.ಜಿ ಅವರು ಮಾತನಾಡಿ,

 ವೃಧ್ಯಾಪ್ಯ ಎಂಬುದು ಎಲ್ಲಾರಿಗೂ ಬರುವ ಸಹಜ ಕ್ರಿಯೆ.ಆದರೆ ಆರೋಗ್ಯ ಹದಗೆಟ್ಟರೆ ಹಾಸಿಗೆ ಹಿಡಿಯುವುದು ಶಥಸಿದ್ದ. ದೇಹ ಶರೀರವನ್ನು ಸಮತೋಲನದಿಂದ ಕಾಪಾಡುವುದು ಮುಖ್ಯ ಎಂದು ಭಾವಿಸಿ 50+ ಮಾಸ್ಟರ್ಸ್ ಕಪ್ ಕಾಲ್ಚೆಂಡು ಪಂದ್ಯಾಟ ನಡೆಸಲಾಗುತ್ತಿದೆ. ಇದು ದ್ವಿತೀಯ ವರ್ಷವಾಗಿದೆ. ನವೆಂಬರ್ ತಿಂಗಳ 29 ಮತ್ತು 30 ರಂದು ಪಂದ್ಯಾಟ ನಡೆಯಲಿದೆ. ನಗರದ ಸುತ್ತಮುತ್ತಲಿನ ಒಟ್ಟು 06 ಕಿ.ಮಿ. ಅಂತರದಲ್ಲಿರುವ ಕ್ರೀಡಾಪಟುಗಳು ಪಂದ್ಯಾಟದಲ್ಲಿ ಭಾಗವಹಿಸಬಹುದಾಗಿದೆ.

ಪಂದ್ಯಾಟದಲ್ಲಿ ಭಾಗವಹಿಸುವ ಪಟುಗಳು ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ. ಕಳೆದ ಭಾರಿ ಪಂದ್ಯಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ರೀತಿಯಲ್ಲಿ ಪ್ರಸ್ತುತ ಪಂದ್ಯಾವಳಿಗಳಿಗೆ ಸಾರ್ವಜನಿಕರು ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.

ಕೊಡಗು ಮಾಸ್ಟರ್ಸ್ ಫುಟ್ಬಾಲ್ ಕ್ಲಬ್ ನ ಉಪಾಧ್ಯಕ್ಷರು ಮತ್ತು ಪುರಸಭೆಯ ಸದಸ್ಯರಾದ ಸಿ.ಕೆ. ಪ್ರಥ್ವಿನಾಥ್ ಅವರು ಮಾತನಾಡಿ, ನವೆಂಬರ್ ತಿಂಗಳಲ್ಲಿ ನಡೆಯುವ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯ ಎರಡು ದಿನಗಳು ನಡೆಯಲಿದೆ. ಈಗಾಗಲೇ ಒಟ್ಟು 08 ತಂಡಗಳು ನೊಂದಣಿ ಮಾಡಿಕೊಂಡಿದೆ. ಹೆಚ್ಚುವರಿಯಾಗಿ ಎರಡು ತಂಡಗಳ ಬೇಡಿಕೆ ಬಂದಿದ್ದು ಮುಂದಿನ ದಿನಗಳಲ್ಲಿ ಪಂದ್ಯಾಟದಲ್ಲಿ ಭಾಗವಹಿಸಲು ಸಂಸ್ಥೆ ನಿರ್ಧರಿಸುತ್ತದೆ ಎಂದು ಹೇಳಿದರು.

 ಕೊಡಗು ಮಾಸ್ಟರ್ಸ್ ಪುಟ್ಬಾಲ್ ಕ್ಲಬ್ ವಿರಾಜಪೇಟೆ ಕಾರ್ಯದರ್ಶಿ ಹೆಚ್.ಎಂ. ಆನಂದ (ಎಸ್.ಬಿ.ಐ) ಅವರು ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಕಾಲ್ಚೆಂಡು ಪಂದ್ಯಾಟಗಳು ಹಬ್ಬದ ರೀತಿಯ ಆಚರಣೆಗಾಗಿ ಸಿದ್ಧತೆಗಳು ನಡೆದಿವೆ. ತಂಡಗಳ ನೋಂದಾಣಿಗಾಗಿ ನವೆಂಬರ್ ತಿಂಗಳ ತಾ 10 ಕೊನೆಯ ದಿನವಾಗಿದೆ. ಆಟಗಾರರನ್ನು ಬಿಡ್ ಮೂಲಕ ತಂಡಕ್ಕೆ ಸೇರ್ಪಡೆಗೊಳಿಸಲಾಗುತ್ತದೆ.

ಎರಡು ದಿನಗಳಲ್ಲಿ ವಿಶೇಷವಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಪಂದ್ಯಾಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುತ್ತದೆ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಪುರಸ್ಕಾರ ಹಾಗೂ ವೈಯುಕ್ತಿಕ ಪಾರಿತೋಷಕಗಳನ್ನು ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ 9880502631 ಮತ್ತು 9448326037 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ. ಕಾರ್ಯಕ್ರಮಗಳ ಯಶಸ್ಸಿಗೆ ಸರ್ವರು ಸಹಕರಿಸುವಂತೆ ಮನವಿ ಮಾಡಿದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ