ವಿರಾಜಪೇಟೆ ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ
ವಿರಾಜಪೇಟೆ:ಅನ್ವಾರುಲ್ ಹುದಾ ಪಬ್ಲಿಕ್ ಶಾಲೆ, ವಿರಾಜಪೇಟೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ನೆರವೇರಿತು. ಧ್ವಜಾರೋಹಣವನ್ನು ಅಶ್ರಫ್ ಅಹ್ಸನಿ ಉಸ್ತಾದ್ ನೆರವೇರಿಸಿದರು.
ಪ್ರಾರ್ಥನೆಯನ್ನು ಅಶ್ರಫ್ ಅಹ್ಸನಿ ಉಸ್ತಾದ್ ಮುನ್ನಡೆಸಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮಾಡಿದವರ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ, ಸರ್ವಧರ್ಮ ಸಹಿಷ್ಣುತೆ ಕುರಿತಂತೆ ಪ್ರೇರಣಾದಾಯಕ ಭಾಷಣ ಮಾಡಿದರು. ಪ್ರಾರ್ಥನೆಯ ನಂತರ ಯಾಕೂಬ್ ಮಾಸ್ಟರ್, ಶಾಲೆಯ ಅಧ್ಯಾಪಕ ವರ್ಗದ ಮುಖ್ಯಸ್ಥರು, ಅತಿಥಿಗಳು, ಗಣ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಹಾರ್ದಿಕ ಸ್ವಾಗತ ಕೋರಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಹನೀಫ್ ಚೋಕಂಡಳ್ಳಿ ಅವರು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಶುಭಾಶಯಗಳನ್ನು ತಿಳಿಸಿ, ‘ವೈವಿಧ್ಯತೆಯಲ್ಲಿ ಏಕತೆ’ ನಮ್ಮ ಭಾರತದ ಬಲವೆಂದು ಹಿತವಚನ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಎನ್. ಹಸೈನರ್, ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ರೂಪಿಸುವ ಆದರ್ಶ ಪ್ರಜೆಯಾಗಬೇಕು ಎಂದು ಪ್ರೇರಣಾದಾಯಕ ಸಂದೇಶ ನೀಡಿದರು. ವೇದಿಕೆಯನ್ನು ಅಬೂಬಕರ್ ಹಾಜಿ (ಅನ್ವಾರುಲ್ ಹುದಾ ಕೇಂದ್ರದ ಉಪಾಧ್ಯಕ್ಷರು), ಅಹ್ಮದ್ ಮದನಿ, ಮುಬಾಶಿರ್ ಅಝ್ಹರಿ (ಅಧ್ಯಾಪಕರು), ಹಾಗೂ ಶಾಲೆಯ ಆಡಳಿತಾಧಿಕಾರಿ ಇಲ್ಯಾಸ್ ಅನ್ವಾರಿ ಸೇರಿದಂತೆ ಅನೇಕ ಗಣ್ಯರು ಅಲಂಕರಿಸಿದರು.
ಕಾರ್ಯಕ್ರಮದಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಭಾಷಣ, ದೇಶಭಕ್ತಿ ಗೀತೆ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ಪ್ರಿ-ಕೆಜಿ ವಿದ್ಯಾರ್ಥಿಗಳ ಮನಮೋಹಕ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಂದನಾರ್ಪಣೆ ಅನ್ನು ಅಶಿಕ್ ಶರೀಫ್ ಎಂ.ಎಸ್., ದೈಹಿಕ ಶಿಕ್ಷಣ ಶಿಕ್ಷಕರು, ಅನ್ವಾರುಲ್ ಹುದಾ ಪಬ್ಲಿಕ್ ಶಾಲೆ ಅವರು ಸಲ್ಲಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಅತಿಥಿಗಳು, ಪೋಷಕರು, ಗಣ್ಯರು ಹಾಗೂ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.