ಮಡಿಕೇರಿ-ಸೋಮವಾರಪೇಟೆ ರಸ್ತೆಯಲ್ಲಿ ಮರಬಿದ್ದು ವಾಹನ ಸಂಚಾರಕ್ಕೆ ಅಡ್ಡಿ: ತೋಟದ ಕಾರ್ಮಿಕರನ್ನು ಕಳುಹಿಸಿ ಮರ ತೆರವುಗೊಳಿಸಿದ ಮಾಜಿ ಶಾಸಕ ಅಪ್ಪಚ್ಚು ರಂಜನ್

ಮಡಿಕೇರಿ-ಸೋಮವಾರಪೇಟೆ ರಸ್ತೆಯಲ್ಲಿ ಮರಬಿದ್ದು ವಾಹನ ಸಂಚಾರಕ್ಕೆ ಅಡ್ಡಿ: ತೋಟದ ಕಾರ್ಮಿಕರನ್ನು ಕಳುಹಿಸಿ ಮರ ತೆರವುಗೊಳಿಸಿದ ಮಾಜಿ ಶಾಸಕ ಅಪ್ಪಚ್ಚು ರಂಜನ್

ಸೋಮವಾರಪೇಟೆ:ಇಂದು ಸಂಜೆ ಮರಬಿದ್ದುಮಡಿಕೇರಿ,ಸೋಮವಾರಪೇಟೆ ರಸ್ತೆ ಬಂದ್ ಆಗಿದ್ದು ಮಾಜಿ ಸಚಿವ ರಂಜನ್ ಸೂಚನೆಯಂತೆ ಅವರ ತೋಟದ ಕಾರ್ಮಿಕರು ಮರತೆರವು ಗೊಳಿಸಿದ್ದಾರೆ. ಮಡಿಕೇರಿ,ಸೋಮವಾರಪೇಟೆ ರಸ್ತೆಯಲ್ಲಿ ಬೆಳಿಗ್ಗೆಯೇ ಮರಬಿದ್ದು ರಸ್ತೆ ಬಂದ್ ಆಗಿದ್ದು ತೆರವುಗೊಳಿಸಿದನಂತರ ಸಂಚಾರ ಸುಗಮಗೊಂಡಿತ್ತು. ಸಂಜೆ 5ಗಂಟೆ ಸುಮಾರಿಗೆ ಜಂಬೂರು ಎಂ.ಎಲ್. ಎ.ಬಸ್ ನಿಲ್ದಾಣದ ಸಮೀಪ ಬೃಹತ್ ಗಾತ್ರದ ಮರಬಿದ್ದು ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು, ವಿಷಯ ತಿಳಿದ ಮಾಜಿ ಸಚಿವ ಅಪ್ಪಚ್ಚು ರಂಜನ್ ತಮ್ಮ ತೋಟದ ಕಾರ್ಮಿಕರನ್ನು ಕಳುಹಿಸಿ ಮರ ತೆರವುಗೊಳಿಸಿ ಸಂಚಾರವ್ಯವಸ್ತ ಸುಗಮ ಗೊಳಿಸಿದ್ದಾರೆ.