Kodagu

ನವೆಂಬರ್ 25ಕ್ಕೆ ಮಡಿಕೇರಿಯಲ್ಲಿ ಬೃಹತ್ ಸಮಸ್ತ ಪ್ರಚಾರ ಸಮ್ಮೇಳನ

admincoorgdaily

ಸಿದ್ದಾಪುರ: ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ವತಿಯಿಂದ ಸಮಸ್ತ 100ನೇ ವಾರ್ಷಿಕ ಸಮ್ಮೇಳನದ ಸ್ವಾಗತ ಸಮಿತಿ ಮೊದಲ ಸಭೆಯು ಮಂಗಳವಾರ ಸಿದ್ದಾಪುರದ ವರಕ್ಕಲ್ ಸ್ಮಾರಕ ಸೌಧದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಜಂಇಯ್ಯತುಲ್ ಉಲಮಾ ಅಧ್ಯಕ್ಷರು ಕೊಡಗು ಜಿಲ್ಲಾ ಉಪ ಖಾಝಿಗಳಾದ ಶೈಖುನಾ ಎಂ ಎಂ ಅಬ್ದುಲ್ಲಾ ಫೈಝಿ ಉಸ್ತಾದ್ ಎಡಪಾಲ ಅವರು ಪ್ರಾರ್ಥನೆ ನೆರವೇರಿಸಿದರ.

ಕೊಡಗು ಜಿಲ್ಲಾ ಸಮಸ್ತ ಜಂಇಯ್ಯತುಲ್ ಉಲಾಮ ಜಿಲ್ಲಾ ಉಪಾಧ್ಯಕ್ಷ ಪಿ.ಬಿ ಇಸ್ಮಾಯಿಲ್ ಮುಸ್ಲಿಯಾರ್ ಅವರು ಸಭೆಯನ್ನು ಉದ್ಘಾಟಿಸಿದರು. ಸಮಸ್ತ ನೇತಾರರ ಜೀವನ ಚರಿತ್ರೆ ಮತ್ತು ಸಮಸ್ತ ಶತಮಾನೋತ್ಸವ ವಿಜಯಗೊಳಿಸಲು ಸರ್ವರೂ ಕೂಡ ಸಜ್ಜಾಗಬೇಕೆಂದು ಇಬ್ರಾಹಿಂ ಫೈಝಿ ವಯನಾಡ್ ಕರೆ ನೀಡಿದರು. ಕೊಡಗು ಜಂಇಯ್ಯತಯಲ್ ಉಲಮಾ ಜಿಲ್ಲಾ ಕಾರ್ಯದರ್ಶಿ ಉಸ್ಮಾನ್ ಫೈಝಿ ಸ್ವಾಗತಿಸಿದರು. ಕೊಡಗು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಆರಿಫ್ ಫೈಝಿ ಸಮ್ಮೇಳನ ಕುರಿರು ವಿವರಿಸಿದರು.

ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಇದರ ವತಿಯಿಂದ ನವೆಂಬರ್ 25ಕ್ಕೆ ಬೃಹತ್ ಸಮಸ್ತ ಪ್ರಚಾರ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. ಸಮ್ಮೇಳನದ ಯಶಸ್ವಿಯ ಮೊದಲ ಫಂಡ್ ಸಿಂ. ಹಮೀದ್ ಮೌಲವಿ ಸುಂಟಿಕೊಪ್ಪ ಶೈಖುನಾ ಅಬ್ದುಲ್ಲಾ ಉಸ್ತಾದರಿಗೆ ನೀಡಿ ಉದ್ಘಾಟಿಸಿದರು. ಸಭೆಯಲ್ಲಿ ಉಮ್ಮರ್ ಫೈಝಿ, ಬಷೀರ್ ಹಾಜಿ,ಸಿಎಂ ಹಮೀದ್ ಮೌಲವಿ, ಇಕ್ಬಾಲ್ ಮೌಲವಿ, ಅಶ್ರಫ್ ಫೈಝಿ,ತಮ್ಲೀಕ್ ದಾರಿಮಿ, ಶುಹೈಬ್ ಫೈಝಿ,ನೌಫಲ್ ಹುದವಿ, ರಹೂಫ್ ಹುದವಿ, ಕೆ ಎ ಯಾಕೂಬ್ ಬಜೆಗುಂಡಿ, ರವೂಫ್ ಹಾಜಿ, ಬಶೀರ್ ಹಾಜಿ, ಕುಂಙಾಪ ಹಾಜಿ, ಎಂ.ಎಂ ಎಸ್ ಹುಸೇನ್, ವಿಖಾಯ ಕರೀಂ ಮುಸ್ಲಿಯಾರ್ ಮತ್ತಿತ್ತರರು ಹಾಜರಿದ್ದರು .