ನಾಯಕತ್ವ ಗುಣಗಳಿಂದ ವ್ಯಕ್ತಿಯ ವ್ಯಕಿತ್ವ ನಿರ್ಣಯವಾಗಲಿದೆ: ಚಿದಾನಂದ ಕುಮಾರ್, ವಿರಾಜಪೇಟೆ ಸ.ಪ.ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಸಮಾರಂಭ
ವಿರಾಜಪೇಟೆ:ವಿದ್ಯಾರ್ಥಿ ಜೀವನವು ಜೀವನದ ಅವಿಭಾಜ್ಯ ಅಂಗ ಎಂದು ಪರಿಗಣಿಸುವಂತಾಗಬೇಕು. ನಾಯಕತ್ವ ಗುಣ, ಮೌಲ್ಯಯುತವಾದ ಜೀವನ ಶೈಲಿ, ನಡೆತೆಯಿಂದಾಗಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕೊಡಗು ಜಿಲ್ಲೆ ಉಪ ನಿರ್ದೇಶಕರಾದ ಚಿದಾನಂದ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ಸರ್ಕಾರಿ ಪದವಿ ಪೂರ್ವ ಶಿಕ್ಷಣ ಕಾಲೇಜು ವಿರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ 2025-26 ನೇ ಸಾಲಿನ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೋವರ್ ಘಟಕ, ಮಾದಕ ವಸ್ತು ವಿರೋಧಿ ಘಟಕ ಹಾಗೂ ಮತದಾರರ ಸಾಕ್ಷರತಾ ಘಟಕಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿದಾನಂದ ಕುಮಾರ್ ಅವರು, ಸಮಾಜ ತಂತ್ರಜ್ಞಾನ ವಿಜ್ಞಾನಗಳ ಸಮ್ಮಿಲನದೊಂದಿಗೆ ನಾಗಲೋಟದಲ್ಲಿ ಸಂಚರಿಸುತ್ತಿದೆ. ಕಾಲಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಹೊಸ ಹೊಸ ಸಾಧನೆಯ ಗುರಿಯೊಂದಿಗೆ ಮುನ್ನಡೆಯಬೇಕು. ಕಾಲೇಜು ಘಟ್ಟದಲ್ಲಿ ವಿವಿಧ ಘಟಕಗಳನ್ನು ಸ್ಥಾಪನೆ ಮಾಡುತ್ತಾರೆ. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಪ್ರಜೆಗಳಾಗಿ ಗುರುತಿಸಿಕೊಳ್ಳಬೇಕು ಎನ್ನುವ ಮನೋಭಾವದಿಂದಾಗಿ ಘಟಕಗಳಲ್ಲಿ ಭಾಗಿಗಳಾಗಿ ನಾಯಕತ್ವದೊಂದಿಗೆ ಮೌಲ್ಯಗಳಿಗೆ ಬೆಲೆತೆತ್ತು, ಕಾಲೇಜು ವಿದ್ಯಾಬ್ಯಾಸಕ್ಕೆ ಗೌರವ ನೀಡಿ, ಉತ್ತಮ ಭವಿಷ್ಯ ನಿರ್ಮಾಣ ಮಾಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು .
ಸ.ಪ.ಪೂರ್ವ ಕಾಲೇಜು ನೆಲ್ಲಿಹುದಿಕೇರಿ ಪ್ರಾಂಶುಪಾಲರಾದ ಅಂಥೋನಿ ವಿವಿಯನ್ ಅಲ್ವಾರಿಸ್ ಅವರು ಮಾತನಾಡಿ, ವಿದ್ಯಾರ್ಥಿ ಸಂಘ ಕೇವಲ ಹುದ್ದೆಗಳ ವೇದಿಕೆ ಅಲ್ಲ. ಬದಲಿಗೆ ಇದು ವ್ಯಕ್ತಿತ್ವ ವಿಕಾಸ, ಹಾಗೂ ಸಮಾಜಮುಖಿ ಕಾರ್ಯಗಳ ಪಾಠಶಾಲೆ ಎಂದು ಹೇಳಿದರು. ಸ.ಪ.ಪೂರ್ವ ಕಾಲೇಜು ವಿರಾಜಪೇಟೆ ಅಭಿವೃದ್ದಿ ಸಮಿತಿಯ ಸದಸ್ಯರಾದ ಪಿ.ಎಸ್. ಮಚ್ಚಾಡೋ ಅವರು ಕಾಲೇಜು ಜೀವನದಲ್ಲಿ ಬೆಳೆದ ಪರಿಶ್ರಮ ಶಿಸ್ತು ಮತ್ತು ಸ್ನೇಹ ಭವಿಷ್ಯದ ಯಶಸ್ವಿನ ಗುಟ್ಟು ಎಂದು ವಿಧ್ಯಾರ್ಥಿಗಳಿಗೆ ಪ್ರೇರೆಣೆ ನೀಡಿದರು. ಸ.ಪ.ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾದ ಚಂದ್ರಶೇಖರ್ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಎನ್.ಕೆ ಅವರುಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸ.ಪ.ಪೂ. ಕಾಲೇಜು ವಿರಾಜಪೇಟೆ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ಚಿಲ್ಲವಂಡ ಕಾವೇರಪ್ಪ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿಣ ವಿದ್ಯಾರ್ಥಿಗಳು ಸುಶಿಕ್ಷಿತ ಸಮಾಜ ರೂಪಿಸುವಲ್ಲಿ ಸಕ್ರಿಯರಾಗಬೇಕು. ಕಾಲೇಜಿನ ಸರ್ವೋತೋಮುಖ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪನ್ಯಾಸಕರಾದ ದಮಯಂತಿ ಅವರು ವಿದ್ಯಾರ್ಥಿಗಳಿಗೆ ನೀಡುವ ಧತ್ತಿನಿಧಿ ಬಹುಮಾನಗಳ ಪಟ್ಟಿಯನ್ನು ವಾಚಿಸಿದರು.ಕಾಲೆಜಿನ ಅರ್ಥಶಾಸ್ತೃ ಉಪನ್ಯಾಸಕರಾದ ತಿಮ್ಮಯ್ಯ ಕೆ.ಎಸ್ ಅವರು ವಿವಿಧ ಘಟಕಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು.
ರಾಜ್ಯಶಾಸ್ತೃ ವಿಭಾಗದ ಉಪನ್ಯಾಸಕಿ ಪವಿತ್ರ ಅವರು ವಿದ್ಯಾರ್ಥಿ ಸಂಘದ ಚಟುವಟಿಕೆಗಳ ವರದಿ ವಾಚಿಸಿದರು. ಗಣಿತಶಾಸ್ತೃದ ಉಪನ್ಯಾಸಕರಾದ ರೈಮಂಡ್ ಎಸ್.ಪಿ ಅವರು ಸ್ವಾಗತಿಸಿ ಉಪನ್ಯಾಸಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಶಾಂತಿ ಹೆಚ್.ಎಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಕರು ಮತ್ತು ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರು ಹಾಗೂ ವಿವಿಧ ಘಟಕಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳು, ಕಾಲೇಜಿನ ವಿಧ್ಯಾಯರ್ಥಿಗಳು ಹಾಜರಿದ್ದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ